1.5 ಕೋಟಿ ರೂ. ಬೆಲೆಯ ಕಾರಿನಲ್ಲಿ ಓಡಾಡುವ ರಚಿತಾ ರಾಮ್, ಜಮೀರ್ ಪುತ್ರನ ಬಳಿ ಕೇಳಿದ ಸಂಭಾವನೆಗೆ ಎಲ್ಲರೂ ಶಾಕ್!

First Published | Sep 20, 2024, 1:40 PM IST

ಗಗನ ಮುಟ್ಟಿತ್ತು ರಚಿತಾ ರಾಮ್ ಸಂಭಾವನೆಯ...ಕೋಟಿ ಬೆಲೆಯ ಕಾರು ಮತ್ತು ಮನೆಯ ಸೀಕ್ರೆಟ್‌ ತಿಳಿಯಿತ್ತು ಎಂದು ನೆಟ್ಟಿಗರು.

ಸ್ಯಾಂಡಲ್‌ವುಡ್‌ ಬುಲ್ ಬುಲ್, ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಝೈದ್ ಖಾನ್ ಜೋಡಿಯಾಗಿ ನಟಿಸುತ್ತಿರುವ ಕಲ್ಟ್‌ ಚಿತ್ರದ ಮುಹೂರ್ತ ಕೆಲವು ದಿನಗಳ ಹಿಂದೆ ಅದ್ಧೂರಿಯಾಗಿ ನಡೆದಿದೆ. ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ಆಗಿದ್ದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ಕಲ್ಟ್‌ ಚಿತ್ರದ ಮುಹೂರ್ತಕ್ಕೆ ರಚಿತಾ ರಾಮ್ ಸಿಕ್ಕಾಪಟ್ಟೆ ಸಿಂಪಲ್ ಆಗಿ ಬಂದಿದ್ದರು...ಸಿಂಪಲ್ ಲುಕ್ ಸೂಪರ್ ಎಂದು ಮೆಚ್ಚಿ ಕೊಂಡಾಡುತ್ತಿದ್ದ ನೆಟ್ಟಿಗರು ಆಕೆಯ ಬಂದು ಇಳಿದ ಬಿಳಿ ಬಣ್ಣದ ದುಬಾರಿ ಕಾರನ್ನು ನೋಡಿ ಫುಲ್ ಶಾಕ್ ಆಗಿದ್ದಾರೆ. 

Tap to resize

ರಚಿತಾ ರಾಮ್ ಒಂದೊಂದೆ ಸಿನಿಮಾ ಹಿಟ್ ಆಗುತ್ತಿದ್ದಂತೆ ಸಂಭಾವನೆ ಕೂಡ ಕೊಂಚ ಕೊಂಚ ರೈಸ್ ಆಗುತ್ತಿದೆ. ಅಲ್ಲದೆ ಝೈದ್ ಖಾನ್ ಜೊತೆ ಕಲ್ಟ್‌ ಚಿತ್ರದಲ್ಲಿ ನಟಿಸಲು ರಚಿತಾ ರಾಮ್ ಡಿಮ್ಯಾಂಡ್ ಇಟ್ಟಿರುವ ಸಂಭಾವನೆ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

ಹೌದು! ರಚಿತಾ ರಾಮ್ ನಾಯಕಿಯಾಗಿ ಕಲ್ಟ್‌ ಚಿತ್ರದಲ್ಲಿ ನಟಿಸಲು 1 ಕೋಟಿ ರೂಪಾಯಿ ಸಂಭಾವನೆಯನ್ನು ಡಿಮ್ಯಾಂಡ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ. ಮೊತ್ತ ಕಿವಿಗೆ ಬೀಳುತ್ತಿದ್ದಂತೆ ಜನರು ಲೆಕ್ಕಾಚಾರ ಶುರು ಮಾಡಿದ್ದಾರೆ.

ರಚಿತಾ ರಾಮ್ ಓಡಾಡಲು ಬಳಸುವ ಕಾರಿನ ಹೆಸರು toyota vellfire. ಬೆಂಗಳೂರಿನಲ್ಲಿ ಈ ಕಾರಿನ ಬೆಲೆ ಆನ್‌ ರೋಡ್‌ ಪ್ರೈಸ್ ಆಗಿ ಆರಂಭವಾಗುವುದು 1 ಕೋಟಿ 30 ಲಕ್ಷ ರೂ.ಗಳಿಂದ. ರಚಿತಾ ಖರೀದಿಸಿರುವ ಟಾಪ್‌ ಕಾರು ಸರಿಸುಮಾರು 1 ಕೋಟಿ 50 ಲಕ್ಷ ರೂ. ಎನ್ನಲಾಗಿದೆ.

ಇನ್ನು ಸ್ಟಾರ್ ನಟಿ ಪಟ್ಟಿ ಸೇರುತ್ತಿದ್ದಂತೆ ರಚಿತಾ ರಾಮ್‌ ಬೆಂಗಳೂರಿನ ಕುಬೇರನ ಮೂಲೆಯಲ್ಲಿ ಸ್ವಂತ ಮನೆ ಮಾಡಿದ್ದಾರೆ. ಏನೆಲ್ಲಾ ಲೆಕ್ಕಾಚಾರ ಹಾಕಿದರೂ ರಾಜರಾಜೇಶ್ವರಿ ನಗರದಲ್ಲಿ ಆ ಮನೆಯ ಬೆಲೆ 2 ಕೋಟಿ ರೂಪಾಯಿ ಎನ್ನಲಾಗಿದೆ. 

 ಸಿನಿಮಾ ವಿಚಾರದಲ್ಲಿ ಮಾತ್ರ ಸಖತ್ ಓಪನ್ ಆಗಿರುವ ರಚಿತಾ ರಾಮ್ ಪ್ರೈವೇಟ್ ಲೈಫ್ ಲೀಡ್ ಮಾಡುತ್ತಾರೆ. ರಚ್ಚು ಬಳಸುವ ಬ್ಯಾಗ್ ಲಕ್ಷ ಬೆಲೆ, ಸದಾ ಕೈಯಲ್ಲಿ ಧರಿಸಿರುವ ವಾಚ್ ಕೂಡ ಲಕ್ಷ ಬೆಲೆ. ಇನ್ನು ಡೇ ಇನ್ ಆಂಡ್ ಡೇ ಔಟ್‌ಗೆ ಪರ್ಸನಲ್ ಫ್ಯಾಷನ್ ಡಿಸೈನರ್ ಇಟ್ಟುಕೊಂಡಿದ್ದಾರೆ.

ಅಷ್ಟೇ ಯಾಕೆ..ಕನ್ನಡ ಕಿರುತೆರೆ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ರಚಿತಾ ರಾಮ್ ಜಡ್ಜ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲಿಯೂ ಕೂಡ ಎಪಿಸೋಡ್‌ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ.

Latest Videos

click me!