ಟ್ವಿಟರ್ ನಲ್ಲಿ ಪ್ರಶ್ನೆ ಹಾಕಿರೋ ನಟ ಧ್ರುವ ಸರ್ಜಾ ಎಲ್ಲದಕ್ಕೂ ಅವಕಾಶ ಮಾಡಿಕೊಡಲಾಗಿದೆ. ಬಸ್ ನಲ್ಲಿ ಫುಲ್ ರಶ್..! ಮಾರ್ಕೆಟ್ ನಲ್ಲಿ ಗಿಜಿ ಗಿಜಿ..! ಚಿತ್ರಮಂದಿರಕ್ಕೆ ಮಾತ್ರ ನಿರ್ಬಂಧ ಯಾಕೆ? ಎಂದು ಪ್ರಶ್ನಿಸಿದ್ದಾರೆ.
undefined
ಪೊಗರು ಚಿತ್ರತಂಡಕ್ಕೆ ಬೆಂಬಲ ಕೊಟ್ಟ ಕೆಜಿಎಫ್ ಟೀಂ ಧ್ರುವ ಸರ್ಜಾ ಟ್ವೀಟ್ ಗೆ ರೀ ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದೆ. ಕೆಜಿಎಫ್ 2 ನಿರ್ದೇಶಕ ಪ್ರಶಾಂತ್ ನೀಲ್ ರೀಟ್ವೀಟ್ ಮಾಡಿದ್ದಾರೆ.
undefined
ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಚಿತ್ರರಂಗದ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಮಾರ್ಕೆಟ್ ಓಪನ್ ಇದೆ, ದೇವಸ್ಥಾನಗಳು ಮುಕ್ತವಾಗಿವೆ. ಖಾಸಗಿ ಸಮಾರಂಭಗಳಿಗೆ ನಿರ್ಬಂಧ ಇಲ್ಲ. ಪ್ರವಾಸಿ ತಾಣಗಳಲ್ಲಿ ಯಾವುದೇ ರೂಲ್ಸ್ ಇಲ್ಲ. ಇಲ್ಲೆಲ್ಲೂ ಇಲ್ಲದ ರೂಲ್ಸ್ ಟಾಕೀಸ್‌ಗಳಿಗಷ್ಟೇ ಏಕೆ..? ಎಂದು ಪ್ರಶ್ನಿಸಿದ್ದಾರೆ.
undefined
ಎಲ್ಲವೂ ತೆರೆದುಕೊಂಡಿರುವಾಗ ಥಿಯೇಟರ್‌ಗಳಿಗೆ ಮಾತ್ರ ಯಾಕೆ ಶೇ.೫೦ ಅವಕಾಶ..? ಸಿನಿಮಾ ರಾಜ್ಯದ ಬಹಳಷ್ಟು ಜನರಿಗೆ ಬದುಕುವ ದಾರಿ ಎಂಬುದನ್ನು ನಾವು ಮರೆಯುತ್ತಿದ್ದೇವಾ ಎಂದು ಪ್ರಶ್ನಿಸಿದ್ದಾರೆ ನಟ ರಕ್ಷಿತ್ ಶೆಟ್ಟಿ.
undefined
ಎಲ್ಲರಿಗೂ 100% ಅವಕಾಶ ಕೊಟ್ಟಿರುವಾಗ ನಮಗೆ ಮಾತ್ರ 50% ಯಾಕೆ. ನಮಗೂ ಶೇಕಡ 100ರಷ್ಟು ಅವಕಾಶ ಬೇಕು . ಸರ್ಕಾರದ ಈ ನಿಲುವು ಬದಲಾಗಬೇಕು.ಚಿತ್ರರಂಗಕ್ಕಾಗಿ ನಾವೆಲ್ಲರೂ ಜೊತೆಯಲ್ಲಿದ್ದೇವೆ ಎಂದಿದ್ದಾರೆ ಶಿವರಾಜ್‌ಕುಮಾರ್.
undefined
ಬೆಟ್ಟದ ಮೇಲೊಂದು ಮನೆಯ ಮಾಡಿಮೃಗಗಳಿಗಂಜಿದಡೆಂತಯ್ಯಾ ?ಊರೆಲ್ಲ ಜನಜಂಗುಳಿ ತುಂಬಿ ತುಳುಕುತಿರಲುTheater ಒಳಗೆ ಮಾತ್ರ ಕೊರೋನಾಗೆ ಅಂಜಿದೊಡೆಂತಯ್ಯ? ಎಂದು ಪ್ರಶ್ನಿಸಿದ್ದಾರೆ ನಟ ಧನಂಜಯ್
undefined