ನೆರಳು ಬೆಳಕಿನಾಟದಾಲ್ಲಿ ನಟಿ ಸಂಗೀತಾ ಭಟ್… ಹೆಂಡ್ತಿಯ ಗ್ಲಾಮರಸ್ ಅವತಾರ ನೋಡಿ ತಾಂಡವ್ ಹೀಗ್ ಹೇಳೋದಾ!?

Published : Nov 25, 2024, 05:00 PM ISTUpdated : Nov 25, 2024, 05:21 PM IST

ಕನ್ನಡ ಸಿನಿಮಾ ನಟಿ ಹಾಗೂ ಕಿರುತೆರೆ ನಟ ಸುದರ್ಶನ್ ರಂಗಪ್ರಸಾದ್ ಪತ್ನಿ ಸಂಗೀತಾ ಭಟ್ ಗ್ಲಾಮರಸ್ ಅವತಾರದಲ್ಲಿ ಫೋಟೊ ಶೂಟ್ ಮಾಡಿಸಿದ್ದು, ಪತಿ ಏನ್ ಕಾಮೆಂಟ್ ಮಾಡಿದ್ದಾರೆ ನೋಡಿ.   

PREV
18
ನೆರಳು ಬೆಳಕಿನಾಟದಾಲ್ಲಿ ನಟಿ ಸಂಗೀತಾ ಭಟ್… ಹೆಂಡ್ತಿಯ ಗ್ಲಾಮರಸ್ ಅವತಾರ ನೋಡಿ ತಾಂಡವ್ ಹೀಗ್ ಹೇಳೋದಾ!?

ಚಂದನವನದಲ್ಲಿ ತನ್ನ ನೈಜ್ಯ ನಟನೆಯ ಮೂಲಕ ಮೋಡಿ ಮಾಡಿದ ಬೆಡಗಿ ಸಂಗೀತಾ ಭಟ್ (Sangeetha Bhat) ಇದೀಗ ಹೊಸ ಫೋಟೊ ಶೂಟ್ ಮೂಲಕ ಸದ್ದು ಮಾಡ್ತಿದ್ದಾರೆ. ನಟಿಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿವೆ. 
 

28

ಸಂಗೀತಾ ಭಟ್ ಯಾರು ಅನ್ನೋದು ಗೊತ್ತೆ ಇರ್ಬೇಕು ಅಲ್ವಾ? ಕನ್ನಡ ಸಿನಿ ಲೋಕದಲ್ಲಿ ಮಿಂಚಿದ ನಟಿಯೂ ಹೌದು, ಜೊತೆಗೆ ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಭಾಗ್ಯಲಕ್ಷ್ಮಿಯಲ್ಲಿ ಭಾಗ್ಯನ ಗಂಡ ತಾಂಡವ್ ಪಾತ್ರದಲ್ಲಿ ಮಿಂಚುತ್ತಿರುವ ಸುದರ್ಶನ್ ರಂಗಪ್ರಸಾದ್ (Sudararshan Rangaprasad) ಪತ್ನಿಯೂ ಹೌದು. 
 

38

ಸೀರಿಯಲ್ ನಲ್ಲಿ ಭಾಗ್ಯಾಗೆ ಯಾವಾಗ್ಲೂ ಗುಗ್ಗು, ಎಮ್ಮೆ ಎನ್ನುತ್ತಾ, ಭಾಗ್ಯಾಳ ಟ್ರೆಡಿಶನಲ್ ಅವತಾರವನ್ನು ಮೂದಲಿಸುತ್ತಾ, ಶ್ರೇಷ್ಠಾ ಹಿಂದೆ ಸುತ್ತೋ ತಾಂಡವ್ ಆಲಿಯಾಸ್ ಸುದರ್ಶನ್ ರಿಯಲ್ ಪತ್ನಿ ನಿಜವಾಗಿಯೂ ಸಖತ್ ಸ್ಟೈಲಿಶ್, ಮಾಡರ್ನ್ ಆಗಿದ್ದಾರೆ. 
 

48

ಸಂಗೀತಾ ಭಟ್ ಸೋಶಿಯಲ್ ಮೀಡೀಯಾದಲ್ಲಿ (Social media) ಆಕ್ಟೀವ್ ಆಗಿದ್ದು ಹೆಚ್ಚಾಗಿ ತಮ್ಮ ಹೊಸ ಹೊಸ ಫೋಟೊ ಶೂಟ್ ಮಾಡಿಸುತ್ತಾ, ಶೇರ್ ಮಾಡುತ್ತಲಿರುತ್ತಾರೆ. ಅದರಲ್ಲೂ ಇವರು ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. 
 

58

ಇದೀಗ ನಟಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ನೆರಳು ಬೆಳಕಿನಾಟದ ಫೋಟೊಗಳನ್ನು ಶೇರ್ ಮಾಡಿದ್ದು, ಸಖತ್ ಗ್ಲಾಮರಸ್, ಬೋಲ್ಡ್ ಆಗಿ ಕಾಣಿಸುತ್ತಿದ್ದಾರೆ. Let there be a lightening ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದು, ಫೋಟೊ ನೋಡಿದ್ರೆ ಮಿಂಚು ಹೊಡೆಯೋ ಹಾಗೇ ಇದೆ. 
 

68

ಸಂಗೀತಾ ಕಪ್ಪು ಬಣ್ಣದ ಜೀನ್ಸ್ ಹಾಗೂ ಕಪ್ಪು ಬಣ್ಣದ ಡೀಪ್ ನೆಕ್ ಕ್ರಾಪ್ ಟಾಪ್ ಧರಿಸಿದ್ದು, ನೆರಳು ಬೆಳಕಿನ ನಡುವೆ, ಕಣ್ಣಲ್ಲಿ ಬೋಲ್ಡ್ ನೆಸ್  ಇಟ್ಟುಕೊಂಡು ಫೋಟೊಗೆ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಇವರ ಫೋಟೊ ಶೂಟ್ ಗೆ ಅಭಿಮಾನಿಗಳು ಮನಸೋತಿದ್ದಾರೆ. 
 

78

ಹೆಂಡ್ತಿಯ ಫೋಟೊ ಶೂಟ್ ನೋಡಿ, ಫೋಟೋ ಗ್ರಾಫರನ್ನು ಹೊಗಳಿ ಯೂ ಆರ್ ದ ಬೆಸ್ಟ್ , ಲವ್ ಯೂ ಎಂದಿರುವ ಸುದರ್ಶನ್ ರಂಗಪ್ರಸಾದ್, ಹೆಂಡ್ತಿಗೆ ಏನ್ ಹೇಳ್ತಿದ್ರು, ಗೊತ್ತಾ? ನಿನಗೆ ಸಮಧಾನಕರ ಬಹುಮಾನ ಅಷ್ಟೇ ಎಂದು ರೇಗಿಸಿದ್ದಾರೆ. ಅದಕ್ಕೆ ಸಂಗೀತಾ ಈಗ ರಿಲೇಶನ್ ಶಿಪ್ ಬದಲಾಯ್ತ ಅಂದಿದ್ದಾರೆ. 
 

88

ಇನ್ನು ಅಭಿಮಾನಿಗಳು ಸಂಗೀತಾರನ್ನು ಹಾಡಿ ಹೊಗಳಿದ್ದು ಒಬ್ಬರಂತೂ ಕವನ ಗೀಚಿದ್ದು, ನೆರಳಿಗೂ ಬಿಸಿ ಶಾಖಾ, ಚಳಿಯೇ ಮೈ ಕೊಡವಿ ಮರೆಯಾಗಿದೆ ನಡುಕ, ಬೆಚ್ಚಗಿನ ನೋಟದಿ ಕೊಂದೆಯಾ ನನ್ನನ್ನು, ಕಣ್ಣು ಮೀಟುಕಿಸಲು ಕದ್ದಿರುವೆ ಮನಸ್ಸನ್ನು ಎಂದು ಪ್ರೀತಿಯ ಸಾಲನ್ನು ಬರೆದಿದ್ದಾರೆ. 
 

Read more Photos on
click me!

Recommended Stories