'ಒಂದ್‌ ಗ್ಲಾಸ್‌ ಕೋಲಾ ಕುಡಿಯೋಕೆ ಅಲ್ಲಿಗೆ ಹೋಗಿದ್ಯಲ್ಲ..' ಸೋನು ಗೌಡ ಫಾರಿನ್‌ ಟ್ರಿಪ್‌ಗೆ ಭಯಂಕರ ಕಾಮೆಂಟ್ಸ್‌!

Published : Sep 02, 2023, 06:16 PM ISTUpdated : Sep 02, 2023, 06:17 PM IST

ಟಿಕ್‌ ಟಾಕ್‌ ಸ್ಟಾರ್‌ ಹಾಗೂ ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಸೋನು ಶ್ರೀನಿವಾಸ್‌ ಗೌಡ  ಮಾಲ್ಡೀವ್ಸ್‌ ಪ್ರವಾಸದಲ್ಲಿದ್ದಾರೆ. ಪ್ರವಾಸದಲ್ಲಿನ ಸಖತ್‌ ಫೋಟೋಸ್‌ಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

PREV
115
'ಒಂದ್‌ ಗ್ಲಾಸ್‌ ಕೋಲಾ ಕುಡಿಯೋಕೆ ಅಲ್ಲಿಗೆ ಹೋಗಿದ್ಯಲ್ಲ..' ಸೋನು ಗೌಡ ಫಾರಿನ್‌ ಟ್ರಿಪ್‌ಗೆ ಭಯಂಕರ ಕಾಮೆಂಟ್ಸ್‌!

ಸೋನು ಶ್ರೀನಿವಾಸ್‌ ಗೌಡ, ಸೋಶಿಯಲ್‌ ಮೀಡಿಯಾದಿಂದಲೇ ಪ್ರಖ್ಯಾತಿ ಹಾಗೂ ಕುಖ್ಯಾತಿ ಎರಡನ್ನೂ ಪಡೆದುಕೊಂಡ ಸೆಲೆಬ್ರಿಟಿ. ಟಿಕ್‌ ಟಾಕ್‌ ವಿಡಿಯೋಗಳ ಮೂಲಕವೇ ದೊಡ್ಡ ಮಟ್ಟದ ಜನಪ್ರಿಯತೆ ಹಾಗೂ ಫಾಲೋವರ್ಸ್‌ಗಳನ್ನು ಪಡೆದುಕೊಂಡಿದ್ದರು.

215

ಟಿಕ್‌ಟಾಕ್‌ ಹಾಗೂ ಸೋಶಿಯಲ್‌ ಮೀಡಿಯಾದಲ್ಲಿ ಪಡೆದುಕೊಂಡ ಜನಪ್ರಿಯತೆಯ ಕಾರಣದಿಂದಾಗಿಯೇ ಅವರು ಬಿಗ್‌ ಬಾಸ್‌ನಲ್ಲಿ ಸ್ಪರ್ಧೆ ಮಾಡುವ ಅವಕಾಶವನ್ನೂ ಪಡೆದುಕೊಂಡಿದ್ದರು.

315

ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಾಕಿದ್ದ ಸೋನು ಶ್ರೀನಿವಾಸ್‌ ಗೌಡ, ತನ್ನನ್ನು ಕೆಟ್ಟದಾಗಿ ಟ್ರೋಲ್‌ ಮಾಡುತ್ತಿರುವುದರ ಬಗ್ಗೆ ನೊಂದುಕೊಂಡು ಮಾತನಾಡಿದ್ದರು.

415

ನನ್ನನ್ನು ಕೆಟ್ಟ ರೀತಿಯಲ್ಲಿ ಟ್ರೋಲ್‌ ಮಾಡುವ ಮೂಲಕ ನನ್ನ ಕುಟುಂಬಕ್ಕೆ ನೋವು ಕೊಡಬೇಡಿ ಎಂದು ಕಣ್ಣೀರು ಹಾಕುತ್ತಲೇ ಅವರು ಮಾತನಾಡಿದ್ದರು.

515

ಈ ವಿಡಿಯೋವನ್ನು ಪೋಸ್ಟ್‌ ಮಾಡಿದ ಕೆಲವೇ ದಿನಗಳಲ್ಲಿ ಸೋನು ಗೌಡ ವಿದೇಶಕ್ಕೆ ಹಾರಿದ್ದು, ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಬಿಂದಾಸ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

615

ವಿದೇಶ ಪ್ರವಾಸಕ್ಕೆ ಹೋಗಿರುವ ಚಿತ್ರಗಳನ್ನು ಅಲ್ಲಿನ ಬೀಚ್‌ನಲ್ಲಿ ಬಿಂದಾಸ್‌ ಆಗಿ ಎಂಜಾಯ್‌ ಮಾಡುತ್ತಿರುವ ಚಿತ್ರಗಳನ್ನು ಸ್ವತಃ ಸೋನು ಗೌಡ ಹಂಚಿಕೊಂಡಿದ್ದಾರೆ.

715

ಒಂದು ಚಿತ್ರದಲ್ಲಿ ಕೈಯಲ್ಲಿ ವೈನ್‌ ಗ್ಲಾಸ್‌ ಹಿಡಿದುಕೊಂಡು ಪೋಸ್‌ ನೀಡಿರುವ ಸೋನು ಗೌಡ ಮತ್ತೊಂದು ಚಿತ್ರದಲ್ಲಿ ವೈನ್‌ ಕುಡಿಯುತ್ತಿರುವ ಚಿತ್ರವನ್ನು ಪೋಸ್ಟ್‌ ಮಾಡಿದ್ದಾರೆ.

815

ಸೋನು ಗೌಡ ವಿದೇಶ ಪ್ರವಾಸಕ್ಕೆ ಹೋಗಿರುವುದು ಮಾಲ್ಡೀವ್ಸ್‌ಗೆ. ಒಬ್ಬರೇ ಹೋಗಿದ್ದಾರೆಯೇ ಅಥವಾ ಸ್ನೇಹಿತ/ಸ್ನೇಹಿತೆಯರ ಜೊತೆ ಹೋಗಿದ್ದಾರೆಯೇ ಎನ್ನುವ ಮಾಹಿತಿಯನ್ನು ನೀಡಿಲ್ಲ.

915

ಮಾಲ್ಡೀವ್ಸ್‌ನ ರೆಸಾರ್ಟ್‌ನಲ್ಲಿ ವಿವಿಧ ರೀತಿಯ ಭಂಗಿಗಳಲ್ಲಿರುವ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಅದರೊಂದಿಗೆ ಅಲ್ಲಿನ ಆಹಾರದ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ.

1015

ಯಾರಾದರೂ ತಮ್ಮ ಕುರಿತಾಗಿ ಟ್ರೋಲ್‌ ಮಾಡಿದರೆ, ಸೋಶಿಯಲ್‌ ಮೀಡಿಯಾದಲ್ಲಿಯೇ ಕಣ್ಣೀರು ಇಡುವ ಸೋನು ಗೌಡ, ಟ್ರೋಲ್‌ ಆಗುವಂಥದ್ದೇ ಹಲವಾರು ವಿಚಾರಗಳನ್ನು ಪೋಸ್ಟ್‌ ಮಾಡುತ್ತಲೇ ಇರುತ್ತಾರೆ.

1115

ಇದರಿಂದಾಗಿ ಟ್ರೋಲ್‌ ಮಾಡುವವರಿಗೂ ಸೋನು ಗೌಡ ಇನ್ಸ್‌ಟಾಗ್ರಾಮ್‌ ಪೇಜ್‌ ಎಂದರೆ ಅಚ್ಚುಮೆಚ್ಚು. ಅವರ ವಿಡಿಯೋ ಹಾಗೂ ಪೋಸ್ಟ್‌ಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ.

1215

ಕೆಲ ಸಮಯದಲ್ಲಿ ಹಿಂದೆ ಸೋನು ಗೌಡ ಅವರ ಕೆಲ ಖಾಸಗಿ ಫೋಟೋ ಹಾಗೂ ವಿಡಿಯೋಗಳು ಮೊಬೈಲ್‌ಗಳಲ್ಲಿ ಹರಿದಾಡಿತ್ತು. ಆ ಬಳಿಕ ಕೆಲ ಸಮಯ ಸೋನು ಗೌಡ ನಾಪತ್ತೆಯಾಗಿದ್ದರು.
 

1315

ಟಿಕ್‌ ಟಾಕ್ ರೀಲ್ಸ್‌ನಿಂದ ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡಿದ್ದ ಸೋನು ಗೌಡ ಬಳಿಕ ಬಿಗ್ ಬಾಸ್ ಒಟಿಟಿ (Bigg Boss Ott) ಅಂಗಳಕ್ಕೆ ಕಾಲಿಟ್ಟು ಜನಪ್ರಿಯತೆ ಗಳಿಸಿದ್ದರು.

1415

ಎಂದಿನಂತೆ ಸೋನು ಗೌಡ ಹಂಚಿಕೊಂಡಿರುವ ಫೋಟೋಗಳಿಗೆ ಸಾಕಷ್ಟು ಟ್ರೋಲ್‌ ಕಾಮೆಂಟ್‌ಗಳು ಬಂದಿವೆ. ಒಂದು ಗ್ಲಾಸ್‌ ಕೋಲಾ ಕುಡಿಯೋಕೆ ಅಲ್ಲಿ ತನಕ ಹೋಗಬೇಕಿತ್ತೇ ಎಂದು ಪ್ರಶ್ನೆ ಮಾಡಿದ್ದಾರೆ.

1515

ಇನ್ನೂ ಕೆಲವರು ವೈನ್‌ ಗ್ಲಾಸ್‌ ಹಾಗೂ ಸಿಗರೇಟ್‌ ಹಿಡಿದುಕೊಂಡು ಪೋಸ್‌ ನೀಡಿರುವ ಸೋನು ಶ್ರೀನಿವಾಸ್‌ ಗೌಡ ವಿರುದ್ಧ ಕಿಡಿಕಾರಿದ್ದಾರೆ.

ಪಿಂಕ್‌ ಸೀರೆಯಲ್ಲಿ ಅಪ್ಸರೆಯಂತೆ ಕಂಡ ಕಾಜೋಲ್‌, 'ನಿಮಗೆ ವಯಸ್ಸೇ ಆಗಿಲ್ಲ' ಅಂದ್ರು ಫ್ಯಾನ್ಸ್‌!

Read more Photos on
click me!

Recommended Stories