ಕತಾರ್ ಕರ್ನಾಟಕ ಸಂಘದ ರಜತ ಮಹೋತ್ಸವದಲ್ಲಿ ಭಾಗಿಯಾದ ನಟ ರಮೇಶ್ ಅರವಿಂದ್

Published : Nov 20, 2024, 06:00 PM ISTUpdated : Nov 21, 2024, 07:11 AM IST

ದೋಹಾದಲ್ಲಿರುವ ಕತಾರ್ ಕರ್ನಾಟಕ ಸಂಘದ ರಜತ ಮಹೋತ್ಸವದಲ್ಲಿ ನಟ ರಮೇಶ್ ಅರವಿಂದ್ ಭಾಗಿಯಾಗಿದ್ದು, ಅಲ್ಲಿನ ಫೋಟೊಗಳನ್ನು ಶೇರ್ ಮಾಡಿದ್ದಾರೆ.   

PREV
17
ಕತಾರ್ ಕರ್ನಾಟಕ ಸಂಘದ ರಜತ ಮಹೋತ್ಸವದಲ್ಲಿ ಭಾಗಿಯಾದ ನಟ ರಮೇಶ್ ಅರವಿಂದ್

ಅರಬ್‌ ದೇಶಗಳಲ್ಲಿ ಒಂದಾದ ಕತಾರ್‌ನಲ್ಲಿರುವ ಕರ್ನಾಟಕ ಸಂಘವು (Kathar Karnataka Sangha)ಕನ್ನಡಿಗರಿಗಾಗಿ ಒಂದಲ್ಲ ಒಂದು ಸಮಾರಂಭಗಳನ್ನು ನಡೆಸುತ್ತಲೇ ಇರುತ್ತೆ, ಕರ್ನಾಟಕ ರಾಜ್ಯೋತ್ಸವ ಇತ್ತೀಚೆಗೆ ನಡೆದಿದು, ಇದೀಗ ರಜತ ಮಹೋತ್ಸವ ನಡೆದಿದೆ. 
 

27

ಹೌದು ಕತಾರ್ ಕರ್ನಾಟಕ ಸಂಘದ ರಜತ ಮಹೋತ್ಸವದ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮಕ್ಕೆ ಸ್ಯಾಂಡಲ್’ವುಡ್ ನಟ, ನಿರ್ದೇಶಕ ರಮೇಶ್ ಅರವಿಂದ್ (Ramesh Aravind)  ಹಾಗೂ ಇನ್ನಿತರ ಗಣ್ಯರು ಭಾಗವಹಿಸಿದ್ದರು. 
 

37

ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಫೋಟೊಗಳನ್ನು ಹಂಚಿಕೊಂಡಿರುವ ರಮೇಶ್ ಅರವಿಂದ್ ದೋಹಾದಲ್ಲಿ ಕತಾರ್ ಕರ್ನಾಟಕ ಸಂಘದ ರಜತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲು ನಾವು ಹೋಗಿದ್ದಾಗ ತೆಗೆದ ಕೆಲವು ಚಿತ್ರಗಳು ಎಂದು ಬರೆದುಕೊಂಡಿದ್ದಾರೆ. 
 

47

ರಮೇಶ್ ಅವರು ಗುರುರಾಜ್ ಕರ್ಜಗಿ, ಕ್ಯಾಪ್ಟನ್ ನಾಗಪ್ಪ, ಮೆಜೀಶಿಯನ್ ಕುದ್ರೋಳಿ ಗಣೇಶ್, ಆರ್ ಜೆ ಪ್ರಸನ್ನ, ರವಿ ಶೆಟ್ಟಿ, ರೋಶನ್, ಸಸ್ತಿಕ, ದಿನೇಶ್, ಸುಬ್ರಹ್ಮಣ್ಯ ಹಾಗೂ ಇನ್ನಿತರ NRI ಸ್ನೇಹಿತರ ಜೊತೆಗಿನ ಫೋಟೊಗಳನ್ನು ರಮೇಶ್ ಶೇರ್ ಮಾಡಿದ್ದಾರೆ. 
 

57

ನವಂಬರ್ 15 ರಂದು ಕತಾ ಕನ್ನದ ಸಂಘದ 25ನೇ ವರ್ಷದ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮಕ್ಕೆ ಕರ್ನಾಟಕದ ಗಣ್ಯರನ್ನು ಆಹ್ವಾನಿಸಲಾಗಿತ್ತು. ಅವರಲ್ಲಿ ರಮೇಶ್ ಅರವಿಂದ್ ಕೂಡ ಒಬ್ಬರು, ರಮೇಶ್ ತಮ್ಮ ಪತ್ನಿ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
 

67

ರಮೇಶ್ ಅರವಿಂದ್ ತಮ್ಮ ಪತ್ನಿ ಅರ್ಚನಾ ಅರವಿಂದ್ ಜೊತೆಗಿನ ಒಂದಷ್ಟು ಫೋಟೊಗಳನ್ನು ಸಹ ಶೇರ್ ಮಾಡಿದ್ದು, ಕಾರ್ಯಕ್ರದಲ್ಲಿ ಹಾಗೂ ದೋಹಾದ ಸುಂದರ ತಾಣಗಳಲ್ಲಿ ತೆಗೆದಂತಹ ಫೋಟೊಗಳು ಇದಾಗಿದೆ. 
 

77

ಇದಲ್ಲದೇ ರಮೇಶ್ ಶಿಕ್ಷಣ ತಜ್ಞರಾದ ಗುರುರಾಜ್ ಕರ್ಜಗಿ (Gururaj Karjagi) ಹಾಗೂ ಇನ್ನಿತರ ಗಣ್ಯರ ಜೊತೆಗೆ ಮಾತುಕತೆ ನಡೆಸಿದ್ದು, ಎಲ್ಲಾ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

Read more Photos on
click me!

Recommended Stories