ನಟಿ ಅಮೂಲ್ಯ ಪತಿ ಜಗದೀಶ್‌ ಆರ್‌ ಚಂದ್ರಗೆ ಉತ್ತಮ ಹುದ್ದೆ ಕೊಟ್ಟ BJP ಪಕ್ಷ! ಏನದು?

Published : Mar 02, 2026, 05:12 PM IST

Actress Amulya Husband: ನಟಿ ಅಮೂಲ್ಯ ಪತಿ ಜಗದೀಶ್‌ ಆರ್‌ ಚಂದ್ರ ಅವರು ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಈಗ ಅವರಿಗೆ ಬಿಜೆಪಿ ಪಕ್ಷವು ಒಳ್ಳೆಯ ಹುದ್ದೆಯನ್ನು ನೀಡಿದೆ. ಅನೇಕರು ಜಗದೀಶ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ. 

PREV
14
ತಂದೆ ಕೂಡ ರಾಜಕಾರಣಿ

2018ರಲ್ಲಿ ಬಿಜೆಪಿ ತೊರೆದು, ಜೆಡಿಎಸ್‌ ಪಕ್ಷಕ್ಕೆ ಬಂದಿದ್ದರು. ಆ ಬಳಿಕ ಮತ್ತೆ ಅವರು ಬಿಜೆಪಿಗೆ ಬಂದಿದ್ದರು. ಅವರು ವಿಧಾನಸಭೆ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಸಾಕಷ್ಟು ಬಾರಿ ಟಿಕೆಟ್‌ ಕೈತಪ್ಪಿತ್ತು.

24
ಜನರಿಗೆ ನೆರವು ನೀಡಿದ್ದರು

ಕೊರೊನಾ ವೇಳೆ ಕೂಡ ಅಮೂಲ್ಯ ಕುಟುಂಬವು ಸಾಕಷ್ಟು ಜನರಿಗೆ ಸಹಾಯ ಮಾಡಿತ್ತು. ಆರ್‌ ಆರ್‌ ನಗರ ಸುತ್ತಮುತ್ತ ಜಗದೀಶ್‌ ಅವರು ಕೂಡ ಒಂದಿಷ್ಟು ಸಮಸ್ಯೆಗಳಿಗೆ ದನಿ ಎತ್ತಿದ್ದರು. ಇದಕ್ಕೂ ಮುನ್ನ ಜಗದೀಶ್‌ ಅವರು ವಿದೇಶದಲ್ಲಿ ಓದಿದ್ದರು ಎನ್ನಲಾಗಿದೆ.

34
ಅಧ್ಯಕ್ಷರ ನೇಮಕ

ಜಗದೀಶ್‌ ಆರ್‌ ಚಂದ್ರ ಅವರ ತಂದೆ ಜಿ ಎಚ್‌ ರಾಮಚಂದ್ರ ಅವರು ಉದ್ಯಮಿ, ರಾಜಕಾರಣಿ ಕೂಡ ಹೌದು. ಬಿಜೆಪಿಯು ಕೇಂದ್ರ ಜಿಲ್ಲೆಯ ಮೋರ್ಚಾಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದೆ. ಅವರಲ್ಲಿ ಜಗದೀಶ್‌ ಆರ್‌ ಚಂದ್ರ ಕೂಡ ಒಬ್ಬರು.

44
ಹುದ್ದೆ ಏನು?

ಈಗ ಜಗದೀಶ್‌ ಆರ್‌ ಚಂದ್ರ ಅವರು ಯುವ ಮೋರ್ಚಾ ಅಧ್ಯಕ್ಷರಾಗಿ ಬಡ್ತಿ ಪಡೆದಿದ್ದಾರೆ. ಬಿಜೆಪಿ ಕೇಂದ್ರ ಜಿಲ್ಲಾಧ್ಯಕ್ಷರಾದ ಸಪ್ತಗಿರಿ ಗೌಡ ಅವರು ಆದೇಶ ಹೊರಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories