ಹೋಪ್‌ ಟ್ರೇಲರ್‌ ಬಿಡುಗಡೆ; ಸೆಲೆಬ್ರಿಟಿಗಳ ಕಲರ್‌ಫುಲ್‌ ಫೋಟೋಗಳು

Published : Jun 27, 2022, 03:25 PM IST

ಬಿಗ್ ಬ್ರೇಕ್‌ ನಂತರ ಕಮ್ ಬ್ಯಾಕ್ ಮಾಡುತ್ತಿದ್ದಾರೆ ಶ್ವೇತಾ ಶ್ರೀವಾಸ್ತವ್. ಅಶ್ವಥ್‌ ನಾರಾಯಣ್‌ ಸಾಥ್ ಕೊಟ್ಟಿದ್ದಾರೆ...

PREV
17
ಹೋಪ್‌ ಟ್ರೇಲರ್‌ ಬಿಡುಗಡೆ; ಸೆಲೆಬ್ರಿಟಿಗಳ ಕಲರ್‌ಫುಲ್‌ ಫೋಟೋಗಳು

ಅಧಿಕಾರಿಗಳ ವರ್ಗಾವಣೆಯಿಂದ ಜನ ಸಾಮಾನ್ಯರ ಮೇಲೆ ಹಾಗೂ ಆಡಳಿತ ಮೇಲೆ ಯಾವ ರೀತಿ ಪರಿಣಾಮ ಬೀರಳಿದ ಎಂಬುದನ್ನು ಹೇಳುವ ಸಿನಿಮಾ ‘ಹೋಪ್‌’. 

27


ಈ ಚಿತ್ರ ಜು.8ಕ್ಕೆ ತೆರೆಗೆ ಬರಲಿದೆ. ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆ ಆಯಿತು. ಸಚಿವರಾದ ಅಶ್ವತ್‌್ಥ ನಾರಾಯಣ್‌ ಅವರು ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. 

37

‘ಚಿತ್ರಕ್ಕೆ ಬಹಳ ಒಳ್ಳೆಯ ಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವರ್ಗಾವಣೆ ಸರ್ಕಾರದ ಮುಖ್ಯ ಸಂಕಷ್ಟ. ವರ್ಗಾವಣೆ ಅನ್ನೋದು ದೊಡ್ಡ ಪಿಡುಗು.' 

47

'ಹೀಗಾಗಿ ಇದರ ಮೇಲೆ ಬೆಳಕು ಚೆಲ್ಲುವ ಚಿತ್ರ ಮಾಡಿರುವುದು ಒಳ್ಳೆಯದು’ ಎಂದು ಸಚಿವ ಅಶ್ವತ್‌್ಥ ನಾರಾಯಣ್‌ ಅವರು ಹೇಳಿದರು. ಚಿತ್ರಕ್ಕೆ ಕತೆ ಬರೆಯುವ ಜತೆಗೆ ವರ್ಷಾ ಸಂಜೀವ್‌ ಚಿತ್ರದ ನಿರ್ಮಾಣ ಕೂಡ ಮಾಡಿದ್ದಾರೆ.'

57

'ಶ್ವೇತಾ ಶ್ರೀವಾಸ್ತವ್‌ ಚಿತ್ರದಲ್ಲಿ ಕೆಎಎಸ್‌ ಅಧಿಕಾರಿ ಪಾತ್ರ ಮಾಡಿದ್ದಾರೆ. ಸುಮಲತಾ ಅಂಬರೀಷ್‌, ಪ್ರಮೋದ್‌ ಶೆಟ್ಟಿ, ಗೋಪಾಲ ಪಾಂಡೆ, ಪ್ರಕಾಶ್‌ ಬೆಳವಾಡಿ, ಸಿರಿ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ. ಈ ಹಿಂದೆ ‘ಜ್ವಲಂತ’ ಚಿತ್ರವನ್ನು ನಿರ್ದೇಶಿಸಿದ್ದ, ಅಂಬರೀಷ್‌ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

67

7 ವರ್ಷಗಳ ಬಿಗ್ ಬ್ರೇಕ್ ನಂತರ ಶ್ವೇತಾ ಸಿನಿಮಾ ಕಥೆಯನ್ನು ಒಪ್ಪಿಕೊಂಡು ಚಿತ್ರೀಕರಣ ಮುಗಿಸಿ ಮಾಧ್ಯಮಗಳ ಜೊತೆ ಮಾತನಾಡುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ. 

77

ಮದರ್‌ವುಡ್ ಎಂಜಾಯ್ ಮಾಡಿ ಆನಂತರ ತಮ್ಮ ಫಿಟ್ನೆಸ್ ಮತ್ತು ಬ್ಯೂಟಿ ಬಗ್ಗೆ ಶ್ವೇತಾ ಹೆಚ್ಚಿನ ಗಮನ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವರ್ಕೌಟ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. 

Read more Photos on
click me!

Recommended Stories