ಶ್ವೇತಾ ಶ್ರೀವಾಸ್ತವ್ ನಿವಾಸಕ್ಕೆ ಹೊಸ ಅತಿಥಿ; ನಾಮಕರಣ ಮಾಡಲು ಅಭಿಮಾನಿಗಳನ್ನೇ ಹೆಸರು ಕೇಳಿದ ನಟಿ!

First Published | Nov 23, 2024, 4:41 PM IST

ಮಗಳಿಗೋಸ್ಕರ ವಿಶೇಷ ಅತಿಥಿಯನ್ನು ಕರೆದುಕೊಂಡು ಬಂದ ನಟಿ ಶ್ವೇತಾ ಶ್ರೀವಾಸ್ತವ್. ಮಗಳ ಸಂಭ್ರಮವನ್ನು ಪದಗಳಲ್ಲಿ ವರ್ಣಿಸಿದ ನಟಿ.....

ಸ್ಯಾಂಡಲ್‌ವುಡ್‌ನ ಫೇರ್ ಆಂಡ್ ಲವ್ಲಿ ನಟಿ ಶ್ವೇತಾ ಶ್ರೀವಾಸ್ತವ್ ತಮ್ಮ ನಿವಾಸಕ್ಕೆ ಹೊಸ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ. ಇದು ಮಗಳಿಗೆ ನಟಿ ಕೊಟ್ಟಿರುವ ಬಿಗ್ ಗಿಫ್ಟ್‌.

 'ನಮ್ಮ ಮನೆಗೆ ಸ್ವಾಗತ ಪುಟ್ಟಾಣಿ. ನಮ್ಮ ಮನೆಗೆ ಬಂದಿರುವ ಮುದ್ದಾದ ಗೋಲ್ಡನ್‌ ರೆಟ್ರೀವರ್‌ ಪಪ್ಪಿಗೆ ಮೇಲೆ ಸಿಕ್ಕಾಪಟ್ಟೆ ಪ್ರೀತಿ ಆಗಿಬಿಟ್ಟಿದೆ' ಎಂದು ಶ್ವೇತಾ ಬರೆದುಕೊಂಡಿದ್ದಾರೆ.

Tap to resize

'ಹೆಸರನ್ನು ಇನ್ನೂ ನಿರ್ಧಾರ ಮಾಡಿಲ್ಲ ಹೀಗಾಗಿ ನಿಮ್ಮ ಸಲಹೆಗಳನ್ನು ಕಾಮೆಂಟ್ ಮಾಡಿ. ಒಂದೊಳ್ಳೆ ಪರ್ಫೆಕ್ಟ್‌ ಹೆಸರನ್ನು ಈ ಗೋಲ್ಡನ್ ಬಂಡಲ್‌ಗೆ ಇಡೋಣ' ಎಂದು ಶ್ವೇತಾ ಹೇಳಿದ್ದಾರೆ.

ನಾವು ಎಲ್ಲಿ ಹೋಗುತ್ತಿದ್ದೀವಿ ಈಗ ಎಂದು ಮಗಳನ್ನು ಶ್ವೇತಾ ಪ್ರಶ್ನೆ ಮಾಡಿದಾಗ 'ಈಗ ನಾವು ನಾಯಿ ಮರಿಯನ್ನು ದತ್ತು ತೆಗೆದುಕೊಳ್ಳಲು ಹೋಗುತ್ತಿದ್ದೀವಿ. ನಮ್ಮ ಮನೆಗೆ ಪುಟ್ಟ ಮರಿ ಬರಲೇ ಬೇಕು' ಎಂದು ಆಶ್ಮಿತಾ ಹೇಳುತ್ತಾಳೆ. 

ಪುಟ್ಟ ನಾಯಿ ಮರಿಯನ್ನು ಮನೆಗೆ ಕರೆದುಕೊಂಡು ಹೋಗಿ ಸ್ವತಃ ಅಶ್ಮಿತಾನೇ ಅದಕ್ಕೆ ತಿಂಡಿ ತಿನಿಸುವುದು, ಹಾಲು ಕುಡಿಸುವುದು ಹಾಗೂ ಮಲಗಿಸುವ ಕೆಲಸ ಮಾಡುತ್ತಾಳೆ. 

ಇವರಿಬ್ಬರ ಮುದ್ದಾದ ಬಾಂಡ್ ನೋಡಿ ನೆಟ್ಟಿಗರು ಸಖತ್ ಪಾಸಿಟಿವ್ ಕಾಮೆಂಟ್ ಮಾಡಿದ್ದಾರೆ. ಮಗಳಿಗೆ ಯಾವುದೇ ಭಯವಿಲ್ಲದೆ ಪ್ರಾಣಿಗಳ ಜೊತೆ ಬೆರೆಯಲು ಕಲಿಸಿಕೊಟ್ಟಿರುವುದು ಒಳ್ಳೆಯ ಗುಣ ಎನ್ನುತ್ತಿದ್ದಾರೆ.

ಇನ್ನೂ ಕೆಲವರು ಪುಟ್ಟ ನಾಯಿ ಮರಿಯನ್ನು ನೋಡಿ ಇಷ್ಟೋಂದು ಖುಷಿ ಪಡುತ್ತಿರುವ ಅಶ್ಮಿತಾ ಇನ್ನು ತಮ್ಮ ಅಥವಾ ತಂಗಿ ಪಾಪು ಮನೆಗೆ ಬಂದರೆ ಇನ್ನೂ ಖುಷಿ ಪಡುತ್ತಾಳೆ ಎಂದು ಸಲಹೆ ಕೊಟ್ಟಿದ್ದಾರೆ.

Latest Videos

click me!