ನೀ ನಂಗೆ ಅಲ್ಲವಾ ಎನ್ನುತ್ತಲೇ… ಸ್ಪೆಷಲ್ ಫೋಟೋ ಜೊತೆ ಆತ್ಮ ಸಂಗಾತಿ ಬಗ್ಗೆ ತಿಳಿಸಿದ ಶ್ರುತಿ ಹರಿಹರನ್!

First Published | Jul 30, 2024, 8:22 PM IST

ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ ಶ್ರುತಿ ಹರಿಹರನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೊಟೋಗಳನ್ನು ಹಂಚಿಕೊಂಡು ಫೀಮೇಲ್ ಫ್ರೆಂಡ್’ಶಿಪ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 
 

ಚಂದನವನದ ಮೂಗುತಿ ಸುಂದರಿ ಶ್ರುತಿ ಹರಿಹರನ್ (Sruthi Hariharan) ಸೋಶಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್. ಹೆಚ್ಚಾಗಿ ತಮ್ಮ ವರ್ಕ್ ಔಟ್, ಫೋಟೋ ಶೂಟ್‌ಗಳಿಂದಲೇ ಸುದ್ದಿ ಮಾಡ್ತಿದ್ದ ಚೆಲುವೆ ಇವತ್ತು ವಿಶೇಷ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಇದು ಎಲ್ಲರ ಗಮನ ಸೆಳೆದಿದೆ. 
 

ನಟಿ ಶ್ರುತಿ ಹರಿಹರನ್ ತಮ್ಮ ಜೀವನದಲ್ಲಿ ಸ್ನೇಹದ ಮಹತ್ವ ಮತ್ತು ಸ್ನೇಹಿತೆಯರ ಮಹತ್ವ ಮತ್ತು ಸ್ನೇಹಿತೆರೆಯ ಪ್ರೀತಿಯ ಬಗ್ಗೆ ವಿಶೇಷ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಸ್ನೇಹಿತೆಯಾದ ಶಾಶ್ವತಿ ಚಂದ್ರ ಶೇಖರ್ (Shashwati Chandrashekar) ಜೊತೆಗಿನ ಒಂದಷ್ಟು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
 

Tap to resize

ಶ್ರುತಿ ಮರೂನ್ ಬಣ್ಣದ ಕಾಣನ್ ಸೀರೆ ಮತ್ತು ಸ್ನೇಹಿತೆ ನೀಲಿ ಬಣ್ಣದ ಸೀರೆ ಧರಿಸಿದ್ದು, ಇಬ್ಬರೂ ಜೊತೆಯಾಗಿ ಬೇರೆ ಬೇರೆ ರೀತಿಯಲ್ಲಿ ಪೋಸ್ ನೀಡಿದ್ದ ಫೋಟೋಗಳನ್ನ ಸಂಚಿತ್ ಹೆಗ್ಡೆ ಹಾಡಿರುವ ಏನಂದರೂನು ಹಾಗೆ ನೀ ನಂಗೆ ಅಲ್ಲವಾ ಎನ್ನುವ ಹಾಡಿನ ಜೊತೆ ಪೋಸ್ಟ್ ಮಾಡಿದ್ದು, ತಮ್ಮ ಜೀವನದ ಎಲ್ಲಾ ಸ್ನೇಹಿತೆಯರ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. 
 

ಫೀಮೇಲ್ ಫ್ರೆಂಡ್ ಶಿಪ್ (female friendship) ಎಲ್ಲಾ ಬಂಧಗಳಿಗಿಂತ ತುಂಬಾನೆ ಬಲವಾದ ಮತ್ತು ಶಾಶ್ವತವಾದ ಸ್ನೇಹ ಅನ್ನೊದನ್ನ ನಾನು ನಂಬುತ್ತೇನೆ. ನನ್ನ ಹತ್ತಿರದ ಸ್ನೇಹಿತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಅವರಲ್ಲಿ ಪ್ರತಿಯೊಬ್ಬರೂ ನನ್ನ ಜೀವನದಲ್ಲಿ ಏನನ್ನ ನನಗೆ ನೀಡಿದ್ದಾರೋ ಅದಕ್ಕೆಲ್ಲಾ ನಾನು ಕೃತಜ್ಞಳಾಗಿದ್ದೇನೆ ಎಂದಿದ್ದಾರೆ. 
 

ಇಷ್ಟು ಸ್ನೇಹಿತೆಯರಲ್ಲಿ ಒಬ್ಬರು ನನ್ನ ನೈತಿಕ ದಿಕ್ಸೂಚಿಯಾದರೆ (moral compass), ಇನ್ನೊಬ್ಬರು ನನ್ನ ಕನ್ನಡಿ. ಕೆಲವರು ಆಹಾರ ಮತ್ತು ಜೀವನವನ್ನು ಎಕ್ಸ್ ಪ್ಲೋರ್ ಮಾಡೋದರಲ್ಲಿ ನನ್ನ ಜೊತೆಯಾದ್ರೆ, ಮತ್ತೊಬ್ಬರು ನನ್ನ ಪಾರ್ಟ್ನರ್,  ಇನ್ನೊಬ್ಬರು ನನ್ನ ಸೋಲ್ ಮೆಟ್ ಎಂದು ಬರೆದುಕೊಂಡಿದ್ದಾರೆ.
 

ಅಷ್ಟೇ ಅಲ್ಲ, ಈ ಎಲ್ಲಾ ಸ್ನೇಹಿತೆಯರು ನಾನು ಇವತ್ತು ಏನಾಗಿದ್ದೇನೋ, ಹೇಗಿದ್ದೀನೋ ಹಾಗೆ ಅವರು ನನ್ನನ್ನ ಇಷ್ಟಪಡ್ತಾರೆ, ಹಾಗೆಯೇ ನಾನು ಕೂಡ ಅವರನ್ನು ಒಂದೇ ರೀತಿಯಲ್ಲಿ ಪ್ರೀತಿಸುತ್ತೇನೆ.  ಅಂತಹ ಒಂದು ಸ್ನೇಹದ ರೀತಿ ಇಲ್ಲಿದೆ ಎನ್ನುತ್ತಾ, ತಮ್ಮ ಸ್ನೇಹಿತೆ ಜೊತೆಗಿನ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಸ್ನೇಹಲೋಕ ಎಷ್ಟೊಂದು ಸುಂದರವಾಗಿ ಅನ್ನೋದನ್ನ ತೋರಿಸಿದ್ದಾರೆ.  
 

ಇದ ಜೊತೆಗೆ ನಟಿ ನಿಮ್ಮ ಜೀವನದಲ್ಲೂ ಸಹ ರಿಯಲ್ ಫ್ರೆಂಡ್ ಎಂದು ಕರೆಯಬಹುದಾದ ಅಂತಹ ಕನಿಷ್ಠ ಒಬ್ಬ ಸ್ನೇಹಿತೆಯನ್ನು ನೀವು ಹೊಂದಿದ್ದೀರಿ ಎಂದು ಕೊಳ್ಳುತ್ತೇನೆ ಎಂದು ತಮ್ಮ ಅಭಿಮಾನಿಗಳಿಗೂ ಕೇಳಿದ್ದಾರೆ. 
 

ಇನ್ನು ಶ್ರುತಿ ಹರಿಹರನ್ ತಮ್ಮ ಜೊತೆ ಫೋಟೋಗೆ ಪೋಸ್ ನೀಡಿದ ತಮ್ಮ ಗೆಳತಿಯಾದ ಶಾಶ್ವತಿ ಚಂದ್ರಶೇಖರ್ ಅವರಿಗೂ ಥ್ಯಾಂಕ್ಯೂ ಮತ್ತು , ಲವ್ ಯೂ ಅಂತ ಹೇಳಿದ್ದು, ನಿನ್ನ ಕ್ರಿಯೇಟಿವಿಟಿ ಮತ್ತು ಗುಣ ಯಾವಾಗ್ಲೂ ನನ್ನನ್ನ ಇನ್’ಸ್ಪೈರ್ ಮಾಡುತ್ತಲೇ ಇರುತ್ತೆ ಎಂದಿದ್ದಾರೆ. 

Latest Videos

click me!