ಹಬ್ಬದ ಸಂಭ್ರಮದಲ್ಲಿ ಸೀರೆಯಲ್ಲಿ ಮಿಂಚಿದ ಸಿಂಗಾರ ಸಿರಿ ಸಪ್ತಮಿ ಗೌಡ ಅಂದಕ್ಕೆ ಅಭಿಮಾನಿಗಳು ಫಿದಾ

First Published | Oct 8, 2024, 4:17 PM IST

ದಸರಾ ಹಬ್ಬದ ಹಿನ್ನೆಲೆಯಲ್ಲಿ ಕಾಂತಾರ ಬೆಡಗಿ ಸಪ್ತಮಿ ಗೌಡ ಮೈಸೂರಿಗೆ ತೆರಳಿದ್ದು, ಸೀರೆಯುಟ್ಟು ಮುದ್ದಾಗಿ ಕಾಣಿಸುತ್ತಿದ್ದಾರೆ. ಸುಂದರ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ನಾಡ ಹಬ್ಬ ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ತೆರಳಿರುವ ಸ್ಯಾಂಡಲ್ ವುಡ್ ಬೆಡಗಿ (sandalwood actress) ಆಕ್ವಾ ಬೇಬಿ ಸಪ್ತಮಿ ಗೌಡ, ಸುಂದರವಾದ ನೇರಳೆ ಬಣ್ಣದ ಸೀರೆಯಲ್ಲಿ ಸಖತ್ ಆಗಿ ಮಿಂಚುತ್ತಿದ್ದಾರೆ. ಕಾಂತಾರ ಬೆಡಗಿಯ ಅಂದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. 
 

ಪಿಂಕ್ ಬಣ್ಣದ ಬಾರ್ಡರ್ ಇರುವಂತಹ ನೇರಳೆ ಬಣ್ಣದ ಕಾಟಲ್ ಸಿಲ್ಕ್ ಸೀರೆಯುಟ್ಟಿರುವ ಸಿಂಗಾರ ಸಿರಿಯೇ ಎನ್ನುವ ಹಾಡಿನ ಮೂಲಕ ಮೋಡಿ ಮಾಡಿದ ಬೆಡಗಿ ಅದಕ್ಕೆ ಮ್ಯಾಚ್ ಆಗುವ ಬಳೆಗಳು, ಆಂಟಿಕ್ ನೆಕ್ಲೆಸ್, ಉಂಗುರ ಮತ್ತು ಕಿವಿಯೋಲೆ ಧರಿಸಿದ್ದಾರೆ. 
 

Tap to resize

ಸಪ್ತಮಿ ಗೌಡ (Sapthami Gowda) ಈ ಟ್ರೆಡಿಶನಲ್ ಲುಕ್ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದು, ಸಿಂಗಾರ ಸಿರಿಯೇ, ಮೂಗುತಿ ಸುಂದರಿ, ಯುವರಾಣಿ, ಕಾಂತಾರ ಬ್ಯೂಟಿ ಯಾವಾಗ್ಲೂ ಚೆಂದಾನೆ ಎಂದು ಕಾಮೆಂಟ್ ಮಾಡಿದ್ದಾರೆ. 
 

ಯುವಕರಂತೂ ಸಪ್ತಮಿ ಅಂದಕ್ಕೆ ಫಿದಾ ಆಗಿದ್ದು, ದೇವತೆ, ಅದ್ಭುತವಾಗಿ ಕಾಣಿಸ್ತಿದ್ದೀರಾ, ನಮ್ಮ ದೃಷ್ಟಿನೇ ತಾಗಬಹುದು ಎಂದೆಲ್ಲಾ ಹೇಳಿದ್ದು, ಜೊತೆಗೆ ಹಾರ್ಟ್ ಇಮೋಜಿಗಳ ಸುರಿಮಳೆ ಸುರಿಸಿದ್ದಾರೆ. 
 

ಸಪ್ತಮಿ ಗೌಡ ಸ್ವಿಮ್ಮರ್, ಹಾಗಾಗಿ ಅವರ ಹೈಟ್ ವೈಟ್ ಬಗ್ಗೆ ಎರಡು ಮಾತೇ ಇಲ್ಲ. ಅದಕ್ಕೆ ಸರಿಯಾದ ಈ ಬಾರಿ ಅಂದವಾದ ಸೀರೆಯುಟ್ಟು, ಹೆಚ್ಚು ಮೇಕಪ್ ಇಲ್ಲದೇ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಹುಡುಗರ ಹೃದಯವನ್ನ ಕದ್ದೇ ಬಿಟ್ಟಿದ್ದಾರೆ ಬೆಡಗಿ. 
 

ಸೋಶಿಯಲ್ ಮೀಡಿಯಾದಲ್ಲಿ (Social media) ಆಕ್ಟೀವ್ ಆಗಿರುವ ಸಪ್ತಮಿ ಗೌಡ, ಕಳೆದ ಒಂದು ತಿಂಗಳಿನಿಂದ ವಿದೇಶದಲ್ಲಿ ಎಂಜಾಯ್ ಮಾಡ್ತಿದ್ರು, ಕ್ಯಾಲಿಫೋರ್ನಿಯಾ, ಯೋಸೆಮಿಟೆ, ನ್ಯೂಯಾರ್ಕ್ ಹೀಗೆ ಹಲವಾರು ತಾಣಗಳಿಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದು, ಫೋಟೊಗಳನ್ನು ಶೇರ್ ಮಾಡೊ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿದ್ದರು. 
 

ಸಿನಿಮಾ ವಿಚಾರಕ್ಕೆ ಬಂದ್ರೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟಿಸಿದ್ದರೂ ಸಪ್ತಮಿಗೆ ನೇಮ್ ಆಂಡ್ ಫೇಮ್ ತಂದುಕೊಟ್ಟ ಪಾತ್ರ ಅಂದ್ರೆ ಕಾಂತಾರ ಸಿನಿಮಾದ ಲೀಲಾ ಪಾತ್ರ. ಯುವ ಸಿನಿಮಾದಲ್ಲೂ ಇವರ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ವ್ಯಾಕ್ಸಿನ್ ವಾರ್ ಮೂಲಕ ಬಾಲಿವುಡ್ ಗೂ ಹಾರಿದ್ದರು. ಇದೀಗ ಒಂದು ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. 
 

Latest Videos

click me!