ನಟ ನಾಗಭೂಷಣ್- ಪೂಜಾ ಆರತಕ್ಷತೆಯಲ್ಲಿ ಸ್ಯಾಂಡಲ್‌ವುಡ್ ತಾರೆಯರ ದಂಡು, ಯಾರೆಲ್ಲ ಇದ್ದರು ನೋಡಿ

Published : Feb 04, 2024, 11:26 AM IST

'ಟಗರುಪಲ್ಯ' ನಾಯಕ ನಟ ನಾಗಭೂಷಣ್- ಪೂಜಾ ಜೊತೆ ಕಳೆದ ಭಾನುವಾರ ಹಸೆಮಣೆ ಏರಿದರು. ಮೈಸೂರಿನಲ್ಲಿ ನಡೆದ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ನಟನಟಿಯರು ಭಾಗವಹಿಸಿದ್ದರು.

PREV
19
ನಟ ನಾಗಭೂಷಣ್- ಪೂಜಾ ಆರತಕ್ಷತೆಯಲ್ಲಿ ಸ್ಯಾಂಡಲ್‌ವುಡ್ ತಾರೆಯರ ದಂಡು, ಯಾರೆಲ್ಲ ಇದ್ದರು ನೋಡಿ

ಜನವರಿ 28ರಂದು ಬೆಳಗಾವಿಯಲ್ಲಿ ಕಲಾವಿದೆ ಪೂಜಾ ಜೊತೆಗೆ ಸಪ್ತಪದಿ ತುಳಿದ ನಟ ನಾಗಭೂಷಣ್‍ ಅವರ ಆರತಕ್ಷತೆ ಶುಕ್ರವಾರ ಸಂಜೆ ಮೈಸೂರಿನಲ್ಲಿ ನಡೆಯಿತು. 

29

ಕನ್ನಡ ಚಿತ್ರರಂಗದ ಹಲವು ನಟ-ನಟಿಯರು, ರಂಗಭೂಮಿ ಕಲಾವಿದರು ಈ ಸಂದರ್ಭದಲ್ಲಿ ಹಾಜರಾಗಿ ನಾಗಭೂಷಣ್‍ ದಂಪತಿಗೆ ಶುಭ ಕೋರಿದರು. 

39

ರಿಸೆಪ್ಶನ್‌ಗೆ ಪೂಜಾ ಕೆಂಪು ರೇಶ್ಮೆ ಸೀರೆ ಉಟ್ಟಿದ್ದರೆ, ನಾಗಭೂಷಣೆ ತಿಳಿ ಗುಲಾಬಿ ಬಣ್ಣದ ಕುರ್ತಾ ಪಂಚೆಯಲ್ಲಿ ಮಿಂಚಿದರು. ಆರತಕ್ಷತೆಯಲ್ಲಿ ಲೂಸಿಯಾ ಪವನ್ ದಂಪತಿ, ನಟಿ ಅಮೃತಾ ಅಯ್ಯಂಗಾರ್ ಮತ್ತು ಇತರರು. 

49

ಭೂಷಣ್-ಪೂಜಾ ದಂಪತಿಯ ಆರತಕ್ಷತೆ ಸಮಾರಂಭದಲ್ಲಿ ನಟ ಪೃಥ್ವಿ ಅಂಬಾರ್ ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಫೋಟೋಗೆ ಪೋಸ್ ನೀಡಿದರು.

59

ನಟ ಜಗ್ಗೇಶ್ ನಾಗಭೂಷಣ್ ವಿವಾಹಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಫೋಟೋಗೆ ಡಾಲಿ ಧನಂಜಯ್ ಕೂಡಾ ಜೊತೆಯಾಗಿ ಪೋಸ್ ನೀಡಿದರು.

69

ನಿಹಾರಿಕಾ ಮೂವೀಸ್‍ನ ನಿರ್ಮಾಪಕ ಹರಿ ರೆಡ್ಡಿ, ತಮ್ಮ ನಿರ್ಮಾಣದ ಮೂರನೇ ಚಿತ್ರಕ್ಕೆ ನಾಗಭೂಷಣ್ ಅವರನ್ನು ಆಯ್ಕೆ ಮಾಡಿ ಅಡ್ವಾನ್ಸ್‌ನ್ನೇ ಉಡುಗೊರೆಯಾಗಿ ಕೊಟ್ಟಿದ್ದು ವಿಶೇಷವಾಗಿತ್ತು. 

79

'ಕಾಂತಾರ' ಬೆಡಗಿ ಸಪ್ತಮಿ ಗೌಡ ಪೂಜಾ ಭೂಷಣ್ ರಿಸೆಪ್ಶನ್‌ಗೆ ತಮ್ಮ ತಂದೆಯೊಂದಿಗೆ ಭಾಗವಹಿಸಿ ಶುಭ ಹಾರೈಸಿದರು. ಕಪ್ಪು ಸೀರೆಯಲ್ಲಿ ಸಪ್ತಮಿ ಮಿಂಚುತ್ತಿದ್ದರು.

89

ನಾಗಭೂಷಣ್ ಹಾಗೂ ಡಾರ್ಲಿಂಗ್ ಕೃಷ್ಣ 'ಕೌಸಲ್ಯಾ ಸುಪ್ರಜಾ ರಾಮದಲ್ಲಿ' ಭಾವ ನೆಂಟರಾಗಿ ಅಭಿನಯಿಸಿ ಜನಮನ ಗೆದ್ದಿದ್ದರು. ಡಾರ್ಲಿಂಗ್ ಕೃಷ್ಣ ಕೂಡಾ ತಮ್ಮ ಗೆಳೆಯನಿಗೆ ಶುಭ ಕೋರಲು ಸಮಾರಂಭದಲ್ಲಿ ಭಾಗವಹಿಸಿದರು.

99

ನಟ, ನಿರ್ದೇಶಕ ಪನ್ನಾಗಭರಣ, ನಟಿ ನಿಧಿ ಸುಬ್ಬಯ್ಯ ನವದಂಪತಿಗೆ ಶುಭ ಕೋರಿದರು. ಅಂದ ಹಾಗೆ ನಾಗಭೂಷಣ್ ಹೊಸ ಸಿನಿಮಾ 'ವಿದ್ಯಾಪತಿ' ಘೋಷಣೆಯಾಗಿದ್ದು, ಪೋಸ್ಟರ್ ಬಿಡುಯಾಗಿದೆ. ಇದನ್ನು ಡಾಲಿ ಧನಂಜಯ್ ನಿರ್ಮಿಸಲಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories