ಈ ಕುರಿತು ನಿರ್ದೇಶಕ ಶಂಕರ್ ರಾಮನ್, ‘ಕಂದ ಕನಸ ರೂಪ ಎಂಬ ಈ ಹಾಡನ್ನು ಎಲ್ಲಾ ತಾಯಂದಿರಿಗೆ ಅರ್ಪಿಸುತ್ತೇನೆ. ‘ಕೈ ತುತ್ತು ಕೊಟ್ಟವಳೇ ಐ ಲವ್ ಯು ಮದರ್ ಇಂಡಿಯಾ’, ‘ಬೇಡುವೆನು ವರವನು ಕೊಡೆ ತಾಯಿ ಜನುಮವನು’ ಎಂಬ ಹಾಡುಗಳು ನನಗಿಷ್ಟ. ಅದಕ್ಕೆ ಅಂಥದ್ದೇ ಒಂದು ಹಾಡು ಮಾಡಿಸಿದ್ದೇವೆ. ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ’ ಎಂದರು.