ಶಾನ್ವಿ ಶ್ರೀವಾಸ್ತವ್ (Shanvi Srivastav) ತಮ್ಮ ಮುದ್ದಾದ ನಟನೆ ಮತ್ತು ಮುದ್ದಾಗಿ ಕನ್ನಡ ಮಾತನಾಡುವ ಮೂಲಕ, ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ, ಕನ್ನಡಿಗಳೇ ಆಗಿದ್ದಾರೆ ಅಂದ್ರೆ ತಪ್ಪಲ್ಲ. ತಮ್ಮ ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದ ಬೆಡಗಿ ಇದೀಗ, ತಮ್ಮ ಗ್ಲಾಮರಸ್ ಲುಕ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಟೆಂಪ್ರೇಚರ್ ಹೆಚ್ಚಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ (Social media) ಆಕ್ಟೀವ್ ಆಗಿರುವ ಶಾನ್ವಿ ಶ್ರೀವಾತ್ಸವ್ ಹೆಚ್ಚಾಗಿ ತಮ್ಮ ಟ್ರಾವೆಲ್ ಫೋಟೊ, ಫ್ಯಾಮಿಲಿ, ಫ್ರೆಂಡ್ಸ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರುತ್ತಾರೆ. ಈ ಬಾರಿ ಶೇರ್ ಮಾಡಿರೋ ಫೋಟೊ ತುಂಬಾನೆ ಗ್ಲಾಮರಸ್ ಆಗಿದೆ.
ಶಾನ್ವಿ ಥ್ರೋ ಬ್ಯಾಕ್ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಈ ಹಿಂದೆ ಮಾಲ್ಡೀವ್ಸ್ ಗೆ ಹೋದಾಗ ತೆಗೆಸಿಕೊಂಡಿರುವಂತಹ ಫೋಟೊಗಳನ್ನು ಹಂಚಿಕೊಂಡಿದ್ದು, ಇದರಲ್ಲಿ ನಟಿ ಬ್ಲ್ಯಾಕ್ ಆಂಡ್ ವೈಟ್ ಬಣ್ಣದ ಆಫ್ ಶೋಲ್ಡರ್ ಲಾಂಗ್ ಬಾಡಿ ಕಾನ್ ಗೌನ್ ಧರಿಸಿದ್ದು, ತಮ್ಮ ಫೋಟೊ ಮೂಲಕ ಇಂಟರ್ನೆಟಲ್ಲಿ ಕಿಚ್ಚು ಹಚ್ಚಿದ್ದಾರೆ ಶ್ರೀಮನ್ನಾರಾಯಣನ ಲಕ್ಷ್ಮೀ.
ಶಾನ್ವಿ ಈ ಲುಕ್ ಗೆ ಸಿಕ್ಕಾಪಟ್ಟೆ ಕಾಮೆಂಟ್ ಗಳು ಬಂದಿದ್ದು, ಮತ್ಸಕನ್ಯೆ, ಹಾಟ್, ಫೈರ್, ನಿಮ್ಮ ಫೋಟೊ ನೋಡಿ ನಮ್ಮ ದಿನ ಸುಂದರವಾಯ್ತು ಅಂತಾನೂ ಕಾಮೆಂಟ್ ಮಾಡಿದ್ದಾರೆ ಪಡ್ಡೆಗಳು, ಅಷ್ಟೇ ಅಲ್ಲ ಶಾನ್ವಿ ಶ್ರೀವಾತ್ಸವ್ ಅವರನ್ನ ಸಿನಿಮಾಗಳಲ್ಲೂ ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ ಫ್ಯಾನ್ಸ್. ಹಾಗಾಗಿ ಆದಷ್ಟು ಬೇಗನೆ ಸಿನಿಮಾಗಳ ಮೂಲಕ ತೆರೆ ಮೇಲೆ ಬನ್ನಿ ಅಂತಿದ್ದಾರೆ.
ನಟಿ ಶಾನ್ವಿ ಶ್ರೀವಾತ್ಸವ್ ಲವ್ಲಿ ಎನ್ನುವ ತೆಲುಗು ಸಿನಿಮಾ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ಇದರ ಮೊದಲ ಕನ್ನಡ ಸಿನಿಮಾ ಚಂದ್ರಲೇಖ. ನಂತರ ಕನ್ನಡದಲ್ಲಿ ಮಾಸ್ಟರ್ ಪೀಸ್, ಭಲೇ ಜೋಡಿ, ಸುಂದರಾಂಗ ಜಾಣ, ಮಫ್ತಿ, ಸಾಹೇಬ, ತಾರಕ್, ದ ವಿಲನ್, ಗೀತಾ, ಅವನೇ ಶ್ರೀಮನ್ನಾರಾಯಣ, ಕಸ್ತೂರಿ ಮಹಲ್, ಬಾಂಗ್ ಸಿನಿಮಾಗಳಲ್ಲಿ ನಟಿಸಿದ್ದು. ಇವರ ನಟನೆಯ ತ್ರಿಶೂಲಮ್ ಇನ್ನೂ ಬಿಡುಗದೆಯಾಗಬೇಕಿದೆ.