Upendra Priyanka Wedding Anniversary: ಉಪೇಂದ್ರ-ಪ್ರಿಯಾಂಕ ದಾಂಪತ್ಯ ಜೀವನಕ್ಕೆ ಜೈ ಹೋ ಎಂದ ಫ್ಯಾನ್ಸ್!

Published : Dec 16, 2023, 03:29 PM IST

ಇಂದು ಸ್ಯಾಂಡಲ್‌ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಬೆಂಗಾಲಿ ಬೆಡಗಿ ಪ್ರಿಯಾಂಕ ಉಪೇಂದ್ರ ಅವರ 20ನೇ ವಿವಾಹ ವಾರ್ಷಿಕೋತ್ಸವವಿದ್ದು, ಈ ಬಗ್ಗೆ ಪ್ರಿಯಾಂಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸ್ಪೆಷಲ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

PREV
18
Upendra Priyanka Wedding Anniversary: ಉಪೇಂದ್ರ-ಪ್ರಿಯಾಂಕ ದಾಂಪತ್ಯ ಜೀವನಕ್ಕೆ ಜೈ ಹೋ ಎಂದ ಫ್ಯಾನ್ಸ್!

ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ನಟ ಉಪೇಂದ್ರ ಹಾಗೂ ನಟಿ ಪ್ರಿಯಾಂಕ ಉಪೇಂದ್ರ ದಾಂಪತ್ಯ ಜೀವನ ಖುಷಿಯಲ್ಲಿ ಸಾಗುತ್ತಿದ್ದು, ಇದೀಗ 20ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.

28

ಇದೀಗ ಪ್ರಿಯಾಂಕ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿವಾಹ ವಾರ್ಷಿಕೋತ್ಸವದಲ್ಲಿ ಮಿಂದೆದ್ದ ಫೋಟೋಗಳನ್ನು ಹಂಚಿಕೊಂಡಿದ್ದು, ನಿಮ್ಮೆಲ್ಲರ ಶುಭ ಹಾರೈಕೆಗಳಿಗಾಗಿ ಎಲ್ಲರಿಗೂ ಧನ್ಯವಾದಗಳು ಹಾಗೂ ಪ್ರೀತಿ ಮತ್ತು ಆಶೀರ್ವಾದಗಳಿಗೆ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.

38

ಫೋಟೋಗಳನ್ನು ನೋಡಿದ ನೆಟ್ಟಿಗರು ಸಹ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದು, ಇನ್ನೊಬ್ಬ ನೆಟ್ಟಿಗ ಈಗಿನ ಕಾಲದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದೀರಾ ಮೆಚ್ಚಬೇಕು ನಿಮ್ಮ ಕುಟುಂಬವನ್ನು ಎಂದು ಕಾಮೆಂಟ್ ಮಾಡಿದ್ದಾನೆ.

48

ಬೆಂಗಾಲಿ ಚೆಲುವೆ ಪ್ರಿಯಾಂಕ ಉಪೇಂದ್ರ ಕನ್ನಡದಲ್ಲಿ ಸಿನಿಮಾ ಮಾಡುತ್ತಾ ಉಪ್ಪಿಯನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರು 2003 ಡಿಸೆಂಬರ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಆಯುಶ್-ಐಶ್ವರ್ಯ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.

58

ಪ್ರಿಯಾಂಕ ಅವರು ಕನ್ನಡದ ರಿಯಲ್‌ ಸ್ಟಾರ್ ಖ್ಯಾತಿಯ ಉಪೇಂದ್ರ ಅವರನ್ನು ವಿವಾಹವಾದ ನಂತರ ಹೆಚ್ಚಾಗಿ ಸಿನಿಮಾದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಕಳೆದ ಕೆಲವು ವರ್ಷಗಳಿಂದೀಚೆಗೆ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

68

ಮದುವೆಯಾದ ಬಳಿಕ ಸಾಂಸಾರಿಕ ಹಾಗೂ ಹಾರರ್‌ ಆಧಾರಿತ ಸಿನಿಮಾಗಳಲ್ಲಿ ಪ್ರಿಯಾಂಕಾ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ. ಹಲವು ಹಾರರ್ ಹಾಗೂ ಸಸ್ಪೆನ್ಸ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

78

ಪ್ರಿಯಾಂಕಾ ಉಪೇಂದ್ರ ಅವರ ಮಕ್ಕಳು ಕೂಡ ಪ್ರೌಢ ಹಂತವನ್ನು ದಾಟುತ್ತಿದ್ದು ಮಕ್ಕಳನ್ನು ಕಾಳಜಿ ಮಾಡುವ ಹೊಣೆಗಾರಿಕೆಯೂ ಕಡಿಮೆಯಾಗಿದೆ. ಆದ್ದರಿಂದ ಮನೆಯಲ್ಲಿ ಫ್ರೀಯಾಗಿ ಸಮಯ ಕಳೆಯುವ ಬದಲು ಸಿನಿಮಾಗಳಲ್ಲಿ ನಟನೆ ಮುಂದುವರೆಸಿದ್ದಾರೆ.

88

ಉಪ್ಪಿ 2, ಎಚ್​2ಒ, ರಾ, ಶ್ರೀಮತಿಯಂತ ಸಿನಿಮಾಗಳಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಅವರು ಜೊತೆಯಾಗಿ ನಟಿಸಿದ್ದಾರೆ. ಸದ್ಯ ನಟ ಉಪೇಂದ್ರ ಯುಐ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

Read more Photos on
click me!

Recommended Stories