ಪಾತ್ರ ಚಿಕ್ಕದಾದರೂ ಹೆಸರು ಮಾಡಬೇಕು ಅಂತಾರೆ ಶುಭ ರಕ್ಷಾ

First Published | Apr 21, 2021, 4:27 PM IST

ಯುಗಾದಿ ಎಂದರೆ ಹೊಸತನ ಮತ್ತು ನವಿರಾದ ಕನಸುಗಳ ಸಂಭ್ರಮ. ಇಂಥ ಸಂಭ್ರಮದಿಂದ ಕನ್ನಡ ನಟಿಯರು ಕೂಡ ಹೊರತಾಗಿಲ್ಲ. ಸದಾ ಹೊಸತದಲ್ಲಿ ತೊಡಗುವ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿಯರಲ್ಲಿ ಒಬ್ಬಾಕೆ ಶುಭ ರಕ್ಷಾ.

ಹೆಸರು ಶುಭ ರಕ್ಷಾ. ಆರಂಭದಲ್ಲಿ ಸ್ನೇಹಿತರಿಗಾಗಿ ಐಟಂ ಹಾಡಿಗೆ ಹೆಜ್ಜೆ ಹಾಕಿದರೂ ನಂತರ ನಾಯಕಿಯಾಗಿ ಗುರುತಿಸಿಕೊಂಡರು.
ಈಗ ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಹಿಂದಿಗೂ ಕಾಲಿಟ್ಟಿರುವ ಪ್ರತಿಭಾವಂತೆ.
Tap to resize

ಸದ್ಯಕ್ಕೆ ತೆಲುಗು ತಮಿಳು ಹಾಗೂ ಹಿಂದಿಯಲ್ಲಿ ಸೆಟ್ಟೇರಿರುವ ‘ಮದ್ರಾಸಿ ಗ್ಯಾಂಗ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ ಈಕೆ.
ಶುಭಾ ರಕ್ಷ ತೆಲುಗಿನ ಜೆಡಿ ಚಕ್ರವರ್ತಿ ಜತೆಗೆ ಇನ್ನೂ ಹೆಸರಿಡದ ಚಿತ್ರಕ್ಕೂ ಬಣ್ಣ ಹಚ್ಚಿದ್ದಾರೆ.
ಕನ್ನಡದಲ್ಲಿ ‘ಬಳ್ಳಾರಿ ದರ್ಬಾರ್’, ‘ಮತ್ತೆ ಉದ್ಭವ’, ತೆರೆಗೆ ಸಿದ್ಧವಾಗಿರುವ ‘ಗುಡುಗು’ ಮುಂತಾದ ಚಿತ್ರಗಳಲ್ಲಿ ಶುಭಾ ಕಾಣಿಸಿಕೊಂಡಿದ್ದಾರೆ.
ನಾಯಕಿ ಪಾತ್ರವೇ ಆಗಬೇಕು ಅಂತೇನು ಇಲ್ಲ ಅಂತಾರೆ ಈಕೆ.
ಪಾತ್ರ ಚಿಕ್ಕದಾದರೂ ಜನ ಗುರುತಿಸಿಬೇಕು. ದೊಡ್ಡ ಮಟ್ಟದಲ್ಲಿ ಹೆಸರು ಪಡೆಯಬೇಕು. ಅಂಥ ಪಾತ್ರಗಳಿಗೇ ಹೆಚ್ಚು ಒತ್ತು ಕೊಡುತ್ತಾರೆ ಈಕೆ.
ಶುಭಾ ದರ್ಶನ್ ಅವರ ‘ರಾಬರ್ಟ್’ ಚಿತ್ರದಲ್ಲೂ ನಟಿಸಿದ್ದಾರೆ.
ಈ ಚಿತ್ರದಲ್ಲಿ ಒಂದು ನಿಮಿಷದ ಪಾತ್ರವಾದರೂ ಜನ ದೊಡ್ಡ ಮಟ್ಟದಲ್ಲಿ ಗುರುತಿಸಿದ್ದಾರೆ ಎಂಬುದು ಈಕೆಯ ಸಂಭ್ರಮಕ್ಕೆ ಕಾರಣ.
ನಟಿ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಬೆಳೆಯುತ್ತಿರುವಾಕೆ

Latest Videos

click me!