ಹಸಿರು ಸೀರೆ, ಗುಲಾಬಿ ಮುಡಿದು ಕಾಯ್ತಿರೋ ರಶ್ಮಿಕಾ ಮಂದಣ್ಣ ಕಣ್ಣು ಹೊಡೆದದ್ದು ಯಾರಿಗೆ?

First Published | Jul 30, 2024, 7:52 AM IST

ನ್ಯಾಷನಲ್ ಕ್ರಶ್ ಎಂದೇ ಕ್ಯಾತಿ ಪಡೆದಿರೋ ರಶ್ಮಿಕಾ ಮಂದಣ್ಣ ಸೋಶಿಯಲ್ ಮೀಡೀಯಾದಲ್ಲಿ ಹಸಿರು ಸೀರೆಯುಟ್ಟ ಫೋಟೋಗಳನ್ನು ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ಕ್ಯೂಟ್ ಆಗಿ ಕಾಣಿಸ್ತಿದ್ದಾರೆ. 
 

ಸದ್ಯಕ್ಕಂತೂ ಪ್ಯಾನ್ ಇಂಡಿಯಾ ನಟಿಯಾಗಿರುವ ರಶ್ಮಿಕಾ ಮಂದಣ್ಣ (Rashmika Mandanna) ಕ್ರೇಜ್ ಕಿರಿಕ್ ಪಾರ್ಟಿ ಸಿನಿಮಾದಿಂದ ಆರಂಭವಾಗಿ ಇಂದಿನವರೆಗೂ ಹೆಚ್ಚುತ್ತಲೇ ಹೋಗುತ್ತಿದೆ. ಕರ್ನಾಟಕ ಕ್ರಶ್ ಆಗಿದ್ದೋರು ಈವಾಗ ನ್ಯಾಷನಲ್ ಕ್ರಶ್ ಆಗಿದ್ದಾರೆ. 
 

ಕನ್ನಡ ಸಿನಿಮಾದಿಂದ ತಮ್ಮ ಜರ್ನಿ ಶುರು ಮಾಡಿದ ನಟಿ ರಶ್ಮಿಕಾ ತಮಿಳು, ತೆಲುಗಿನಲ್ಲಿ ಸಿಕ್ಕಾಪಟ್ಟೆ ಯಶಸ್ಸು ಗಳಿಸಿದರು, ಇದಾದ ಬಳಿಕ ಬಾಲಿವುಡ್ ಗೂ ತೆರಳಿ ಒಂದೆರಡು ಚಿತ್ರಗಳನ್ನ ಕೂಡ ಮಾಡ್ಕೊಂಡು ಬಂದ್ರು. ಇನ್ನು ಬೇಕಾದಷ್ಟು ಸಿನಿಮಾಗಳು ಸಹ ಇವರ ಕೈಯಲ್ಲಿದೆ. 
 

Tap to resize

ತಮ್ಮ ನಟನೆ, ಅಂದ ಚೆಂದದಿಂದ ನ್ಯಾಷನಲ್ ಕ್ರಶ್ (National crush) ಪಟ್ಟ ಪಡೆದಿರೋ ರಶ್ಮಿಕಾ ಇತ್ತೀಚೆಗೆ ಯಾವುದೋ ಕಾರ್ಯಕ್ರಮಕ್ಕಾಗಿ ದೇವರನಾಡು ಕೇರಳಕ್ಕೆ ತೆರಳಿದ್ದರು. ಒಂದೇ ಒಂದು ಮಲಯಾಲಂ ಸಿನಿಮಾ ಮಾಡದೇ ಇದ್ದರೂ ಕೇರಳದಲ್ಲಿ ರಶ್ಮಿಕಾ ಕ್ರೇಜ್ ಹೇಗಿದೆ ಅನ್ನೋದನ್ನ ಅಲ್ಲಿ ಉಂಟಾಗ ನೂಕು ನುಗ್ಗಲು ಹೇಳುತ್ತಿತ್ತು. 
 

ರಶ್ಮಿಕಾ ಮಂದಣ್ಣ ಕೇರಳಕ್ಕೆ ಒಂದು ಆಭರಣ ಮಳಿಗೆಯ ಉದ್ಘಾಟನೆಗೆ ತೆರಳಿದ್ದರು. ಕೇರಳದಲ್ಲೂ ಅಪಾರ ಅಭಿಮಾನಿಗಳನ್ನು ಪಡೆದಿರುವ ರಶ್ಮಿಕಾ ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದು, ಅಲ್ಲಿ ನೂಕು ನುಗ್ಗಲಾದ ಘಟನೆ ನಡೆದಿದೆ. ಅಷ್ಟೇ ಅಲ್ಲ ರಶ್ಮಿಕಾ ಅಭಿಮಾನಿಗಳ ಮುಂದೆ ತಮ್ಮ ಬೇರೆ ಬೇರೆ ಆಕ್ಷನ್ ಗಳ ಮೂಲಕ ಮುದ್ದಾಗಿ ಪೋಸ್ ನೀಡಿದ್ದರು. 
 

ಈ ಕಾರ್ಯಕ್ರಮದ ಒಂದಷ್ಟು ಫೋಟೋಗಳನ್ನು ರಶ್ಮಿಕಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಗೋಲ್ಡನ್ ಬಣ್ಣದ ಎಂಬ್ರಾಯಿಡರಿ ಇರುವಂತಹ ಕಡು ಹಸಿರು ಬಣ್ಣದ ತೋರಣಿ ಬ್ರ್ಯಾಂಡ್ ಸೀರೆ ಮತ್ತು ಅದಕ್ಕೆ ಮ್ಯಾಚಿಂಗ್ ಆಗುವ ಬ್ಲೌಸ್ ಧರಿಸಿ ನಟಿ ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದರು. 
 

ಹಸಿರು ಸೀರೆಗೆ ಮ್ಯಾಚ್ ಆಗುವಂತೆ, ಕೆಂಪು ಬಣ್ಣದ ರೋಸ್ ಗಳನ್ನ ಬನ್ ಹೇರ್ ಸ್ಟೈಲ್ ಮೇಲೆ ಮುಡಿದಿದ್ದು, ಅದಕ್ಕೆ ಮ್ಯಾಚ್ ಆಗುವ ಗೋಲ್ಡನ್ ಹ್ಯಾಂಗಿಂಗ್ ಇಯರಿಂಗ್ ಮತ್ತು ಚೈನ್ ಧರಿಸಿದ್ದಾರೆ. ಜೊತೆಗೆ ನಟಿ ತಮ್ಮ ಹೆಸರಿಸಿನ ಇನಿಷಿಯಲ್ RM ಇರುವಂತಹ ಪೋಟ್ಲಿ ಬ್ಯಾಗ್ ಕೂಡ ಧರಿಸಿದ್ದು, ಇವರ ಬ್ಯೂಟಿಫುಲ್ ಲುಕ್ ಗೆ ಜನ ಮನ ಸೋತಿದ್ದಾರೆ. 
 

ಫೋಟೋಗೆ ವಿವಿಧ ರೀತಿಯ ಕಾಮೆಂಟ್ ಗಳು ಬಂದಿದ್ದು, ಹಾಟ್ನೆಸ್ ಹೆಚ್ಚಾಗಿದೆ. ಕ್ರಶ್ ಅನ್ನೋದು ಇದಕ್ಕೆ ನೋಡಿ, ನೀನು ಸೀರೆಯುಟ್ಟರೆ ನನ್ನ ಹೃದಯ ಕರಗಿ ಹೋಗುತ್ತೆ, ಡ್ರೀಮ್ ಗರ್ಲ್, ಬ್ಯೂಟಿಫುಲ್, ಯಾವಾಗ್ಲೂ ನೀವೆ ನಮ್ಮ  ಕ್ರಶ್ ಎಂದು ಸಹ ಹೇಳಿದ್ದಾರೆ. 
 

Latest Videos

click me!