ತಮಿಳು ಸೂಪರ್ ಸ್ಟಾರ್, ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಇತ್ತೀಚಿಗೆ ಭಾರತದ ಅತ್ಯುನ್ನತ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು.
ಹಲವರು ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ. ಆದರೆ ನಟ ಶಿವರಾಜ್‌ಕುಮಾರ್ ಹೂಗುಚ್ಚು ಹಿಡಿದು ಹೈದರಾಬಾದ್ ನಿವಾಸಕ್ಕೆ ತೆರಳಿದ್ದಾರೆ.
ಚಿರಂಜೀವಿ ಮನೆಯಲ್ಲಿ ಶಿವಣ್ಣ ಮತ್ತು ಸ್ನೇಹಿತರು ಒಟ್ಟಿಗೆ ಊಟ ಮಾಡುತ್ತಿದ್ದಾರೆ. ಮೆಗಾ ಸ್ಟಾರ್ ಹಿರಿಮಗಳು ಸುಶ್ಮಿತಾ ಕೊನಿಡೆಲಾ ಊಟ ಬಿಡಿಸುತ್ತಿರುವದನ್ನು ಫೋಟೋದಲ್ಲಿ ನೋಡಬಹುದು.
'ಶಿವರಾಜ್‌ಕುಮಾರ್ ಅವರು ಹೈದರಾಬಾದ್‌ನ ಮನೆಗೆ ಬಂದು ನನಗೆ ಶುಭ ಹಾರೈಸಿದ್ದಾರೆ. ನಾವು ಒಟ್ಟಿಗೆ ಊಟ ಮಾಡಿದೆವು. ಕುಶಲೋಪರಿ ವಿಚಾರಿಸಿಕೊಂಡೆವು'
'ಎರಡೂ ಕುಟುಂಬದ ಆತ್ನೀಯತೆ ಬಗ್ಗೆ ಮಾತನಾಡಿದೆವು. ಡಾ.ರಾಜ್‌ಕುಮಾರ್ ಜೊತೆ ಕಳೆದ ಕ್ಷಣಗಳು ಸದಾ ನೆನಪಿನಲ್ಲಿ ಇರುತ್ತದೆ' ಎಂದು ಚಿರಂಜೀವಿ ಬರೆದುಕೊಂಡಿದ್ದಾರೆ.
ಡಾ.ರಾಜ್‌ಕುಮಾರ್ ಫ್ಯಾಮಿಲಿ ಮತ್ತು ಚಿರಂಜೀವಿ ಫ್ಯಾಮಿಲಿ ಉತ್ತಮ ಸಂಬಂಧ ಹೊಂದಿದ್ದಾರೆ. ಇಬ್ಬರು ಪರಸ್ಪರ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.
Vaishnavi Chandrashekar