ಬೆಸ್ಟ್ ಫ್ರೆಂಡ್ ಕೀರ್ತಿ ಸುರೇಶ್ ಮದುವೆಯಲ್ಲಿ ಸ್ಯಾಂಡಲ್’ವುಡ್ ನಟಿ ಸೋನು ಗೌಡ

First Published | Dec 25, 2024, 1:47 PM IST

ಸ್ಯಾಂಡಲ್ ವುಡ್ ನಟಿ ಸೋನು ಗೌಡ ಬಹು ಭಾಷಾ ತಾರೆ ಕೀರ್ತಿ ಸುರೇಶ್ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದು, ಇದೀಗ ವಧು ವರರ ಜೊತೆಗಿನ ಸೋನು ಗೌಡ ಫೋಟೊ ವೈರಲ್ ಆಗಿದೆ. 

ತಮಿಳು, ತೆಲುಗು ಹಾಗೂ ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ ಕೀರ್ತಿ ಸುರೇಶ್ (Keerthy Suresh) ತಮ್ಮ ಬಹುಕಾಲದ ಗೆಳೆಯ ಆಂಟನಿ ಥಟ್ಟಿಲ್ ಗೋವಾದಲ್ಲಿ ಡಿಸೆಂಬರ್ 12 ರಂದು ಮದುವೆಯಾದರು. ಈ ಅದ್ಧೂರಿ ಮದುವೆ ಸಮಾರಂಭದಲ್ಲಿ ಬೇರೆ ಬೇರೆ ಸಿನಿಮಾ ಇಂಡಷ್ಟ್ರಿ ತಾರೆಯರು ಭಾಗಿಯಾಗಿದ್ದರು. ಕನ್ನಡದ ನಟಿ ಕೂಡ ಭಾಗಿಯಾದ್ದರು ಅನ್ನೋದು ಈಗ ರಿವೀಲ್ ಆಗಿದೆ. 
 

ಹೌದು, ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಗುರುತಿಸಿಕೊಂಡಿರುವ ನಟಿ ಸೋನು ಗೌಡ (Sonu Gowda), ತಮ್ಮ ಸ್ನೇಹಿತೆಯರ ಜೊತೆ ಗೋವಾದಲ್ಲಿ ನಡೆದ ನಟಿ ಕೀರ್ತಿ ಸುರೇಶ್ ವಿವಾಹ ಸಮಾರಂಭದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದರು. 
 

Tap to resize

ಇದೀಗ ನಟಿ ಸೋಶಿಯಲ್ ಮಿಡಿಯಾದಲ್ಲಿ ಕೀರ್ತಿ ಸುರೇಶ್ ಮದುವೆಯಲ್ಲಿ ನವ ವಧು ವರರ ಜೊತೆಗೆ ತೆಗೆಸಿಕೊಂಡಂತಹ ಫೋಟೊಗಳನ್ನು ಶೇರ್ ಮಾಡಿ ವಿಶ್ ಮಾಡಿದ್ದಾರೆ. ಅಂದ ಹಾಗೇ ಕೀರ್ತಿ ಸುರೇಶ್ ಮತ್ತು ಸೋನು ಗೌಡ ಹಲವಾರು ವರ್ಷಗಳಿಂದ ಸ್ನೇಹಿತರಾಗಿದ್ದು, ಹಾಗಾಗಿಯೇ ಕೀರ್ತಿ ಮದುವೆಯಲ್ಲಿ ಸೋನು ಭಾಗಿಯಾಗಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಶೇರ್ ಮಾಡಿರುವ ಸೋನು ಇಬ್ಬರು beautiful souls ಒಟ್ಟಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸಿದವು, ಇದಕ್ಕೆ ಸಾಕ್ಷಿಯಾಗುವುದು ತುಂಬಾ ಖುಷಿಯ ವಿಚಾರ. ಈ ಸುಂದರ ದಂಪತಿಗೆ ಮತ್ತೊಮ್ಮೆ ಹ್ಯಾಪಿ ಮ್ಯಾರೀಡ್ ಲೈಫ್, ನಿಮ್ಮ ಜೀವನ ಸುಂದರವಾಗಿರಲಿ ಎಂದು ಹಾರೈಸಿದ್ದಾರೆ. 
 

ಕನ್ನಡತಿ ಸೋನು ಗೌಡ ಹಾಗೂ ಬಹುಭಾಷಾ ನಟಿ ಕೀರ್ತಿ ಸುರೇಶ್ ಗೆ ಹೇಗೆ ಪರಿಚಯ ಅನ್ನೋದನ್ನು ಈ ಹಿಂದೆಯೇ ಸೋನು ಗೌಡ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಕಾಮನ್ ಫ್ರೆಂಡ್ ಮೂಲಕ ಕೀರ್ತಿ ಸುರೇಶ್ ಪರಿಚಯವಾಗಿದ್ದು, ಇದೀಗ ಸೋನು ಅವರಿಗೂ ಕೀರ್ತಿ ಬೆಸ್ಟ್ ಫ್ರೆಂಡ್ ಆಗಿದ್ದಾರೆ. 
 

ಈ ಹಿಂದೆ ಕೀರ್ತಿ ಸುರೇಶ್ ಜೊತೆ ಸೋನು ಗೌಡ, ಕೇರಳದಲ್ಲಿ ಪ್ರವಾಸ  (Kerala tour) ಮಾಡಿದ್ದು ಇದೆ. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗಿದ್ದವು. ಆ ಸಂದರ್ಭದಲ್ಲಿ ಸೋನು ಗೌಡ ಸಂದರ್ಶನದಲ್ಲಿ ತಮ್ಮ ಫ್ರೆಂಡ್ ಶಿಪ್ (friendship)ಬಗ್ಗೆ ತಿಳಿಸಿದ್ದರು. 
 

ಸಂದರ್ಶನದಲ್ಲಿ ಸೋನು ಗೌಡ, ನಾವು ಫೋನ್ ನಲ್ಲೂ ಮಾತನಾಡುತ್ತೇವೆ, ಆದರೆ ಸಿನಿಮಾ ಬಗ್ಗೆ ಮಾತನಾಡೋದಿಲ್ಲ, ಕೀರ್ತಿ ತುಂಬಾ ಫುಡ್ಡಿ ಅಂದರೆ ಆಹಾರ ಪ್ರಿಯೆ. ಹಾಗಾಗಿ ಆಹಾರದ ವಿಚಾರವಾಗಿ ಹೆಚ್ಚಾಗಿ ಮಾತನಾಡುತ್ತೇವೆ ಎಂದಿದ್ದರು. 
 

ಇನ್ನು ಇಲ್ಲಿವರೆಗೆ ಕೀರ್ತಿ ಸುರೇಶ್ ಜೊತೆಗಿನ ಫೋಟೊಗಳನ್ನು ಹೆಚ್ಚಾಗಿ ಸೋನು ಗೌಡ ಶೇರ್ ಮಾಡಿರಲಿಲ್ಲ, ನನಗೆ ನಮ್ಮ ಫ್ರೆಂಡ್ ಶಿಪ್ ಎಲ್ಲರ ಮುಂದೆ ತೋರಿಸದೇ, ಜೀವನಪರ್ಯಂತ ಮುಂದುವರೆಯಬೇಕು ಅನ್ನೋದು ನನ್ನ ಆಸೆ, ಹಾಗಾಗಿ ಕೀರ್ತಿ ಸುರೇಶ್ ಜೊತೆಗಿನ ಫೋಟೊಗಳನ್ನು ಸೋನು ಗೌಡ ಹಂಚಿಕೊಳ್ಳುತ್ತಿರಲಿಲ್ಲವಂತೆ. 
 

Latest Videos

click me!