ಸಂದರ್ಶನ ಕೊಡುವ ಬದಲು ಸಿನಿಮಾ ತೋರಿಸ್ತೀವಿ: ನಟ ರಾಜ್ ಬಿ ಶೆಟ್ಟಿ

Published : Jul 24, 2025, 12:45 PM IST

ಜನರಿಗೆ ಸಿನಿಮಾ ತೋರಿಸಿದರೆ ಸಿನಿಮಾ ಕೆಟ್ಟದಾಗಿದೆ ಅಥವಾ ಸಿನಿಮಾ ಚೆನ್ನಾಗಿದೆ ಎಂಬ ಎರಡೇ ಉತ್ತರ ಬರಲು ಸಾಧ್ಯ ಎಂದರು ರಾಜ್ ಬಿ ಶೆಟ್ಟಿ.

PREV
15

‘ಹಳೆ ಪ್ರಮೋಷನಲ್​ ತಂತ್ರಗಳು ನನಗೆ ಇಷ್ಟ ಆಗೋದಿಲ್ಲ. ಸಂದರ್ಶನದಲ್ಲಿ ಕುಳಿತು ನಮ್ಮ ಸಿನಿಮಾ ಹೀಗಿದೆ, ಹಾಗಿದೆ, ಸಖತ್ತಾಗಿದೆ ಎಂದು ಹೇಳುವ ಬದಲು ಸಿನಿಮಾನೇ ತೋರಿಸಬಹುದಲ್ವಾ..’ ಇವು ರಾಜ್‌ ಬಿ ಶೆಟ್ಟಿ ಮಾತುಗಳು.

25

ಅವರು ನಿರ್ಮಿಸಿರುವ ಜೆಪಿ ತುಮಿನಾಡು ನಿರ್ದೇಶನದ ‘ಸು ಫ್ರಂ ಸೋ’ ಸಿನಿಮಾ ನಾಳೆ ಜು.25ಕ್ಕೆ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು, ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಪ್ರೀಮಿಯರ್‌ ಶೋ ಆಯೋಜಿಸಲಾಗಿದ್ದು, ಅದಕ್ಕೆ ಅತ್ಯುತ್ತಮ ಜನ ಸ್ಪಂದನೆ ಸಿಕ್ಕಿದೆ.

35

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ರಾಜ್‌ ಶೆಟ್ಟಿ, ಜನರಿಗೆ ಸಿನಿಮಾ ತೋರಿಸಿದರೆ ಸಿನಿಮಾ ಕೆಟ್ಟದಾಗಿದೆ ಅಥವಾ ಸಿನಿಮಾ ಚೆನ್ನಾಗಿದೆ ಎಂಬ ಎರಡೇ ಉತ್ತರ ಬರಲು ಸಾಧ್ಯ.

45

ಅವರು ಚೆನ್ನಾಗಿದೆ ಎಂದರೆ ಅದೇ ಪ್ರಮೋಷನ್. ಅದು ರಿಸ್ಕ್ ಎಂದು ಬೇರೆಯವರಿಗೆ ಅನಿಸಬಹುದು. ನನಗೆ ಹಾಗೆ ಅನಿಸಲ್ಲ. ನಾವು ಏನೇ ಮಾಡಿದರೂ ಜನರ ಮುಂದೆ ಇಡಲೇಬೇಕು.

55

ಒಂದೊಮ್ಮೆ ನಾವೀಗ ಮಾಡಿರುವ ತಂತ್ರ ವರ್ಕ್ ಆಯಿತು ಎಂದರೆ ಇಂಡಸ್ಟ್ರಿಯಲ್ಲಿ ಅದು ದೊಡ್ಡ ಬದಲಾವಣೆ ತಂದಂತೆ ಆಗುತ್ತದೆ. ಸಿನಿಮಾ ಮಾಡಿದವರಿಗೆ ಬಹಳ ಭಯ ಇದೆ. ಅದು ಹೋಗಬೇಕು ಎಂದೂ ಹೇಳಿದ್ದಾರೆ.

Read more Photos on
click me!

Recommended Stories