ಸಖತ್ತಾಗಿದೆ ಚಂದನವನದ ಸುಂದ್ರಿ ಶ್ರುತಿ ಹರಿಹರನ್ ಟ್ರೈಬಲ್ ಲುಕ್

First Published | Oct 11, 2024, 6:13 AM IST

ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುತ್ತಲೇ ಸದ್ದು ಮಾಡ್ತಿರೋ ಸ್ಯಾಂಡಲ್ ವುಡ್ ನಟಿ ಶ್ರುತಿ ಹರಿಹರನ್ ಇದೀಗ ಟ್ರೈಬಲ್ ಲುಕ್ ನಲ್ಲಿ ತುಂಬಾನೆ ಸುಂದರವಾಗಿ ಕಾಣಿಸ್ತಿದ್ದಾರೆ. 
 

ಲೂಸಿಯಾ ಸಿನಿಮಾ ಮೂಲಕ ಕನ್ನಡ ಸಿನಿಮಾಗೆ ಎಂಟ್ರಿ ಕೊಟ್ಟು, ಕನ್ನಡದ ಜೊತೆ ಮಲಯಾಲಂ, ಹಿಂದಿ, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ, ತಮ್ಮ ನೈಜ್ಯ ಅಭಿನಯದ ಮೂಲಕ ರಂಜಿಸುವ ನಟಿ ಶ್ರುತಿ ಹರಿಹರನ್ (Sruthi Hariharan). 
 

ಸ್ಯಾಂಡಲ್ ವುಡ್ ನ ಈ ಬೆಡಗಿ (Sandalwood Actress) ತಮ್ಮ ಸಿನಿಮಾಗಳಿಗಿಂತ ಹೆಚ್ಚು ಸದ್ದು ಮಾಡಿದ್ದು, ಮೀಟೂ ಪ್ರಕರಣಗಳಿಂದ ಹಾಗೂ ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಬಗ್ಗೆ ನೇರವಾಗಿ ಮಾತನಾಡಿ ಭಾರಿ ಸದ್ದು ಮಾಡಿದ್ದರು. 
 

Tap to resize

ಕೇರಳದಲ್ಲಿ ಸಿನಿಮಾ ತಾರೆಯರು ತಮಗಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಧನಿ ಎತ್ತುತ್ತಿರುವ ವಿಷ್ಯ ಹೆಚ್ಚು ಸೌಂಡ್ ಮಾಡುತ್ತಿರುವಾಗ ಇತ್ತೀಚೆಗೆ ಶ್ರುತಿ ಹರಿಹರನ್ ಕೂಡ ತಮಿಳು ಚಿತ್ರ ನಿರ್ಮಾಪಕರಿಂದ ತಾವು ಅನುಭವಿಸಿದ ಕರಾಳ ಅನುಭವವನ್ನು ಬಿಚ್ಚಿಟ್ಟು ಸುದ್ದಿಯಾಗಿದ್ದರು. 
 

ತಮಿಳು ಸಿನಿಮಾಗೆ ಆಯ್ಕೆಯಾಗಿದ್ದ ನಟಿಗೆ, ನಿರ್ಮಾಪಕರೊಬ್ಬರು ಆ ಸಿನಿಮಾದ ಐವರು ನಿರ್ಮಾಪಕರೊಂದಿಗೆ ಮಲಗೋದಕ್ಕೆ ಕರೆದಿದ್ದರಂತೆ, ಇದು ನಾಲ್ಕು ವರ್ಷಗಳ ಹಿಂದೆ ನಡೆದ ಸುದ್ದಿಯಾಗಿದ್ದು, ಆವಾಗ ಶ್ರುತಿ ಇಂತ ಕೆಟ್ಟ ಯೋಚನೆ ಇದ್ರೆ, ಕಾಲಲ್ಲಿದ್ದದ್ದು,ಕೈಗೆ ಬರುತ್ತೆ ಎಂದಿದ್ದರಂತೆ. 
 

ಅಷ್ಟೇ ಆಲ್ಲ ಕನ್ನಡ ಚಿತ್ರರಂಗದಲ್ಲೂ ಹೇಮಾ ಸಮಿತಿಯಂತಹ ಸಮಿತಿ ನಿರ್ಮಾಣವಾಗಬೇಕು ಅಂತಾನೂ ಬೇಡಿಕೆ ಇಟ್ಟಿದ್ದರು ಶ್ರುತಿ. ಇದೆಲ್ಲಾ ಸುದ್ದಿಗಳ ನಡುವೆ ಶ್ರುತಿಹರನ್ ಟ್ರೈಬಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ತುಂಬಾನೆ ಸ್ಟನ್ನಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. 
 

ಭಾರ್ಗವಿ ವಿಖ್ಯಾತ್ ನಡೆಸುತ್ತಿರುವಂತಹ ನವತಾರ್ (Navatar)ನಲ್ಲಿ ಶ್ರುತಿ ಹರಿಹರನ್ ಕೂಡ ಕಾಣಿಸಿಕೊಂಡಿದ್ದು, ಈ ಕಾನ್ಸೆಪ್ಟ್ ನಲ್ಲಿ ನಟಿ ಟ್ರೈಬಲ್ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಟ್ಯೂಬ್ ಬ್ಲೌಸ್ ರೀತಿ ಎದೆ ಮೇಲೆ ಬಟ್ಟೆ ಸುತ್ತಿದ್ದು, ಕಪ್ಪು ಬಣ್ಣದ ಸೀರಿಯನ್ನು ಧರಿಸಿದ್ದಾರೆ, ಇದಕ್ಕೆ ಮ್ಯಾಚ್ ಆಗುವಂತೆ ಮೆಟಲ್ ಜ್ಯುವೆಲ್ಲರಿ, ಬಳೆಗಳನ್ನ ಧರಿಸಿದ್ದಾರೆ. 
 

ಬುಡಕಟ್ಟು ಮಹಿಳೆಯರು (tribal women) ತಮ್ಮ ಸಮುದಾಯಗಳ ಸಂಸ್ಕೃತಿಯ ರಕ್ಷಕರು. ಅವರು ಪ್ರಾಚೀನ ಸಂಪ್ರದಾಯಗಳು, ಪುರಾಣಗಳು ಮತ್ತು ಪದ್ಧತಿಗಳನ್ನು ತಲೆಮಾರುಗಳ ಮೂಲಕ ರವಾನಿಸುತ್ತಾರೆ, ಅವರ ಅನನ್ಯ ಗುರುತಿನ ನಿರಂತರತೆಯನ್ನು ಖಚಿತಪಡಿಸುತ್ತಾರೆ ಎಂದು ಕ್ಯಾಪ್ಶನ್ ಹಾಕಿದ್ದು, ಶ್ರುತಿ ಹರಿಹರನ್ ಅಂತೂ ತುಂಬಾನೆ ಸ್ಟನ್ನಿಂಗ್ ಆಗಿ ಕಾಣಿಸುತ್ತಿದ್ದಾರೆ. ಶ್ರುತಿಯ ಈ ಲುಕ್ ನ್ನು ಸಿನಿಮಾ ತಾರೆಯರು, ಜನರು ಮೆಚ್ಚಿಕೊಂಡಿದ್ದಾರೆ. 
 

Latest Videos

click me!