ನಟಿ ಪ್ರಿಯಾಂಕ ತಿಮ್ಮೇಶ್ ಟೀಶರ್ಟ್ ಮೇಲೆತ್ತಿ ತೋರಿಸುತ್ತಿರುವುದಾದರೂ ಏನು?

First Published | Aug 28, 2024, 5:25 PM IST

ದಕ್ಷಿಣ ಭಾರತದ ಕನ್ನಡ, ತಮಿಳು ಹಾಗೂ ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿದ ನಮ್ಮ ಭದ್ರಾವತಿ ಹುಡುಗಿ ಕನ್ನಡತಿ ಪ್ರಿಯಾಂಕ ತಿಮ್ಮೇಶ್ ಕೆಲವು ಸಿನಿಮಾಗಳಲ್ಲಿ ನಟಿಸಿದರೂ ಹೆಚ್ಚು ಪ್ರಸಿದ್ಧಿಗೆ ಬಂದಿರಲಿಲ್ಲ. ಒಮ್ಮೆ ಬಿಗ್ ಬಾಸ್ ಮನೆಗೆ ಬಂದು ಹೋದ ನಂತರ ಎಲ್ಲರಿಗೂ ಪರಿಚಿತಳಾಗಿದ್ದಾಳೆ. ಬಬ್ಲಿಯಾಗಿದ್ದ ಪ್ರಿಯಾಂಕಾ ತಿಮ್ಮೇಶ್ ಈಗ ಭರ್ಜರಿ ವರ್ಕೌಟ್ ಮಾಡುತ್ತಾ ತಾವು ಧರಿಸಿ ಟೀ ಶರ್ಟ್ ಎತ್ತಿ ಎತ್ತಿ ತರಿಸುತ್ತಿದ್ದಾರೆ. ಆದರೆ, ಅಸಲಿಯಾಗಿ ಅದೇನು ತೋರಿಸುತ್ತಿದ್ದಾರೆ ಎನ್ನುವುದನ್ನು ನೀವೇ ನೋಡಿ ಹೇಳಬೇಕು.

ಶಿವಮೊಗ್ಗ ಭದ್ರಾವತಿಯ ಹುಡುಗಿ ಪ್ರಿಯಾಂಕಾ ತಿಮ್ಮೇಶ್ ಮಾಧ್ಯಮಗಳ ಮುಂದೆ ಹೆಚ್ಚು ಸಕ್ರಿಯವಾಗಿರದೇ ತಾವಾಯ್ತು, ತಮ್ಮ ಸಿನಿಮಾಗಳಾಯ್ತು ಎಂದು ಕೆಲಸ ಮಾಡಿಕೊಂಡಿರುವ ಹುಡುಗಿ ಆಗಿದ್ದಾಳೆ. ಆದರೆ, ಕಳೆದ ಎರಡ್ಮೂರು ವರ್ಷಗಳ ಹಿಂದೆ ಬಿಗ್ ಬಾಸ್ ಸೀಸನ್ -8ರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಪ್ರವೇಶ ಪಡೆದ ಬ್ಯೂಟಿ ಪ್ರಿಯಾಂಕಾ ತಿಮ್ಮೇಶ್ ರಾಜ್ಯದಾದ್ಯಂತ ಎಲ್ಲರಿಗೂ ಪರಿಚಿತಳಾಗಿದ್ದಾಳೆ.

ಕನ್ನಡ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಪ್ರಿಯಾಂಕ ತಿಮ್ಮೇಶ್ ತಮ್ಮ ಸೌಂದರ್ಯ ಹಾಗೂ ಪ್ರತಿಭೆಯಿಂದ ದಕ್ಷಿಣ ಭಾರತದ ಕನ್ನಡ, ತಮಿಳು ಹಾಗೂ ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ, ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶಗಳಿಂದ ವಂಚಿತರಾಗಿದ್ದಾರೆ. ಈವರೆಗೆ ಅವರ ಯಾವುದೇ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗದಿರುವ ಕಾರಣ ಬ್ರೇಕ್‌ಲೆಸ್ ಆಗಿ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Tap to resize

ಪ್ರಿಯಾಂಕ ತಿಮ್ಮೇಶ್ ಹೆಚ್ಚು ಸೌಂದರ್ಯವತಿಯಾಗಿದ್ದರೂ ಕುಳ್ಳಗಿರುವ ಹಿನ್ನೆಲೆಯಲ್ಲಿ ಸ್ವಲ್ಪ ದಪ್ಪವಾದರೂ ಬಬ್ಲಿ, ಬಬ್ಲಿಯಾಗಿ ಕಾಣಿಸುತ್ತಾರೆ. ಆದರೆ, ಈಕೆಯೊಬ್ಬ ನಟಿಯಾಗಿ ದಪ್ಪಗಿರುವುದು ಸಿನಿಮಾ ನಟಿಗೆ ಒಳ್ಳೆಯದಲ್ಲ ಎಂದು ಗೊತ್ತಿದ್ದರೂ ಯಾವುದೇ ಡಯಟ್ ಮಾಡುವುದು, ವರ್ಕೌಟ್ ಮಾಡುವುದನ್ನು ಮಾಡುತ್ತಿರಲಿಲ್ಲ.

ಕನ್ನಡತಿ ಪ್ರಿಯಾಂಕ ತಿಮ್ಮೇಶ್ ಬಿಗ್ ಬಾಸ್ ಮನೆಯಲ್ಲಿದ್ದಾಗ ತಾನು ಯಾವುದೇ ಡಯಟ್ ಮಾಡುವುದಿಲ್ಲ, ವರ್ಕೌಟ್ ಮಾಡುವುದಿಲ್ಲ, ಸ್ವಲ್ಪ ಯೋಗ ಮಾಡುವುದಾಗಿ ತಿಳಿಸಿದ್ದರು. ಆದರೆ, ಅಲ್ಲಿದ್ದವರು ನೀನು ನಟಿಯಾಗಿದ್ದರೂ ಇಷ್ಟು ದಪ್ಪಗಿದ್ದೀಯ, ವರ್ಕೌಟ್ ಮಾಡಿ ದೇಹವನ್ನು ಕರಗಿಸುವಂತೆ ಕೆಲವರು ಸಲಹೆಯನ್ನೂ ನೀಡಿದ್ದರು. ಇದಾದ ನಂತರ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾಕ್ಷಣ ಆಕೆಗಿದ್ದ ಖ್ಯಾತಿಗೆ ಮತ್ತಷ್ಟು ಸಿನಿಮಾಗಳಲ್ಲಿ ಅವಕಾಶವೂ ಸಿಕ್ಕಿತ್ತು.

ಇತ್ತೀಚೆಗೆ ಪ್ರಿಯಾಂಕ ಹಾರ್ಡ್‌ ವರ್ಕೌಟ್ ಹಾಗೂ ಕಠಿಣ ಡಯಟ್ ಅನ್ನು ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯ ಆಗಿರುವ ಪ್ರಿಯಾಂಕ ಮಾಡ್ರನ್ ನಟಿಗೆ ಇರುವ ಎಲ್ಲ ಅರ್ಹತೆಗಳನ್ನು ಮೈಗೂಡಿಸಿಕೊಂಡಿದ್ದಾರೆ. ತಮ್ಮ ಹಾಟ್ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಇದೇ ರೀತಿ ಬುಧವಾರವೂ ಜಿಮ್ ವರ್ಕೌಟ್ ಮಾಡಿದ ಪ್ರಿಯಾಂಕ ತಮ್ಮ ಟೀಶರ್ಟ್‌ ಅನ್ನು ಎತ್ತಿ ತೋರಿಸಿದ್ದಾರೆ. ಇದನ್ನು ನೋಡಿದವರಿಗೆ ಅಸಲಿಯಾಗಿ ಯಾವ ಉದ್ದೇಶದಿಂದ ತೋರಿಸುತ್ತಿದ್ದಾರೆ ಎಂಬುದೇ ಗೊಂದಲ ಉಂಟುವಾಡುವಂತಿದೆ. ಆದರೆ, ತಾನು ಸಣ್ಣಗಾಗಿರುವ ಫೋಟೋಗಳನ್ನು, ಬೆಲ್ಲಿ ಫ್ಯಾಟ್ ಕರಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಬದಲಿ ಅರ್ಥವನ್ನೇನೂ ಕಲ್ಪಿಸುವ ಅಗತ್ಯವಿಲ್ಲ.

ತಮ್ಮ ಫೋಟೋ ಹಂಚಿಕೊಂಡಿರುವ ಪ್ರಿಯಾಂಕ ತಿಮ್ಮೇಶ್ 'ತೂಕವನ್ನು ಕಳೆದುಕೊಳ್ಳುವುದು ಜೀವನದಲ್ಲಿ ತುಂಬಾ ಕಷ್ಟಕರವಾದ ಕೆಲಸ. ನೀವು ಅದನ್ನು ಒಮ್ಮೆ ಮಾಡಿದರೆ, ಅದಕ್ಕಿಂತ ಸುಲಭವಾದದ್ದು ಯಾವುದೂ ಇಲ್ಲ. ಸೌಂದರ್ಯ ನಮ್ಮ ಕೈಯಲ್ಲಿದೆ. ಜಗತ್ತಿಗೆ ನಮ್ಮನ್ನು ನಾವು ಹೇಗೆ ಪ್ರಸ್ತುತಪಡಿಸುತ್ತೇವೆ ಎಂಬುದು ನಮ್ಮ ಗುರಿ. ಕೊನೆಯ ಫೋಟೋವನ್ನು ನೋಡಲು ಮರೆಯದಿರಿ' ಎಂದು ಟ್ಯಾಗ್ ಬರೆದುಕೊಂಡಿದ್ದಾರೆ.

ಗಣಪ ಸಿನಿಮಾ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ಕೈಯಲ್ಲಿ ಪ್ರಸ್ತುತ ಎರಡು ಸಿನಿಮಾಗಳಿವೆ. ಅರ್ಜುನ್ ಗೌಡ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಉಳಿದಂತೆ ಶುಗರ್‌ಲೆಸ್ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ. ಈ ಸಿನಿಮಾಗಳಿಂದಲಾದರೂ ಬಿಗ್ ಬ್ರೇಕ್ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ, ತಾವು ತೆಳ್ಳಗಾಗುತ್ತಿದ್ದು, ಹೆಚ್ಚಿನ ಸಿನಿಮಾ ಆಫರ್‌ಗಳು ಬರುವ ನಿರೀಕ್ಷೆಯಲ್ಲಿದ್ದಾರೆ.

Latest Videos

click me!