ಸೀರೆ ಉಡಲಿ, ಮಾಡರ್ನ್ ಡ್ರೆಸ್ ಹಾಕಲಿ, ರುಕ್ಮಿಣಿ ವಸಂತ್‌ಗೆ ಯಾವುದು ಸೂಟ್ ಆಗೋಲ್ಲ ನೀವೇ ಹೇಳಿ?

Published : Nov 22, 2024, 03:48 PM ISTUpdated : Nov 22, 2024, 03:58 PM IST

ಕನ್ನಡ ಸಿನಿ ರಸಿಕರ ಸದ್ಯದ ಕ್ರಶ್ ಅಂದ್ರೆ ಅದು ರುಕ್ಮಿಣಿ ವಸಂತ್. ಈ ಬೆಡಗಿ ಸೀರೆ ಹಾಕಿದ್ರೂ ಸುಂದರಿ, ಮಾಡರ್ನ್ ಡ್ರೆಸಲ್ಲೂ ಸಖತ್ ಸುಂದ್ರಿ. ನಿಮಗೆ ರುಕ್ಮಿಣಿ ವಸಂತ್ ಯಾವ ಉಡುಗೆ ಇಷ್ಟ?   

PREV
18
ಸೀರೆ ಉಡಲಿ, ಮಾಡರ್ನ್ ಡ್ರೆಸ್ ಹಾಕಲಿ, ರುಕ್ಮಿಣಿ ವಸಂತ್‌ಗೆ ಯಾವುದು ಸೂಟ್ ಆಗೋಲ್ಲ ನೀವೇ ಹೇಳಿ?

ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ, ಮನಸ್ಸಿಗೆ ಹತ್ತಿರವಾದ ಬೆಡಗಿ ರುಕ್ಮಿಣಿ ವಸಂತ್ (Rukmini Vasanth). ಪ್ರಿಯಾ ಅನ್ನೋ ಪಾತ್ರದಲ್ಲೇ ಪರಕಾಯ ಪ್ರವೇಶ ಮಾಡಿ, ಅದ್ಭುತವಾಗಿ ನಟಿಸಿದ್ರು ರುಕ್ಮಿಣಿ ವಸಂತ್. 
 

28

ರುಕ್ಮಿಣಿ ಸಿಂಪ್ಲಿಸಿಟಿ, ಸೌಂದರ್ಯಕ್ಕೆ ಜನ ಈಗಾಗಲೇ ಫಿದಾ ಆಗಿದ್ದಾರೆ. ಅಷ್ಟೇ ಯಾಕೆ ಆಕೆಯ ಮುಗ್ಧ ನಗು, ಮಾತನಾಡುವ ಕಣ್ಗಳ ಅಂದಕ್ಕೆ ಮನ ಸೋತಿದ್ದಾರೆ. ಸದ್ಯ ಕರ್ನಾಟಕದ್ ಕ್ರಶ್ ಆಗಿದ್ದಾರೆ ಈ ಬೆಡಗಿ. 
 

38

ಈಗಂತೂ ಬೈರತಿ ರಣಗಲ್ (Bhairathi Ranagal), ಜೊತೆಗೆ ಬಘೀರ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ ಈ ಚೆಲುವೆ. ಈ ಎರಡೂ ಸಿನಿಮಾಗಳಲ್ಲಿ ವೈದ್ಯೆಯಾಗಿ ನಟಿಸಿದ್ದ ರುಕ್ಮಿಣಿಯ ನಟನೆಯನ್ನು ಜನ ಮೆಚ್ಚಿಕೊಂಡಿದ್ದಾರೆ. 
 

48

ರುಕ್ಮಿಣಿ ವಸಂತ್ ಸದ್ಯ ಕನ್ನಡದ ತ್ಯಾಗ ರಾಣಿ ಅಂತ ಫೇಮಸ್ ಆಗಿದ್ದಾರೆ. ಅಂದ್ರೆ ರಮೇಶ್ ಅರವಿಂದ್ ಥರ ರುಕ್ಮಿಣಿ ಎಲ್ಲಾ ಸಿನಿಮಾಗಳಲ್ಲೂ ನಾಯಕನಿಗೆ ಸಿಗದೇ ತ್ಯಾಗಮೂರ್ತಿ ಅನಿಸಿದ್ದಾರೆ. 
 

58

ಹೌದು ರುಕ್ಮಿಣಿ ವಸಂತ್ ಸದ್ಯ ನಟಿಸಿದ ನಾಲ್ಕು ಸಿನಿಮಾಗಳಲ್ಲಿ ಅಂದರೆ ಸಪ್ತಸಾಗರದಾಚೆ ಎಲ್ಲೋ, ಬಾನ ದಾರಿಯಲ್ಲಿ, ಬಘೀರ (Bhagheera), ಭೈರತಿ ರಣಗಲ್ ನಾಲ್ಕು ಸಿನಿಮಾಗಳಲ್ಲೂ ನಾಯಕನಿಗೆ ಸಿಗೋದೆ ಇಲ್ಲ. ಹಾಗಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಇವರು ತ್ಯಾಗ ಮೂರ್ತಿ ಅಂತ ಫೇಮಸ್ ಆಗಿದ್ದಾರೆ. 
 

68

ಇನ್ನು ರುಕ್ಮಿಣಿ ವಸಂತ್ ಸೋಶಿಯಲ್ ಮೀಡೀಯಾದಲ್ಲಿ ಆಕ್ಟೀವ್ ಆಗಿದ್ದು, ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಹಾಗಂತ ಮಾಡರ್ನ್ ಡ್ರೆಸ್ ಹಾಕಲ್ಲ ಅಂತಲ್ಲ, ಮಾಡರ್ನ್ ಡ್ರೆಸಲ್ಲೂ ಸಖತ್ ಆಗಿ ಕಾಣಿಸ್ತಾರೆ ಈ ಬ್ಯೂಟಿ. 
 

78

ರುಕ್ಮಿಣಿ ಕಳೆದ ಎರಡು ತಿಂಗಳಿನಿಂದ ಎರಡು ಸಿನಿಮಾಗಳಲ್ಲಿ ಪ್ರೊಮೋಷನ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಪ್ರೊಮೋಷನ್ ಸಂದರ್ಭದಲ್ಲಿ ನಟಿ, ಸೀರೆಯಲ್ಲಿ, ಇತರ ಕಾರ್ಯಕ್ರಮಗಳಲ್ಲಿ ಗೌನ್, ಇನ್ನಿತರ ಡ್ರೆಸಲ್ಲಿ ಮಿಂಚಿತ್ತು, ಆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 
 

88

ಅದು ಸೀರೆಯೇ ಇರಲಿ, ಅಥವಾ ಮಾಡನ್ ಡ್ರೆಸ್ ಆಗಿರಲು ಎರಡರಲ್ಲೂ ರುಕ್ಮಿಣಿಯನ್ನು ಬೀಟ್ ಮಾಡೋರು ಯಾರೂ ಇಲ್ಲ, ಎನ್ನುವಷ್ಟು ತುಂಬಾನೆ ಮುದ್ದಾಗಿ ಕಾಣಿಸ್ತಾರೆ ಈ ಸುಂದರಿ. ನಿಮಗೆ ರುಕ್ಮಿಣಿ ವಸಂತ್ ಯಾವ ಲುಕ್ ಇಷ್ಟ ಆಯ್ತು? 
 

Read more Photos on
click me!

Recommended Stories