ಕೈಯಲ್ಲಿ ಕಮಲ, ಕಣ್ಣಲ್ಲಿ ಕಾತುರ.. 'ಯುವ' ಚೆಲುವೆಗೆ ರಾಧೆ ಎಲ್ಲಿ ನಮ್ಮ ಕಳ್ಳ ಕೃಷ್ಣ…. ಎಂದ ನೆಟ್ಟಿಗರು

First Published | Aug 30, 2024, 6:21 AM IST

ಕಾಂತಾರಾ ಚೆಲುವೆ ಸಪ್ತಮಿ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೊಗಳನ್ನ ಹಂಚಿಕೊಂಡಿದ್ದು, ಸೀರೆಯಲ್ಲಿ ಸಪ್ತಮಿ ಮುದ್ದಾಗಿ ಲುಕ್ ನೋಡಿ ಅಭಿಮಾನಿಗಳು ರಾಧೆ ಅಂತಿದ್ದಾರೆ. 
 

Actress Sapthami Gowda stuns in saree look pav

ಕಾಂತಾರ ಸಿನಿಮಾದಲ್ಲಿ ಲೀಲಾ ಆಗಿ ಜನಪ್ರಿಯತೆ ಪಡೆದ ನಟಿ ಸಪ್ತಮಿ ಗೌಡ (Sapthami Gowda), ಸ್ವಲ್ಪ ಸಮಯದ ಹಿಂದೆ ಕೆಲವೊಂದು ಗಾಸಿಪ್ ಗಳಿಗೆ ಆಹಾರವಾಗಿದ್ದರು, ಆದರೆ ಈಗ ಮತ್ತೆ ಎದ್ದು ನಿಂತಿರುವ ಸಪ್ತಮಿ ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. 
 

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಕಾಂತಾರ ಚೆಲುವೆ, ಬ್ಲೌಸ್ ಇಲ್ಲದೇ, ಆದರೆ ಎಲ್ಲೂ ಅತಿರೇಕವಾಗಿ ಕಾಣಿಸದೇ ಸುಂದರವಾಗಿ ಸೀರೆ ಉಟ್ಟಿರುವ ಸಪ್ತಮಿ ಪೋಸ್ ನೀಡಿದ್ದು, ನಟಿಯ ಈ ಸುಂದರ ಲುಕ್ ಗೆ ಅಭಿಮಾನಿಗಳು ಮನ ಸೋತಿದ್ದಾರೆ. 
 

Tap to resize

ಒಂದು ಕೈಯಲ್ಲಿ ತಾವರೆ ಹೂವು, ಕಣ್ಣಲ್ಲಿ ಯಾರನ್ನೋ ಕಾಯುವ ಕಾತರ, ನೇರಳ ಬಣ್ಣದ ಸೀರೆಯನ್ನು ವಿಭಿನ್ನವಾಗಿ ಉಟ್ಟು, ಸೀರೆಯನ್ನೇ ಬ್ಲೌಸ್ ಮಾಡ್ಕೊಂಡು ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಫೋಟೊಗಳನ್ನ ನೋಡಿ ಅಭಿಮಾನಿಗಳು ಲೀಲಾಳೋ ಅಥವಾ ರಾಧೆಯೋ ಎಂದು ಕೇಳಿದ್ದಾರೆ. 
 

ಹೆಚ್ಚಿನ ಜನರು ಫೋಟೊಕ್ಕೆ ಕೃಷ್ಣ ಎಲ್ಲಿದ್ದಾನೆ? ಮುದ್ದು ರಾಧೆ, ಗಾರ್ಜಿಯಸ್, ಬ್ಯೂಟಿಫುಲ್, ತುಂಬಾನೆ ಸುಂದರವಾಗಿ ಕಾಣಿಸ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಸಪ್ತಮಿ ಈ ಫೋಟೊ ಶೂಟ್ ಮಾಡಿಸಿದ್ದೇ ಎಲೈಟ್ ಲೈಫ್ ಸ್ಟೈಲ್ (Elite Lifestyle) ಮ್ಯಾಗಝೀನ್ ಗಾಗಿ. 
 

ಅಷ್ಟೇ ಅಲ್ಲ ಯುವ (Yuva) ಮತ್ತು ಶ್ರೀದೇವಿ ಡಿವೋರ್ಸ್ ಪ್ರಕರಣ ಮುನ್ನೆಲೆಗೆ ಬಂದ ಬಳಿಕ, ಹೆಚ್ಚು ಸುದ್ದಿಯಲ್ಲಿರೋದು ಸಪ್ತಮಿ ಗೌಡ. ಸಪ್ತಮಿ - ಯುವ ಬಗ್ಗೆ ಸಿಕ್ಕಾಪಟ್ಟೆ ಕಾಂಟ್ರವರ್ಸಿಗಳು ಸಹ ಕೇಳಿ ಬರುತ್ತಿವೆ. ಸಪ್ತಮಿ ಸೋಶಿಯಲ್ ಮೀಡೀಯಾದಲ್ಲಿ ಫೋಟೊ ಹಾಕಿದ್ರೂನು ಜನ ಯುವ ಹೆಸರು ಹೇಳಿ ಕಾಮೆಂಟ್ ಮಾಡೋದು ಹೊಸದೇನಲ್ಲ. 
 

ಈ ಫೋಟೊಗೂ ಅಷ್ಟೇ ಜನ ಯುವ ಹೆಸರು ಲಿಂಕ್ ಮಾಡಿ ಕಾಮೆಂಟ್ ಮಾಡಿದ್ದು, ನಮ್ಮ ಕಳ್ಳ ಕೃಷ್ಣ ಯುವ ಎಲ್ಲಿದ್ದಾನೆ ಅಂತಾನು ಕೇಳಿದ್ದಾರೆ. ಅಷ್ಟೇ ಅಲ್ಲ ದೊಡ್ಮನೆ ಹುಡುಗಿ ಅಂತ ಕೂಡ ಕಾಮೆಂಟ್ ಮಾಡಿದ್ದಾರೆ. 
 

ಕರಿಯರ್ ವಿಷ್ಯಕ್ಕೆ ಬಂದ್ರೆ ಸ್ಯಾಂಡಲ್ವುಡ್ ಜೊತೆ ಟಾಲಿವುಡ್ ನಲ್ಲಿ ಸಪ್ತಮಿ ಗೌಡ ಬ್ಯುಸಿಯಾಗಿದ್ದಾರೆ.  ಕಾಂತಾರಾ ಅಧ್ಯಾಯ 1ರ ಜೊತೆ ತೆಲಗು ಸಿನಿಮಾ ತಮ್ಮುಡುವಿನಲ್ಲಿ ಸಪ್ತಮಿ ನಟಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಕುದುರೆ ಸವಾರಿ ಕಲಿತಿದ್ದಾರೆ.  ಈ ಚಿತ್ರದಲ್ಲಿ ನಿತಿನ್ ನಾಯಕನಾಗಿ ನಟಿಸುತ್ತಿದ್ದಾರೆ. 
 

Latest Videos

click me!