ಕಿಚ್ಚ ಸುದೀಪ್ (Kiccha Sudeep) ಪುತ್ರಿ ಸಾನ್ವಿ ಸುದೀಪ್ ತಮ್ಮ ಫ್ಯಾಮಿಲಿ ಜೊತೆಗಿನ ಮುದ್ದಾದ ಫೋಟೊ ಶೇರ್ ಮಾಡಿದ್ದು, ಅಭಿಮಾನಿಗಳು ಅಪ್ಪ-ಮಗಳ ಜೋಡಿ ಸೂಪರ್ ಎಂದಿದ್ದಾರೆ.
27
ಸಾನ್ವಿ ಸುದೀಪ್ (Sanvi Sudeep) ತಮ್ಮ ಇನ್’ಸ್ಟಾಗ್ರಾಂನಲ್ಲಿ ಒಂದಷ್ಟು ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ಒಂದು ಫೋಟೊದಲ್ಲಿ ಅಪ್ಪನ ಜೊತೆಗೆ ನಿಂತು ಮುದ್ದಾಗಿ ಸ್ಮೈಲ್ ಕೊಟ್ಟಿದ್ದಾರೆ. ಈ ಫೋಟೊ ಅಭಿಮಾನಿಗಳ ಮನ ಗೆದ್ದಿದೆ.
37
ಸಾನ್ವಿ ಬ್ಲ್ಯಾಕ್ ಟಾಪ್ ಜೊತೆಗೆ ಬ್ಲ್ಯಾಕ್ ಆಂಡ್ ವೈಟ್ ಓವರ್ ಕೋಟ್ ಧರಿಸಿದ್ದು, ಜೀನ್ಸ್ ಧರಿಸಿದ್ದಾರೆ, ಕಿಚ್ಚ ಸುದೀಪ್ ಕೂಡ ಬ್ಲ್ಯಾಕ್ ಹೂಡಿ ಧರಿಸಿ ಮಗಳ ಜೊತೆಗೆ ಪೋಸ್ ಕೊಟ್ಟಿದ್ದಾರೆ. ಮತ್ತೆರಡು ಫೋಟೊಗಳಲ್ಲಿ ಪ್ರಿಯಾ ಸುದೀಪ್ ಸೇರಿ ಮತ್ತಿತರರನ್ನು ಕಾಣಬಹುದು.
47
ಈ ಫೋಟೊವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಸೂಪರ್ ಅಪ್ಪ-ಮಗಳು, ಎಷ್ಟೋ ಅಭಿಮಾನಿಗಳ ಕನಸು ಬಾಸ್ ಜೊತೆಗೆ ಒಂದು ಫೋಟೋ ತಗೋಬೇಕು ಅಂತ ಅಂತದ್ರಲ್ಲಿ ನೀವು ಅವರ ಮಗಳಾಗಿ ಹುಟ್ಟಿದ್ದೀರಾ ತುಂಬಾನೇ ಪುಣ್ಯವಂತರು ನೀವು ಎಂದು ಸಹ ಕಾಮೆಂಟ್ ಮಾಡಿದ್ದಾರೆ.
57
ಇನ್ನು ಸುದೀಪ್ ಚಾಕಲೇಟ್ ಬಾಯ್ ಲುಕ್ ಕೂಡ ಅಭಿಮಾನಿಗಳ ಮನ ಗೆದ್ದಿದೆ. ಹೂಡಿ ಧರಿಸಿ, ಕನ್ನಡಕ ಹಾಕಿ, ಸಿಂಪಲ್ ಆಗಿ ಒಂದು ಸ್ಮೈಲ್ ಕೊಟ್ಟಿದ್ದು, ಈ ನಗುವಿಗೆ ಜನ ಫಿದಾ ಆಗಿದ್ದಾರೆ. ನಮ್ಮ ಹೃದಯ ಕದ್ದು ಬಿಟ್ರಿ ಎನ್ನುತ್ತಿದ್ದಾರೆ.
67
ಸಾನ್ವಿ ಸಿನಿಮಾ ಇಂಡಸ್ಟ್ರಿಗೆ (film industry) ಕಾಲಿಡದಿದ್ದರೂ ಸಹ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈಗಾಗಲೇ ಹಾಡುಗಳ ಮೂಲಕ ಗಮನ ಸೆಳೆದಿರುವ ಸಾನ್ವಿ, ಕಿಚ್ಚ ಸೋದರಳಿಯ ಸಂಚಿತ್ ಸಿನಿಮಾಕ್ಕೆ ಹಾಡು ಕೂಡ ಹಾಡಿದ್ದಾರೆ.
77
ಇನ್ನು ಸಾನ್ವಿ ಸಿನಿಮಾ ಇಂಡಷ್ಟ್ರಿಗೆ ಕಾಲಿಡುವ ಬಗ್ಗೆ ಗುಸು ಗುಸು ಕೇಳಿ ಬರುತ್ತಿದೆ. ಆದರೆ ಯಾವಾಗ? ಏನು? ಅನ್ನೋ ಕುರಿತು ಮಾಹಿತಿ ಇಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸಂಚಿತ್ ಸಾನ್ವಿ ನನಗೆ ಹಾಗೂ ಸುದೀಪ್ ಸರ್ ಗೆ ಸೇರಿಸಿ ಕಥೆ ರೆಡಿ ಮಾಡಿದ್ದಾರೆ ಎಂದಿದ್ದಾರೆ. ಹಾಗಾಗಿ ನಿರ್ದೇಶಕಿಯಾಗಿ ಸಾನ್ವಿಯನ್ನು ತೆರೆ ಮೇಲೆ ಕಾಣಬಹುದೇನೊ.