ಸಾನ್ಯಾ ಅಯ್ಯರ್ ಕೊರಳಲ್ಲಿ ಪಚ್ಚೆ ನೆಕ್ಲೇಸ್; ಬೆಲೆ ಹೇಳಮ್ಮ 'ಗೌರಿ' ಎಂದ ಹೆಂಗಸರು!

First Published | Sep 4, 2023, 11:09 AM IST

 ವೈರಲ್ ಆಯ್ತು ನಟಿ ಸಾನ್ಯಾ ಅಯ್ಯರ್ ಸೀರೆ ಲುಕ್. ಗೌರಿ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ....

ಇಂದ್ರಜಿತ್‌ ಲಂಕೇಶ್‌ ಮಗ ಸಮರ್‌ಜಿತ್‌ ಲಂಕೇಶ್‌ ನಟನೆಯ ‘ಗೌರಿ’ ಚಿತ್ರಕ್ಕೆ ಇತ್ತೀಚೆಗಷ್ಟೆ ಅದ್ದೂರಿಯಾಗಿ ಮುಹೂರ್ತ ನಡೆಯಿತು. ಆಗ ಸಾನ್ಯಾ ಕಾಣಿಸಿಕೊಂಡ ರೀತಿ ವೈರಲ್ ಆಗುತ್ತಿದೆ.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕ್ಲಾಪ್‌ ಬೋರ್ಡ್‌ಗೆ ಪೂಜೆ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ಕೊಟ್ಟರು.

Tap to resize

ಸಾನ್ಯಾ ಅಯ್ಯರ್‌ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಈ ಚಿತ್ರವನ್ನು ಅರ್ಪಿತಾ ಲಂಕೇಶ್‌ ನಿರ್ಮಿಸುತ್ತಿದ್ದಾರೆ. ಮಾನಸಿ ಸುಧೀರ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇಂದ್ರಜಿತ್‌ ಲಂಕೇಶ್‌ ಈ ಚಿತ್ರದ ಕುರಿತು, ‘ಸಮರ್‌ಜಿತ್‌ ಹಾಗೂ ಸಾನ್ಯಾ ಅಯ್ಯರ್‌ ಉತ್ತಮ ಪ್ರತಿಭೆಗಳು. ಚಿತ್ರಕ್ಕೆ ಗೌರಿ ಎನ್ನುವ ಹೆಸರು ಇಟ್ಟಿರುವುದು ನನ್ನ ಅಕ್ಕ ಗೌರಿ ಲಂಕೇಶ್ ಮೇಲಿನ ಪ್ರೀತಿಗೆ ಮತ್ತು ಕತೆಗೆ ಸೂಕ್ತ ಎನ್ನುವ ಕಾರಣಕ್ಕೆ. 

ನೈಜ ಘಟನೆಗಳನ್ನು ಆಧರಿಸಿರುವ ಈ ಚಿತ್ರದಲ್ಲಿ ತುಂಬಾ ವಿಷಯಗಳಿವೆ’ ಎಂದರು. ಕವಿರಾಜ್‌, ಡಾ ವಿ ನಾಗೇಂದ್ರ ಪ್ರಸಾದ್‌, ಕೆ ಕಲ್ಯಾಣ್‌ ಚಿತ್ರಕ್ಕೆ ಹಾಡುಗಳನ್ನು ಬರೆಯುತ್ತಿದ್ದು, ಬಿ ಎ ಮಧು ಹಾಗೂ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ.

ಸಾನ್ಯಾ ಅಯ್ಯರ್ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ ನೆಟ್ಟಿಗರ ಗಮನ ಸೆಳೆಯಿತ್ತು. ರೆಟ್ರೋ ಸ್ಟೈಲ್‌ನಲ್ಲಿ ಸೀರೆ ಮತ್ತು ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋ ವೈರಲ್ ಆಗಿದೆ.

ಪುಟ್ಟಗೌರಿ ಧಾರಾವಾಹಿ ಮೂಲಕ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಸಾನ್ಯಾ ಅಯ್ಯರ್ ಈಗ ಗೌರಿ ಸಿನಿಮಾದ ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಶುಭವಾಗಲಿ ಎಂದು ವಿಶ್ ಮಾಡಿದ್ದಾರೆ.  

Latest Videos

click me!