ಮ್ಯಾಂಗೋ ಪಚ್ಚನಾದ ಕಿಚ್ಚ ಸುದೀಪ್ ಅಕ್ಕನ ಮಗ: ರಿವೀಲ್ ಆಯ್ತು ಸಂಚಿಯ ಖಡಕ್ ಲುಕ್!

Published : Feb 06, 2025, 12:26 PM IST

ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್‌ ಹುಟ್ಟುಹಬ್ಬದಂದು ಹೊಸ ಸಿನಿಮಾ ಶೀರ್ಷಿಕೆಯನ್ನು ನಟ ಕಿಚ್ಚ ಸುದೀಪ್‌ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. 

PREV
16
ಮ್ಯಾಂಗೋ ಪಚ್ಚನಾದ ಕಿಚ್ಚ ಸುದೀಪ್ ಅಕ್ಕನ ಮಗ: ರಿವೀಲ್ ಆಯ್ತು ಸಂಚಿಯ ಖಡಕ್ ಲುಕ್!

ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್‌ ನಟನೆಯ ಹೊಸ ಚಿತ್ರಕ್ಕೆ ‘ಮ್ಯಾಂಗೋ ಪಚ್ಚ’ ಎಂದು ಹೆಸರಿಡಲಾಗಿದೆ. ಸಂಚಿ ಹುಟ್ಟುಹಬ್ಬದಂದು ಸಿನಿಮಾ ಶೀರ್ಷಿಕೆಯನ್ನು ಕಿಚ್ಚ ಸುದೀಪ್‌ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. 

26

ಈ ವೇಳೆ ಸಿನಿಮಾದ ಪಾತ್ರ ಪರಿಚಯದ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋದಲ್ಲಿ ಸಂಚಿಯ ಖಡಕ್ ಲುಕ್ ರಿವೀಲ್ ಆಗಿದೆ. ಇದು ಮೈಸೂರು ಹಿನ್ನೆಲೆಯ ಕ್ರೈಂ ಥ್ರಿಲ್ಲರ್ ಆಗಿದ್ದು, 2001ರಿಂದ 2011ರ ಅವಧಿಯಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿವೆ. 

36

ಮೊದಲ ಪ್ರಯತ್ನದಲ್ಲಿಯೇ ಸಂಚಿತ್ ಹೀರೋ ಆಗಿದ್ದಾರೆ. ಕೆ.ಆರ್.ಜಿ ಹಾಗೂ ಸುದೀಪ್ ಅವರ ನಿರ್ಮಾಣ ಸಂಸ್ಥೆ ಈ ಚಿತ್ರವನ್ನ ಜಂಟಿಯಾಗಿಯೇ ನಿರ್ಮಾಣ ಮಾಡುತ್ತಿವೆ. ಈ ಸಿನಿಮಾದಲ್ಲಿ ಮೈಸೂರಿನ ಕಥೆಯನ್ನೆ ಹೇಳಲಾಗುತ್ತಿದೆ.

46

ಸಂಚಿತ್ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ನಟನೆಗೆ ಸಂಬಂಧಿಸಿದ ಕೋರ್ಸ್ ಮಾಡಿದ್ದಾರೆ. ಹಾಗೇ ಮಾರ್ಷಲ್ ಆರ್ಟ್ಸ್ ಅನ್ನು ಕಲಿತಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ.
 

56

ಹೆಚ್ಚು ಕಡಿಮೆ ಕಿಚ್ಚ ಸುದೀಪ್ ಎತ್ತರವಿರುವ ಸಂಚಿತ್ 'ಮ್ಯಾಂಗೋ ಪಚ್ಚ' ಪ್ರೋಮೊ ಹಾಗೂ ಟೈಟಲ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ರಗಡ್ ಗೆಟಪ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ನಿದ್ದೆ ಕದ್ದಿದ್ದಾರೆ.

66

ಕಾಜಲ್ ಕುಂದರ್ ಸಿನಿಮಾದ ನಾಯಕಿ. ವಿವೇಕ್‌ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅಕ್ಕನ ಮಗ ಜೈ, ಮಾಲಾಶ್ರೀ ನಟಿಸುತ್ತಿದ್ದಾರೆ. ಚರಣ್‌ ರಾಜ್ ಸಂಗೀತ ನಿರ್ದೇಶನವಿದೆ.

Read more Photos on
click me!

Recommended Stories