The Rise of Ashoka ಶೂಟಿಂಗ್​ನಲ್ಲಿ ಹಾರಿ ಹಾರಿ ಬಿದ್ದ ಹಾರಿಬಲ್​ ವಿಡಿಯೋ ಶೇರ್​ ಮಾಡಿದ ನಟಿ Saptami Gowda

Published : Mar 04, 2026, 01:37 PM IST

ಸತೀಶ್ ನೀನಾಸಮ್ ಮತ್ತು ಸಪ್ತಮಿ ಗೌಡ ಅಭಿನಯದ 'ದಿ ರೈಸ್ ಆಫ್ ಅಶೋಕ' 1970ರ ದಶಕದ ಕಥೆಯಾಗಿದೆ. ಮೇಲ್ಜಾತಿ ದೌರ್ಜನ್ಯದ ವಿರುದ್ಧ, ಸರ್ಕಾರಿ ನೌಕರಿ ತೊರೆದು ತನ್ನ ಸಮುದಾಯಕ್ಕಾಗಿ ಹೊಸ ಸಾಮ್ರಾಜ್ಯ ಕಟ್ಟಲು ಹೊರಟ ಅಶೋಕನ ಹೋರಾಟವೇ ಈ ಚಿತ್ರದ ಹೂರಣ.

PREV
16
‘ದಿ ರೈಸ್ ಆಫ್ ಅಶೋಕ’

​ಸತೀಶ್ ನೀನಾಸಮ್​ ಮತ್ತು ಸಪ್ತಮಿ ಗೌಡ ಅವರ ಅಭಿನಯನದ ‘ದಿ ರೈಸ್ ಆಫ್ ಅಶೋಕ’ (The Rise of Ashoka) ಸಿನಿಮಾ ಸದ್ದು ಮಾಡುತ್ತಿದೆ. ಸತೀಶ್ ನೀನಾಸಂ ಹಾಗೂ ನಿರ್ದೇಶಕ ವಿನೋದ್ ದೋಂಡಾಳೆ ಅವರ ಕನಸಿನ ಕೂಸಾಗಿದೆ ಈ ಚಿತ್ರ. ವಿನೋದ್ ದೋಂಡಾಳೆ ಅವರು ಸಾವಿಗೆ ಶರಣಾದ ಬಳಿಕವೂ, ಅವರ ಕನಸನ್ನು ಮುನ್ನೆಡಿಸಿಕೊಂಡು ಬಂದಿದ್ದಾರೆ ಸತೀಶ್​.

26
1970ರ ದಶಕದ ಹಿನ್ನೆಲೆ

1970ರ ದಶಕದ ಹಿನ್ನೆಲೆಯ ಸಿನಿಮಾ ಇದಾಗಿದೆ. ಅಂದು ಶೋಷಣೆಗೆ ಒಳಗಾದ, ಮೇಲ್ಜಾತಿ ದೌರ್ಜನ್ಯ ಮತ್ತು ಅಟ್ಟಹಾಸಕ್ಕೊಳಪಟ್ಟ ತಳ ಸಮುದಾಯ ಮತ್ತು ಸವಿತಾ ಸಮಾಜದವರ ಹೋರಾಟದ ಕಥೆ ಈ ಚಿತ್ರಕ್ಕಿದೆ. ಅಶೋಕನಾಗಿ ನೀನಾಸಂ ಸತೀಶ್ ಮಿಂಚಿದ್ದಾರೆ. ಅವರಿಗೆ ಸಾಥ್​ ನೀಡಿರುವವರು ನಟಿ ಸಪ್ತಮಿ ಗೌಡ.

36
ಇಂಗ್ಲಿಷ್​ ಹೆಸರು ಯಾಕೆ?

ಚಿತ್ರಕ್ಕೆ ಇಂಗ್ಲಿಷ್​ ಹೆಸರಿನ ಬಗ್ಗೆ ಇದಾಗಲೇ ಹಲವಾರು ಮಂದಿ ಪ್ರಶ್ನಿಸುತ್ತಿದ್ದು, ಅದಕ್ಕೆ ಈಗಾಗಲೇ ಸತೀಶ್​ ಅವರು ಉತ್ತರ ಕೂಡ ಕೊಟ್ಟಿದ್ದಾರೆ. ಇದು ಅಶೋಕ ಬೆಳೆದು ಬಂದ ಬಗೆಯಾಗಿದೆ. ಅದನ್ನು ಕನ್ನಡದಲ್ಲಿ ಅಶೋಕನ ಬೆಳವಣಿಗೆ ಅಥವಾ, ಅಶೋಕ ಎದ್ದ ಹೀಗೆಲ್ಲಾ ಕೊಟ್ಟರೆ ಚೆನ್ನಾಗಿ ಇರಲಿಲ್ಲ. ಕೋಲಾರದ ಚಿನ್ನದ ಗಣಿ ಎಂದು ಇಡೋದು ಚೆನ್ನಾಗಿರಲ್ಲ ಎಂದು ಹೇಗೆ ಕೆಜಿಎಫ್ ಅಂತ ಇಟ್ಟಿದ್ರೋ ಇದೂ ಹಾಗೇ ಎಂದಿದ್ದಾರೆ.

46
ಶೂಟಿಂಗ್ ವಿಡಿಯೋ ಶೇರ್​ ಮಾಡಿದ ನಟಿ

ಇದೀಗ ನಟಿ ಸಪ್ತಮಿ ಗೌಡ ಅವರು, ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಈ ಚಿತ್ರದ ಮೇಕಿಂಗ್​ ವಿಡಿಯೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. ಶೂಟಿಂಗ್​ ಸಮಯದಲ್ಲಿ ಅವರು ಪಟ್ಟಿರುವ ಸಾಹಸ ಹಾಗೂ ಕೆಲವೊಂದು ಸುಂದರ ಚಿತ್ರಗಳನ್ನು ಇದರಲ್ಲಿ ನೋಡಬಹುದಾಗಿದೆ.

56
ಏನಿದು ಸ್ಟೋರಿ?

ಅಂದಹಾಗೆ ಈ ಸಿನಿಮಾ ಸ್ಟೋರಿ ಹೇಳುವುದಾದರೆ, ಇದು ಅವರತ್ತಿ ಎಂಬ ಊರಿನ ಸುತ್ತ ಸುತ್ತುತ್ತದೆ. ಅಲ್ಲಿ ಮುಡಿ ತೆಗೆಯುವ ಕೆಲಸ ಮಾಡುವ ಗಂಗರಾಜುಗೆ ಇರುವ ಆಸೆ ಎಂದರೆ, ಮಗ ಅಶೋಕ ಚೆನ್ನಾಗಿ ಓದಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ಆಫೀಸರ್‌ ಆಗಬೇಕು ಎನ್ನುವುದು. ಅಪ್ಪನ ಆಸೆ ಈಡೇರಿಸುತ್ತಾನೆ ಮಗ.

66
ಸಿನಿಮಾ ಕ್ಲೈಮ್ಯಾಕ್ಸ್​

ಆದರೆ ಕೊನೆಗೆ ಸಿನಿಮಾ ಟರ್ನ್​ ತೆಗೆದುಕೊಳ್ಳುತ್ತದೆ. ನೌಕರಿಯ ಪತ್ರ ಬಂದು, ಕೆಲಸಕ್ಕೆ ಹಾಜರು ಆಗಬೇಕು ಎನ್ನುವಾಗಲೇ ಸರ್ಕಾರಿ ಕೆಲಸ ಬಿಟ್ಟು, ಸಂಘರ್ಷದ ಹಾದಿ ಹಿಡಿಯುತ್ತಾನೆ ಅಶೋಕ. ತಾನು, ತನ್ನದು ಅಂತ ಯೋಚಿಸದೆ ತಮ್ಮ ಸಮುದಾಯದವರ ಒಳಿತಿಗಾಗಿ ಹೊಸ ಸಾಮ್ರಾಜ್ಯವನ್ನ ಅಶೋಕ ಕಟ್ಟುವ ಕಥೆಯೇ ‘ದಿ ರೈಸ್ ಆಫ್ ಅಶೋಕ’.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories