'45' ಚಿತ್ರದಲ್ಲಿ Shivaraj Kumar​ ಮನಸೆಳೆಯುವ ಹೆಣ್ಣಿನ ವೇಷಕ್ಕೆ ಡ್ಯೂಪ್​ ಮಾಡಿದವರು ಇವರೇ ನೋಡಿ!

Published : Dec 31, 2025, 04:54 PM IST

ಅರ್ಜುನ್ ಜನ್ಯ ನಿರ್ದೇಶನದ, ಬಹುತಾರಾಗಣದ '45' ಚಿತ್ರವು ಉತ್ತಮ ಗಳಿಕೆ ಕಾಣುತ್ತಿದೆ. ಈ ಚಿತ್ರದಲ್ಲಿನ ಶಿವರಾಜ್‌ಕುಮಾರ್ ಅವರ ಸ್ತ್ರೀ ಪಾತ್ರದ ಸಾಹಸ ದೃಶ್ಯಗಳನ್ನು ಅವರು ಮಾಡಿಲ್ಲ, ಬದಲಿಗೆ ಇಬ್ರಾಹಿಂ ಎಂಬ ಡ್ಯೂಪ್ ಮಾಡಿದ್ದಾರೆ ಎಂಬ ವಿಷಯ ಇದೀಗ ಬಹಿರಂಗವಾಗಿದೆ.

PREV
16
13 ಕೋಟಿ ಗಳಿಕೆ

ಇದೇ 25ರಂದು ಬಿಡುಗಡೆಗೊಂಡಿರುವ ಉಪೇಂದ್ರ, ಶಿವರಾಜ್​ಕುಮಾರ್​, ರಾಜ್​ ಬಿ.ಶೆಟ್ಟಿ ಅಭಿನಯದ 45 ಚಿತ್ರವನ್ನು ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದಾರೆ. ಆದರೆ ಇದುವರೆಗೆ ಚಿತ್ರ 13.09 ಕೋಟಿಯಷ್ಟು ಗಳಿಕೆ ಮಾಡಿರುವುದಾಗಿ ವರದಿ ಹೇಳಿದೆ.

26
ಪ್ಯಾನ್ ಇಂಡಿಯಾ ಚಿತ್ರ

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ʼಸೂರಜ್ ಪ್ರೊಡಕ್ಷನ್ʼ ಬ್ಯಾನರ್‌ನಲ್ಲಿ ನಿರ್ಮಿಸುತ್ತಿರುವ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಇದರಲ್ಲಿ ಆರಂಭದಲ್ಲಿಯೇ ಗಮನ ಸೆಳೆದದ್ದು ನಟ ಶಿವರಾಜ್​ ಕುಮಾರ್​ ಅವರ ಹೆಣ್ಣಿನ ಪಾತ್ರ.

36
ನಾನಾ ಅವತಾರದಲ್ಲಿ ಶಿವಣ್ಣ

45 ಚಿತ್ರದಲ್ಲಿ ಕೊಂಚ ಲೇಟ್ ಆಗಿ ಎಂಟ್ರಿಕೊಟ್ಟರೂ ಶಿವಣ್ಣನ ಪಾತ್ರ ಲೇಟೆಸ್ಟ್ ಆಗಿದೆ. 45 ಚಿತ್ರದಲ್ಲಿ ಶಿವಣ್ಣ ನಾನಾವತಾರ ತಾಳಿದ್ದಾರೆ. ಅದರಲ್ಲಿ ಒಂದು ಈ ಹೆಣ್ಣಿನ ಅವತಾರ. ಈ ಅವತಾರದಲ್ಲಿ ಫೈಟಿಂಗ್​ ಸೇರಿದಂತೆ ಹಲವು ದೃಶ್ಯಗಳಿದ್ದು, ಅದನ್ನೆಲ್ಲಾ ಶಿವರಾಜ್​ ಕುಮಾರ್​ ಅವರು ಮಾಡಿಲ್ಲ, ಬದಲಾಗಿದೆ ಅವರ ಡ್ಯೂಪ್​ ಇದನ್ನು ಮಾಡಿದ್ದಾರೆ.

46
ಯಾರಿವರು?

ಅವರ ಹೆಸರು ಇಬ್ರಾಹಿಂ. ಇಬ್ರಾಹಿಂ ಅವರು ಇದೀಗ ಈ ವಿಷಯವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಶಿವರಾಜ್​ ಕುಮಾರ್​ ಅವರ ಹೆಣ್ಣಿನ ವೇಷದಂತೆಯೇ, ಇಬ್ರಾಹಿಂ ಅವರನ್ನು ರೆಡಿ ಮಾಡುತ್ತಿರುವುದನ್ನು ನೋಡಬಹುದಾಗಿದೆ.

56
ಫೈಟಿಂಗ್​ ಸೀನ್​

ಜೊತೆಗೆ ಇದೇ ವೇಷದಲ್ಲಿ ಶಿವಣ್ಣ ಪರವಾಗಿ ಫೈಟ್​ ಮಾಡಿರುವುದನ್ನು ಕೂಡ ಅವರು ಶೇರ್​ ಮಾಡಿಕೊಂಡಿದ್ದಾರೆ. ಇಂಥದ್ದೊಂದು ಅವಕಾಶ ಸಿಕ್ಕಿರುವುದು ತಮ್ಮ ಪುಣ್ಯ ಎಂದು ಬರೆದುಕೊಂಡಿದ್ದಾರೆ.

66
ಫ್ಯಾಂಟಸಿ ಚಿತ್ರ

ಅಂದಹಾಗೆ, 45 ಚಿತ್ರವು, ಫ್ಯಾಂಟಸಿ ಚಿತ್ರವಾಗಿದೆ. ಮಾನವ ಮರಣ ಮತ್ತು ಗರುಡ ಪುರಾಣ, ಕರ್ಮ ಮತ್ತು ಸಾಮಾನ್ಯ ಜೀವನವು ಕಾಸ್ಮಿಕ್ ನ್ಯಾಯದೊಂದಿಗೆ ಹೇಗೆ ಘರ್ಷಣೆ ನಡೆಸುತ್ತದೆ ಎಂಬ ಬಗ್ಗೆ ಸಿನಿಮಾ ಕಥೆಯಿದೆ. ಮಲ್ಟಿ ಸ್ಟಾರರ್ ಹಾಗೂ ಬಿಗ್ ಬಜೆಟ್​ ಸಿನಿಮಾದಲ್ಲಿ ಗ್ರಾಫಿಕ್ಸ್ ತುಸು ಹೆಚ್ಚಾಗಿಯೇ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories