ಹೆಂಡ್ತಿಗೆ ‘Happy birthday ಚಿನ್ನ’ ಎಂದು ಗೋಲ್ಡನ್ ಸ್ಟಾರ್ ವಿಶ್ ಮಾಡಿದ್ರೆ, ಯಾರಿದು ಅಂತ ಕೇಳೋದಾ ಫ್ಯಾನ್ಸು!

Published : Jul 12, 2024, 03:28 PM IST

ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಗಣೇಶ್ ಸೋಶಿಯಲ್ ಮೀಡಿಯಾ ಮೂಲಕ ಮುದ್ದಾಗಿ ವಿಶ್ ಮಾಡಿದ್ದಾರೆ.   

PREV
17
ಹೆಂಡ್ತಿಗೆ ‘Happy birthday ಚಿನ್ನ’ ಎಂದು ಗೋಲ್ಡನ್ ಸ್ಟಾರ್ ವಿಶ್ ಮಾಡಿದ್ರೆ, ಯಾರಿದು ಅಂತ ಕೇಳೋದಾ ಫ್ಯಾನ್ಸು!

ಗೋಲ್ಡನ್ ಸ್ಟಾರ್ ಗಣೇಶ್ (Golden star Ganesh) ಇವರು ಇದೇ ಜುಲೈ 2ರಂದು ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಇದೀಗ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ಇಂದು ಹುಟ್ಟು ಹಬ್ಬ ಆಚರಿಸಿಕೊಳ್ತಾ ಇದ್ದಾರೆ. 

27

ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕಿ ಮತ್ತು ಭಾರತೀಯ ಜನತಾ ಪಕ್ಷದಲ್ಲೂ ಗುರುತಿಸಿಕೊಂಡಿದ್ದ ಶಿಲ್ಪಾ ಗಣೇಶ್ (Shilpa Ganesh) ಜುಲೈ 12 ರಂದು ಬರ್ತ್ ಡೇ ಸಂಭ್ರಮದಲ್ಲಿದ್ದು, ಪ್ರೀತಿಯ ಪತ್ನಿಗೆ ಗೋಲ್ಡನ್ ಸ್ಟಾರ್ ಮುದ್ದಾಗಿ ವಿಶ್ ಮಾಡಿದ್ದಾರೆ. 
 

37

ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಜೊತೆಯಾಗಿರುವ ಫೋಟೋ ಹಂಚಿಕೊಂಡಿರುವ ಗಣೇಶ್ ‘Happy birthday ಚಿನ್ನ’ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಶಿಲ್ಪಾ ಗಣೇಶ್ ಅವರಿಗೆ ಸೆಲೆಬ್ರಿಟಿಗಳು, ಅಭಿಮಾನಿಗಳು ಗೋಲ್ಡನ್ ಕ್ವೀನ್‌ಗೆ ಹುಟ್ಟುಹಬ್ಬದ ಶುಭಾಶಯ ಎಂದು ಶುಭಾಶಯ ಕೋರಿದ್ದಾರೆ. 
 

47

ಇನ್ನು ಗಣೇಶ್ ಅವರ ‘Happy birthday ಚಿನ್ನ’ ಎನ್ನುವ ಪೋಸ್ಟ್ ನೋಡಿ, ಅಭಿಮಾನಿಯೊಬ್ಬರು ಸರ್ ಯಾರಿದು ಅಂತ ಪ್ರಶ್ನೆಯೂ ಮಾಡಿದ್ದಾರೆ. ಇನ್ನೂ ಕೆಲವರು ನಿರೂಪಕಿ ಅಪರ್ಣ ಮೇಡಂ ಸಾವನ್ನಪ್ಪಿದ್ದಾರೆ, ಇಂತಹ ಸಂದರ್ಭದಲ್ಲಿ ಏನಿದು ಹುಚ್ಚಾಟ, ಬರ್ತ್ ಡೇ ಪೋಸ್ಟ್ ಬೇಡವಾಗಿತ್ತು ಎಂದು ಸಹ ಹೇಳಿದ್ದಾರೆ. 
 

57

ಇನ್ನು ಇವರ ಪರ್ಸನಲ್ ವಿಷ್ಯಕ್ಕೆ ಬರೋದಾದ್ರೆ ಗಣೇಶ್ ಅವರು ಇದ್ದಕ್ಕಿದ್ದಂತೆ ಮದ್ವೆ ಆಗಿದ್ದು, ಅಂದು ಭಾರಿ ಸುದ್ದಿಯಾಗಿತ್ತು. ಹಲವು ಊಹಾಪೋಹಗಳು ಸಹ ಹರಡಿದ್ದವು, ಆದರೆ ಅದೆಲ್ಲವನ್ನೂ ಮೆಟ್ಟಿ ನಿಂತು ಇಂದಿಗೂ ಇಬ್ಬರು ಅನ್ಯೋನ್ಯವಾಗಿ ಜೊತೆಯಾಗಿ ಬಾಳುತ್ತಿದ್ದಾರೆ. ಇವರ ಲವ್ ಸ್ಟೋರಿ ಕೂಡ ತುಂಬಾನೆ ಸ್ವೀಟ್ ಆಗಿದೆ. 
 

67

'ಮುಂಗಾರುಮಳೆ'  (Mungaru Male) ಸಿನಿಮಾ ಬಿಡುಗಡೆ ಬೆನ್ನಲ್ಲೇ ಗಣೇಶ್ ಮದುವೆ ಆಗಿದ್ದರು. ಈ ಸಿನಿಮಾ ಬಿಡುಗಡೆಗೂ ಮುನ್ನ ಶಿಲ್ಪಾ ಮತ್ತು ಗಣೇಶ್ ಸ್ನೇಹಿತರಾಗಿದ್ದರು. ಕಾಮನ್ ಫ್ರೆಂಡ್‌ನಿಂದ ಇಬ್ಬರ ಪರಿಚಯವಾಗಿತ್ತು. ಬಳಿಕ ಆ ಸ್ನೇಹ ಪ್ರೀತಿಗೆ ತಿರುಗಿತ್ತು.. ಗಣೇಶ್‌ಗೆ ಖುದ್ದು ಶಿಲ್ಪಾ ಪ್ರಪೋಸ್ ಮಾಡಿದ್ದರಂತೆ.  

77

ಗಣೇಶ್- ಶಿಲ್ಪಾ ಜೋಡಿ ಮದುವೆಯಾಗಿ ಇದೀಗ 14 ವರ್ಷ ಕಳೆದಿದೆ. ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ, ಚಾರಿತ್ರ್ಯ ಮತ್ತು ವಿಹಾನ್. ಸದ್ಯ ಗೋಲ್ಡನ್ ಸ್ಟಾರ್ 'ಕೃಷ್ಣಂ ಪ್ರಣಯ ಸಖಿ' ಚಿತ್ರದ ಮೂಲಕ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡೊದಕ್ಕೆ ತಯಾರಿ ನಡೆಸಿದ್ದಾರೆ. ಈಗಾಗಲೇ ಸಿನಿಮಾ ಹಾಡುಗಳು ಸದ್ದು ಮಾಡುತ್ತಿವೆ. 
 

Read more Photos on
click me!

Recommended Stories