ಕೈ ತುಂಬಾ ಸಂಬಳ ಕೊಡುತ್ತಿದ್ದ ಐಟಿ ಕಂಪನಿಯಿಂದ ಹೊರ ನಡೆದ ಸಂಜನಾ; ಫ್ಯಾನ್ಸ್‌ ಫುಲ್ ಶಾಕ್

First Published | Jan 10, 2025, 11:50 AM IST

ಕೈಯಲ್ಲಿ ಇದ್ದ ಕೆಲಸ ಬಿಟ್ಟು ಸಿನಿಮಾ ಹಿಂದೆ ಬಂದ ಸಂಜನಾ. ಕೆಲಸ ಬಿಟ್ಟಿದ್ದಕ್ಕೆ ಧೈರ್ಯ ಮೆಚ್ಚಬೇಕು ಎಂದ ನೆಟ್ಟಿಗರು.... 

2019ರಲ್ಲಿ ಕೆಮಿಸ್ಟ್ರಿ ಅಫ್ ಕರಿಯಪ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ಕೊಡಗಿನ ಸುಂದರಿ ಸಂಜನಾ ಆನಂದ್. 

ಕೊಡಗಿನ ಸುಂದರೆ ಹುಟ್ಟಿದ್ದು ಬೆಳೆದಿದ್ದು ಬೆಂಗಳೂರು. ಪೋಷಕರ ಆಸೆಯಂತೆ ಕಂಪ್ಯೂಟರ್ ಸೈನ್ಸ್ ಮುಗಿಸಿಕೊಂಡು ಪ್ರತಿಷ್ಠಿತ ಡೆಲ್ ಕಂಪನಿಯಲ್ಲಿ ಸುಮಾರು 2 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. 

Tap to resize

ಸಿನಿಮಾ ಆಫರ್‌ ಸಿಕ್ಕ ಕೂಡಲೇ ಕೈ ತುಂಬಾ ಸಂಬಳ ಕೊಡುತ್ತಿದ್ದ ಕಂಪನಿಯಿಂದ ಹೊರ ನಡೆದು ಜೀವನ ನಡೆಸುತ್ತಾರೆ. ಮೊದಲಿನಿಂದಲೂ ಬಣ್ಣದ ಪ್ರಪಂಚ ಮೇಲೆ ಆಸೆ ಇದ್ದ ಕಾರಣ ಕೆಲಸ ಬಿಡಲು ಧೈರ್ಯ ಮಾಡಿದ್ದಾರೆ. 

ಅಯ್ಯೋ ಕೈ ತುಂಬಾ ಸಂಬಳ ಸಿಗುವ ಕೆಲಸ ಬಿಡಲು ಮನಸ್ಸು ಬರುವುದಿಲ್ಲ ಅಲ್ಲದೆ ಧೈರ್ಯ ಬರುವುದಿಲ್ಲ ಆದರೂ ನೀವು ತೆಗೆದುಕೊಂಡ ನಿರ್ಧಾರ ಮೆಚ್ಚಬೇಕು ಎನ್ನುತ್ತಿದ್ದಾರೆ ಫ್ಯಾನ್ಸ್.

ಕೆಮಿಸ್ಟ್ರಿ ಆಫ್ ಕರಿಯಪ್ಪ ಸೂಪರ್ ಹಿಟ್ ಆಗುತ್ತಿದ್ದಂತೆ ದುನಿಯಾ ವಿಜಯ್ ಜೊತೆ ಸಲಗ ಚಿತ್ರದಲ್ಲಿ ನಟಿಸಲು ಆರಂಭಿಸುತ್ತಾರೆ.  ಅದಾದ ಮೇಲೆ ಶೋಕಿವಾಲಾ, ವಿಂಡೋ ಸೀಟ್,ಕುಷ್ಕ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸುತ್ತಾರೆ.

'ನನ್ನ ಸ್ನೇಹಿತರೊಬ್ಬರು ನಿರ್ದೇಶಕರಾಗಲು ಕಿರು ಚಿತ್ರ ಮಾಡುವಾಗ ಅದರಲ್ಲಿ ನನ್ನ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡರು. ಈ ಚಿತ್ರಕ್ಕಾಗಿ ಶೂಟ್‌ ಮಾಡಿದ್ದ ಪ್ರಮೋ ಯೂಟ್ಯೂಬ್‌ನಲ್ಲಿ ಹಾಕಿದ್ದರು. ಅದನ್ನು ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಚಿತ್ರತಂಡ ನೋಡಿ ಆಡಿಷನ್‌ಗೆ ಕರೆಯಿತು. ಹಾಗೆ ನಾನು ಸಿನಿಮಾ ನಂಟಿಗೆ ಬಂದಿದೆ' ಹಲವು ವರ್ಷಗಳ ಹಿಂದೆ ಹೇಳಿದ್ದರು.

Latest Videos

click me!