ಸೋನಲ್ - ತರುಣ್ ಸುಧೀರ್ ಮೊದಲ‌‌ ದೀಪಾವಳಿ ಹಬ್ಬದ ಸಂಭ್ರಮ ಬಲು ಜೋರು !

First Published | Nov 2, 2024, 1:41 PM IST

ಸ್ಯಾಂಡಲ್ ವುಡ್ ಜೋಡಿಗಳಾದ ಸೋನಲ್ ಮೊಂಥೆರೋ ಮತ್ತು ತರುಣ್ ಸುಧೀರ್ ಮದುವೆಯಾದ ನಂತರ ಮೊದಲ ದೀಪಾವಳಿ ಹಬ್ಬದ ಸಂಭ್ರಮದ ಫೋಟೊ ವೈರಲ್ ಆಗಿದೆ. 
 

ಸ್ಯಾಂಡಲ್ ವುಡ್ ನ ಹೊಸ ಜೋಡಿಗಳಾದ ಸೋನಲ್ ಮೊಂಥೆರೋ (Sonal Monteiro) ಮತ್ತು ತರುಣ್ ಸುಧೀರ್ ಮದುವೆಯಾದ ಬಳಿಕ ಮೊದಲ ಬಾರಿ ದೀಪಾವಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಸ್ವಾಗತಿಸಿದ್ದಾರೆ. ಸದ್ಯ ಫೋಟೊಗಳು ವೈರಲ್ ಆಗುತ್ತಿವೆ. 
 

ನಟಿ ಸೋನಲ್ ಮೊಂಥೇರೋ ಮತ್ತು ನಿರ್ದೇಶಕ ತರುಣ್ ಸುಧೀರ್ (Tarun Sudhir) ಇಬ್ಬರು ಕಳೆದ ಅಗಸ್ಟ್ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಮದುವೆಯಾದ ಬಳಿಕ ಮೊದಲ ದೀಪಾವಳಿ ಹಬ್ಬವನ್ನು ದೀಪಗಳ ಜೊತೆಗೆ ಮಧುರವಾಗಿಸ್ ಎಲೆಬ್ರೇಟ್ ಮಾಡುತ್ತಿದ್ದು, ಸುಂದರ ರೋಮ್ಯಾಂಟಿಕ್ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

Tap to resize

ತರುಣ್ ಸುಧೀರ್ ಮತ್ತು ಸೋನಲ್ ಇಬ್ಬರೂ ಕೂಡ ಈ ಫೋಟೊ ಶೂಟ್ ನಲ್ಲಿ ಟ್ರೆಡಿಶನಲ್ ಆಗಿ ರೆಡಿಯಾಗಿದ್ದಾರೆ. ಸೋನಲ್ ಬಿಳಿ ಬಣ್ಣದ ಗೋಲ್ಡನ್ ವರ್ಕ್ ಇರುವಂತಹ ಸೀರೆ ಹಾಗೂ ಬ್ಲೌಸ್ ನಲ್ಲಿ ಮಿಂಚಿದ್ರೆ, ತರುಣ್ ಕೂಡ ಬಿಳಿ ಬಣ್ಣದ ಕುರ್ತಾ ಪಜಾಮ, ಶಲ್ಯದೊಂದಿಗೆ ಮತ್ತೆ ವಧು-ವರರಂತೆ ಕಂಗೊಳಿಸುತ್ತಿದ್ದಾರೆ. 
 

ಸೋನಲ್ ಈ ಮುದ್ದಾದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಮಸ್ತ ನಾಡಿನ ಜನತೆಗೆ ದೀಪಗಳ ಹಬ್ಬ ದೀಪಾವಳಿ ಹಾಗೂ ಕನ್ನಡಿಗರ ಮನೆ ಹಬ್ಬ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ! ಎಂದು ಪೋಸ್ಟ್ ಮಾಡಿದ್ದು. ಈ ವಿಶೇಷ ಫೋಟೊ ಶೂಟ್ ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 
 

ತರುಣ್ ಸುಧೀರ್ ಮತ್ತು ಸೋನಲ್ ಮೂರು ತಿಂಗಳ ಹಿಂದೆ ಸಪ್ತಪದಿ ತುಳಿದಿದ್ದರು. ಮೊದಲಿಗೆ ಹಿಂದು ಸಂಪ್ರದಾಯದಂತೆ ವಿವಾಹವಾಗಿದ್ದ ಜೋಡಿ, ನಂತ್ರ ಕ್ರಿಶ್ಚಿಯನ್ ವೆಡ್ಡಿಂಗ್ ಆಗಿದ್ದರು. ಈ ಜೋಡಿ ಇತ್ತೀಚೆಗೆ ಹನಿಮೂನ್ ಗಾಗಿ ಮಾಲ್ಡೀವ್ಸ್ ಗೂ ಹೋಗಿ ಬಂದಿದ್ದರು. 
 

ತರುಣ್ ಸುಧೀರ್ ಹಾಗೂ ಸೋನಲ್ ಮದುವೆ ಬಳಿಕ ಸೆಲೆಬ್ರೇಟ್ ಮಾಡ್ತಿರೋ ಮೊದಲ ದೀಪಾವಳಿ ಹಬ್ಬವಾಗಿರೋದ್ರಿಂದ ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ. ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಈ ಮುದ್ದಾದ ಜೋಡಿಗೆ ಶುಭ ಹಾರೈಸಿದ್ದಾರೆ. 
 

Latest Videos

click me!