ನಟ ದುನಿಯಾ ವಿಜಯ್ ಪುತ್ರಿ ಮೋನಿಕಾ ಉರ್ಫ್ ರಿತನ್ಯಾ ವಿಜಯ್ 'VK 29' ಪ್ರಾಜೆಕ್ಟ್ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚೊಚ್ಚಲ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
'ಮೊದಲ ಚಿತ್ರದಲ್ಲಿ ಅಪ್ಪನ ಜೊತೆ ನಟಿಸುವುದು ನನ್ನ ಅದೃಷ್ಟ. ತೆರೆ ಮೇಲೂ ನಾವು ಅಪ್ಪ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೀವಿ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ರಿತನ್ಯಾ ಮಾತನಾಡಿದ್ದಾರೆ.
'ನನ್ನ ತಂದೆ ಹೇಳಿದ್ದಾರೆ ಚಿತ್ರೀಕರಣ ಇದ್ದ ದಿನಗಳಲ್ಲಿ ಪ್ರತಿ ದಿನ ಸೆಟ್‌ಗೆ ಬರುವಂತೆ. ಏನೇ ಇದ್ದರೂ ನನ್ನ ಸಹಾಯ ಮಾಡಲಿದ್ದಾರ' ಎಂದು ರಿತನ್ಯಾ ಹೇಳಿದ್ದಾರೆ.
'ನನ್ನ ತಂಗಿ ಮೋನಿಕಾ ನ್ಯೂ ಯಾರ್ಕ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ನಮ್ಮಿಬ್ಬರ ಹೆಸರಿನಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ ಹೀಗಾಗಿ ಹೆಸರು ಬದಲಾಯಿಸಿಕೊಂಡೆ'
ರಿತನ್ಯಾ ಚೊಚ್ಚಲ ಚಿತ್ರದ ಟೈಟಲ್ ಲಾಂಚ್ ಆಗಬೇಕಿದೆ, ಈಗಷ್ಟೇ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ಮೊದಲ ಸಿನಿಮಾ ಸೆಟ್ ಏರುವ ಮುನ್ನ ರಿತನ್ಯಾ ಸೂರಿ ನಿರ್ದೇಶನ ಕಾಗೆ ಬಂಗಾರ ಚಿತ್ರಕ್ಕೆ ಸಿಹಿ ಮಾಡಿದ್ದಾರೆ.
'ಡೈರೆಕ್ಟರ್ ಸೂರಿ ಅವರನ್ನು ಭೇಟಿ ಮಾಡಲು ಅಪ್ಪ ಒಂದು ದಿನ ಕರೆದುಕೊಂಡು ಹೋಗಿದ್ದರು,ಯಾವ ಕಾರಣಕ್ಕೆ ಅಲ್ಲಿ ಹೋಗಿದ್ವಿ ಅನ್ನೋ ಐಡಿಯಾ ಇರಲಿಲ್ಲ. ಆದರೆ ಚಿತ್ರದ ಓನ್ ಲೈನ್ ನಟಿಸುತ್ತೀರಾ ಎಂದು ಕೇಳಿದ್ದರು. ಆಗ ನಾನು ಶಾಕ್‌ನಲ್ಲಿದ್ದೆ..ಖಂಡಿತಾ ನಟಿಸುತ್ತೀನಿ ಎಂದು ಹೇಳಿಬಂದೆ'
ಸುಮಾರು ಎರಡುವರೆ ದಶಕಗಳ ಕಾಲ ತಂದೆ ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದಾರೆ ಹೀಗಾಗಿ ಅವರನ್ನು ಸಂಪರ್ಕ ಮಾಡಿ ನನ್ನನ್ನು ಭೇಟಿ ಮಾಡುತ್ತಾರೆ. ಯಾವ ರೀತಿ ಕಥೆ ಬಂದಿದೆ ಎಂದು ತಿಳಿಸುತ್ತಾರೆ ಆನಂತರ ಆಯ್ಕೆ ಮಾಡಿಕೊಳ್ಳಲು ನನಗೆ ಬಿಡುತ್ತಾರೆ.
ಕಥೆ ವಿಚಾರದಲ್ಲಿ ತುಂಬಾನೇ ಫ್ರೀ ಆಗಿರುತ್ತಾರೆ ಆದರೆ ಏನೇ ಇದ್ದರೂ ಪಕ್ಕದಲ್ಲಿ ನಿಂತು ಮಾರ್ಗದರ್ಶನ ನೀಡುತ್ತಾರೆ. ಜನರಿಗೆ ಹತ್ತಿರವಾಗುವ ನೈಜ ಪಾತ್ರವನ್ನು ತಂದೆ ಆಯ್ಕೆ ಮಾಡುತ್ತಾರೆ. ನಾನು ಅದನ್ನೇ ಫಾಲೋ ಮಾಡಬೇಕು.
ನೆಪೋಟಿಸಂ ಅನ್ನೋದು ಇದೆ. ನಮಗೆ ಹೆಚ್ಚಿಗೆ ಅಟೆನ್ಶನ್ ಸಿಗುವುದಕ್ಕೆ ಪ್ರಮುಖ ಕಾರಣವನ್ನು ಸಿನಿಮಾ ಫ್ಯಾಮಿಲಿಯಿಂದ ಬರುವುದು. ಆದರೆ ಅದು ಮೊದಲ ಚಿತ್ರದವರೆಗೂ ಅಷ್ಟೆ...ಆಮೇಲೆ ನಾವು ಸಾಧನೆ ಮಾಡಿ ತೋರಿಸಬೇಕು.