‘ಜೂನಿಯರ್ ಸಿನಿಮಾ ಹೀರೋ ಕಿರೀಟಿ ಬಹಳ ಸೊಗಸಾಗಿ ನೃತ್ಯ ಮಾಡುತ್ತಾರೆ. ಅವರ ಡ್ಯಾನ್ಸ್ ನೋಡಿದಾಗ ನನಗೆ ಅಪ್ಪೂನೆ ನೋಡಿದ ಹಾಗಾಗುತ್ತೆ’. ಇವು ಶಿವಣ್ಣ ಅವರ ಮಾತುಗಳು.
25
ಕಿರೀಟಿ, ಶ್ರೀಲೀಲಾ ತಾರಾಗಣದಲ್ಲಿರುವ ‘ಜೂನಿಯರ್’ ಸಿನಿಮಾದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಸಿನಿಮಾ ಜು.18ಕ್ಕೆ ತೆರೆಗೆ ಬರಲಿದೆ.
35
ಶ್ರೀಲೀಲಾ ಮಾತನಾಡಿ, ‘ನಿಮ್ ಕನ್ನಡದ ಹುಡುಗೀನ ನೀವು ಬಿಟ್ ಕೊಡಲ್ಲ ಅಂತ ನನಗೊತ್ತು. ನಾನು ಯಾವೆಲ್ಲ ಭಾಷೆಯಲ್ಲಿ ನಟಿಸಿದರೂ ನಿಮ್ಮ ಪ್ರೀತಿ ನನ್ನ ಅನುಭವಕ್ಕೆ ಬರುತ್ತಲೇ ಇದೆ. ಸ್ಯಾಂಡಲ್‌ವುಡ್ ಅಂದರೇನೆ ಸಿಲ್ವರ್ ಸ್ಪೂನಿಂಗ್’ ಎಂದರು.
ಕಿರೀಟಿ, ‘ಅಪ್ಪು ಸರ್ ನನಗೆ ಸ್ಫೂರ್ತಿ. ಶಿವಣ್ಣ ಅವರ ಹೊಡಿ ಮಗ ಹೊಡಿ ಹಾಡಿಗೆ ಸ್ಕೂಲಲ್ಲಿ ಮೊದಲ ಸಲ ಡ್ಯಾನ್ಸ್ ಮಾಡಿದ್ದೆ’ ಎಂದರು.
55
ರವಿಚಂದ್ರನ್, ಜೆನಿಲಿಯಾ, ನಿರ್ದೇಶಕ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಹಾಜರಿದ್ದರು. ರಾಧಾಕೃಷ್ಣ ರೆಡ್ಡಿ ನಿರ್ದೇಶನದ ಈ ಚಿತ್ರವನ್ನು ರಜನಿ ಕೊರ್ರಪಾಟಿ ನಿರ್ಮಿಸಿದ್ದಾರೆ.