ಕನ್ನಡ ಸಿನಿಮಾ ಪ್ರಿಯರ ಹೊಸ ಕ್ರಶ್; ವಿರಳ ಪ್ರೇಮಕತೆಯ ಸರಳ ಸುಂದರಿ ಸ್ವಾತಿಷ್ಠಾ

Published : Feb 13, 2024, 01:12 PM IST

ಸ್ಯಾಂಡಲ್‌ವುಡ್ ಸಿನಿಮಾಪ್ರಿಯರಿಗೆ ಈ ಹಿಂದೆ ರಶ್ಮಿಕಾ, ರುಕ್ಮಿಣಿ ವಸಂತ್ ಕ್ರಶ್‌ಗಳಾಗಿದ್ದರು. ಇದೀಗ ಹೊಸದಾಗಿ ಎಲ್ಲರ ಮನಸ್ಸು ಕದಿಯುತ್ತಿರುವುದು ಸರಳ ಪ್ರೇಮಕತೆಯ ಸ್ವಾತಿಷ್ಠಾ ಕೃಷ್ಣನ್.

PREV
19
ಕನ್ನಡ ಸಿನಿಮಾ ಪ್ರಿಯರ ಹೊಸ ಕ್ರಶ್; ವಿರಳ ಪ್ರೇಮಕತೆಯ ಸರಳ ಸುಂದರಿ ಸ್ವಾತಿಷ್ಠಾ

ಸಧ್ಯ ವೀಕ್ಷಕರಿಗೆ ನವಿರಾದ ಫೀಲ್ ಕೊಟ್ಟು ಸದ್ದು ಮಾಡುತ್ತಿರುವ ಸಿನಿಮಾ ಸಿಂಪಲ್ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮಕತೆ'.

29

ಈ ಚಿತ್ರ ವೀಕ್ಷಿಸಲು ಬಹಳಷ್ಟು ಹುಡುಗರಿಗಿದ್ದ ಒಂದು ಕಾರಣ 'ರಾಧಾಕೃಷ್ಣ' ಧಾರಾವಾಹಿಯ ಮುದ್ದು ಮುಖದ ರಾಧೆ. ಆದರೆ, ಚಿತ್ರ ನೋಡಿ ಬಂದವರ ಬಾಯಲ್ಲಿ ಬರುತ್ತಿರುವ ಹೆಸರು ಅನುರಾಗ ಅಲಿಯಾಸ್ ಸ್ವಾತಿಷ್ಠಾ.

39

ಹೌದು, ಚಿತ್ರದಲ್ಲಿ ವಿನಯ್ ರಾಜ್‌ಕುಮಾರ್‌ಗೆ ಸಾಥ್ ನೀಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸ್ವಾತಿಷ್ಠ ಕೃಷ್ಣನ್‌ ಈಗ ಕನ್ನಡ ಸಿನಿಮಾ ಪ್ರಿಯರ ಹೊಸ ಕ್ರಶ್.

49

ತಮಿಳು, ತೆಲುಗುಗಳಲ್ಲಿ ಅಭಿನಯಿಸುತ್ತಿದ್ದ ಸ್ವಾತಿಷ್ಠಾ ಕೃಷ್ಣನ್‌ಗೆ 'ಒಂದು ಸರಳ ಪ್ರೇಮಕತೆ' ಮೊದಲ ಕನ್ನಡ ಸಿನಿಮಾ. ಆದರೆ, ಇವರು ಕನ್ನಡಿಗರೇ ಎಂಬುದು ಎಲ್ಲರಿಗೂ ಖುಷಿ ಕೊಡುತ್ತಿರುವ ಸಂಗತಿ.

 

59

ಹೌದು, ಹಾಲ್ಪ್ ಬಾಯ್ಲ್ಡ್ ಎಂಬ ತಮಿಳು ವೆಬ್ ಸೀರಿಸ್ ಮೂಲಕ ನಟನೆ ಆರಂಭಿಸಿದ ಸ್ವಾತಿಷ್ಟಾ ಸವರಕತಿ ಸಿನಿಮಾ ಮೂಲಕ ಕಾಲಿವುಡ್ ಪ್ರವೇಶಿಸಿದರು. 

69

ಇವರಿಗೆ ಹೆಸರು ತಂದುಕೊಟ್ಟಿದ್ದು ಕಮಲ್ ಹಾಸನ್ ನಟನೆಯ 'ವಿಕ್ರಮ್' ಚಿತ್ರ. ಇದರಲ್ಲಿ  ಕಮಲ್ ಹಾಸನ್ ಮಗ ಪ್ರಭಂಜನ್ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

79

ಇದೀಗ ಸ್ಯಾಂಡಲ್‌ವುಡ್ ಎಂಟ್ರಿ ಕೊಟ್ಟಿರುವ ಸ್ವಾತಿಷ್ಠಾ ಚಂದನವನದ ಚಂದದ ಚೆಲುವೆಯಾಗಿ, ಸರಳ ಸುಂದರಿಯಾಗಿ ಎಲ್ಲರ ಮನ ಗೆಲ್ಲುತ್ತಿದ್ದಾರೆ. 

89

ಉತ್ತರ ಕರ್ನಾಟಕದ ಸ್ವಾತಿಷ್ಠಾ ಸದ್ಯಕ್ಕೆ ಚೆನ್ನೈ ನಿವಾಸಿ. ಒಂದು ಸರಳ ಪ್ರೇಮಕತೆಯಲ್ಲಿ ಜರ್ನಲಿಸ್ಟ್ ಪಾತ್ರ ನಿರ್ವಹಿಸಿರುವ ಈ ಚೆಲುವೆ, ರಿಯಲ್ ಲೈಫ್‌ನಲ್ಲಿ ಕೂಡಾ ಜರ್ನಲಿಸಂ ಸ್ಟೂಡೆಂಟ್. 

 

99

ಮೋಹಕ ನಟಿ ಸ್ವಾತಿಷ್ಠ ಕೃಷ್ಣನ್ ಮೋಹಕ ನಗು ಎಲ್ಲರನ್ನೂ ಮರುಳು ಮಾಡುತ್ತಿದ್ದು, ಕನ್ನಡ ಸಿನಿಮಾದ ಭವಿಷ್ಯದ ಭರವಸೆಯ ನಟಿಯಾಗಿದ್ದಾರೆ.

Read more Photos on
click me!

Recommended Stories