ಶಿವಣ್ಣನ ಎದುರು ತಮ್ಮ ಜೀವನದ ಬೆಸ್ಟ್ ಮತ್ತು ಅತಿ ಕೆಟ್ಟ ಘಟನೆಯನ್ನು ಹಂಚಿಕೊಂಡ ಕಿಚ್ಚ ಸುದೀಪ್!
ಕೆಟ್ಟ ದಿನಗಳು ಬರದಿದ್ದರೆ ನಾನು ಜೀವನದಲ್ಲಿ ಇಷ್ಟರ ಮಟ್ಟಕ್ಕೆ ಬೆಳೆಯುವುದಕ್ಕೆ ಆಗುವುದಿಲ್ಲ ಎಂದು ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ಕೆಟ್ಟ ದಿನಗಳು ಬರದಿದ್ದರೆ ನಾನು ಜೀವನದಲ್ಲಿ ಇಷ್ಟರ ಮಟ್ಟಕ್ಕೆ ಬೆಳೆಯುವುದಕ್ಕೆ ಆಗುವುದಿಲ್ಲ ಎಂದು ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲೂ ಸಖತ್ ಬ್ಯುಸಿಯಾಗಿದ್ದಾರೆ. ಹಲವು ವರ್ಷಗಳ ಹಿಂದೆ ಇತರ ನಟ-ನಟಿಯರ ಜೊತೆ ಟಾಕ್ ಶೋ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದರು.
ಈ ವೇಳೆ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ಆಗಮಿಸಿದ್ದರು. ಆಗ 'ನಿಮ್ಮ ಲೈಫ್‌ನಲ್ಲಿ ಬೆಸ್ಟ್ ಆಂಡ್ ವರ್ಸ್ಟ್ ದಿನ ಯಾವುದು?' ಎಂದು ಶಿವಣ್ಣ ಪ್ರಶ್ನೆ ಮಾಡುತ್ತಾರೆ.
'ನನ್ನ ಜೀವನ ಬೆಸ್ಟ್ ದಿನ ಅಂದ್ರೆ ಮಗಳು ಹುಟ್ಟಿದ ದಿನ' ಎಂದು ಸುದೀಪ್ ಹೇಳಿದಾಗ 'ಬ್ಯೂಟಿಫುಲ್ ಅದು ನಿಜ ನಿಜ' ಎಂದು ಶಿವಣ್ಣ ಹೇಳುತ್ತಾರೆ.
'ವರ್ಸ್ಟ್ ದಿನಗಳನ್ನು ನಾನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆ ಕೆಟ್ಟ ದಿನ ನನಗೆ ಬರ್ತಾ ಇರಲಿಲ್ಲ ಅಂದಿದ್ದರೆ ಇಲ್ಲಿ ತನಕ ನಾನು ಬರ್ತಾ ಇರಲಿಲ್ಲ' ಎಂದು ಸುದೀಪ್ ಹೇಳಿದ್ದಾರೆ.
ಕೆಟ್ಟ ದಿನ ನಮ್ಮ ಜೀವನದಲ್ಲಿ ಬರ್ತಾ ಇರಲಿಲ್ಲ ಅಂದಿದ್ರೆ ನನ್ನನ್ನು ಅದು ಮನುಷ್ಯನಾಗಿ ಮಾಡುತ್ತಿರಲಿಲ್ಲ. ಅದೇ ನನಗೆ ಪಾಠ ಕಲಿಸಿರುವುದು' ಎಂದು ಸುದೀಪ್ ಹೇಳುತ್ತಾರೆ ಎಂದಿದ್ದಾರೆ ಸುದೀಪ್.
ಸುದೀಪ್ ಪುತ್ರ ಈಗಷ್ಟೇ ಎರಡು ಮೂರು ಹಾಡುಗಳನ್ನು ಹಾಡಿ ರಿಲೀಸ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಸಾನ್ವಿ ತಂದೆ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದಾರೆ.