'ದಿ ರೈಸ್ ಆಫ್ ಅಶೋಕ' ಶೂಟಿಂಗ್ ಕಂಪ್ಲಿಟ್: ಸತೀಶ್ ನೀನಾಸಂಗೆ ನಾಯಕಿಯಾದ ಕಾಂತಾರ ಬೆಡಗಿ

Published : Jun 16, 2025, 12:44 PM IST

ಟೈಟಲ್ ಹಾಗೂ ಒಂದಷ್ಟು ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ ಸತೀಶ್ ನೀನಾಸಂ ಅಭಿನಯದ 'ದಿ ರೈಸ್ ಆಫ್ ಅಶೋಕ' ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ.

PREV
17

ಸ್ಯಾಂಡಲ್‌ವುಡ್‌ನ ನಟ ಸತೀಶ್ ನೀನಾಸಂ ಅಭಿನಯದ 'ದಿ ರೈಸ್ ಆಫ್ ಅಶೋಕ' ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ಬರಲು ಸಜ್ಜಾಗಿದ್ದು, ಇದೀಗ ಸಿನಿಮಾದ ಹೊಸ ಅಪ್ ಡೇಟ್ ಸಿಕ್ಕಿದೆ.

27

ಟೈಟಲ್ ಹಾಗೂ ಒಂದಷ್ಟು ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿರುವ 'ದಿ ರೈಸ್ ಆಫ್ ಅಶೋಕ' ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ.

37

ಸತೀಶ್ ನೀನಾಸಂ ದಿ ರೈಸ್ ಆಫ್ ಅಶೋಕ ಸಿನಿಮಾದಲ್ಲಿ ಕ್ರಾಂತಿಕಾರಿ ಯುವಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 70ರ ದಶಕದಲ್ಲಿ ನಡೆಯುವ ಕಥೆಯು, ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಕುರಿತು ಬೆಳಕು ಚೆಲ್ಲಲಿದೆ.

47

ದಿ ರೈಸ್ ಆಫ್ ಅಶೋಕ ಚಿತ್ರದಲ್ಲಿ ಸತೀಶ್‌ಗೆ ಜೋಡಿಯಾಗಿ ಕಾಂತಾರ ಬೆಡಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ವಿಶೇಷವಾಗಿ ಅವರು ರಗಡ್ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ ಎಂದು ತಿಳಿದುಬಂದಿದೆ.

57

ನಿರ್ದೇಶಕ ವಿನೋದ್ ದೊಂಡಾಲೆ ನಿಧನದ ನಂತರ ಅಶೋಕ ಬ್ಲೇಡ್ ಸಿನಿಮಾ ನಿಂತೇ ಹೋಯಿತು ಎಂದು ಸುದ್ದಿ ಹರಡಿತ್ತು. ಆದರೆ ನಟ ಸತೀಶ್ ನೀನಾಸಂ ಅವರು ದಿ ರೈಸ್ ಆಫ್ ಅಶೋಕ ಹೆಸರಿನಲ್ಲಿ ಈ ಸಿನಿಮಾವನ್ನು ಮತ್ತೆ ಕೈಗೆತ್ತಿಕೊಂಡು ಚಿತ್ರಿಕರಣವನ್ನು ಮುಗಿಸಿದ್ದಾರೆ.

67

ಈ ಸಿನಿಮಾವನ್ನು ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಯ ಸಿನಿಮಾಗಳಲ್ಲೂ ಬಿಡುಗಡೆಯಾಗಲಿದೆ. ವೃದ್ಧಿ ಕ್ರಿಯೇಷನ್ಸ್ ಮತ್ತು ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ನಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಕೂಡ ಸಿನಿಮಾ ನಿರ್ಮಾಣ ಮಾಡಿದ್ದಾರೆ.

77

ಇನ್ನು ಸಿನಿಮಾದ ತಾರಾಬಳಗದಲ್ಲಿ ಬಿ.ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರಿಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು ಹಾಗೂ ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ ಇದ್ದಾರೆ.

Read more Photos on
click me!

Recommended Stories