ಅಮ್ಮೋರ ಗಂಡ ಅಂದ್ರೆ ತಪ್ಪಾಗುತ್ತೆ; ನಿರೂಪಕಿ ಮೇಲೆ ಸೌಂದರ್ಯ ಗರಂ, ಹಳೆ ವಿಡಿಯೋ ವೈರಲ್!

Published : Apr 03, 2024, 12:14 PM IST

2003ರಲ್ಲಿ ನಡೆದ ಸಂದರ್ಶನದಲ್ಲಿ ನಟಿ ಸೌಂದರ್ಯ ನೀಡಿದ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸಖತ್ ವೈರಲ್ ಅಗುತ್ತಿದೆ.

PREV
18
ಅಮ್ಮೋರ ಗಂಡ ಅಂದ್ರೆ ತಪ್ಪಾಗುತ್ತೆ; ನಿರೂಪಕಿ ಮೇಲೆ ಸೌಂದರ್ಯ ಗರಂ, ಹಳೆ ವಿಡಿಯೋ ವೈರಲ್!

ಬಹುಭಾಚಾ ನಟಿ ಸೌಂದರ್ಯ ಅಗಲಿ 20 ವರ್ಷ ಕಳೆದರೂ ಅಕೆಯ ಸಿನಿಮಾಗಳು, ಹಾಡುಗಳು ಮತ್ತು ಫ್ಯಾಮಿಲಿ ಸಂದರ್ಶನಗಳನ್ನು ಇನ್ನೂ ಟ್ರೆಂಡ್ ಆಗುತ್ತಿದೆ. 

28

ಅದೆಷ್ಟೋ ವರ್ಷಗಳ ಹಿಂದೆ ನಡೆದ ಸಂದರ್ಶನದಲ್ಲಿ ನಟಿ ಸೌಂದರ್ಯ ಅವರಿಗೆ ಅಡುಗೆ ಮಾಡಲು ಬರುತ್ತಾ ಎಂದು ನಿರೂಪಕಿ ಪ್ರಶ್ನೆ ಮಾಡುತ್ತಾರೆ.

38

ಆಗ ಅಯ್ಯೋ!! ಎಂದು ನಗುವ ನಟಿ 'ಎಕ್ಸ್ಪರಿಮೆಂಟ್ ಮಾಡಲು ನಾನು ಸದಾ ಮುಂದೆ ಇರುತ್ತೀನಿ ಆದರೆ ಅಡುಗೆ ಮನೆಗೆ ಹೋಗುವುದು ತುಂಬಾನೇ ಕಡಿಮೆ ಎಂದಿದ್ದರು.

48

ನಮ್ಮ ಅತ್ತಿಗೆ ಬುಕ್ ನೋಡಿಕೊಂಡು ಎಕ್ಸ್ಪರಿಮೆಂಟ್ ಮಾಡಲು ಶುರು ಮಾಡುತ್ತಾರೆ ಆ ಎಕ್ಸ್ಪರಿಮೆಂಟ್‌ಗಳನ್ನು ತಿನ್ನುವುದು ನಾನು. ನಾನು ಏನಾದರೂ ನೋಡಿದಾಗ ಎಕ್ಸ್ಪರಿಮೆಂಟ್ ಮಾಡಲು ಅಡುಗೆ ಮನೆಗೆ ಹೋಗಿದ್ದೀನಿ ಆಗ 99% ಫೇಲ್ ಆಗಿದೆ. 

58

ಹೀಗಾಗಿ ಅಡುಗೆ ಅಂದ್ರೆ ದೂರ' ಎಂದು ಸೌಂದರ್ಯ ಹೇಳುತ್ತಾರೆ. ಅಲ್ಲೇ ಪಕ್ಕದಲ್ಲಿ ಕುಳಿತುಕೊಂಡಿರುವ ಪತಿ 'ಮುಂಚಿತವಾಗಿ ನಾವು ಫ್ಯಾಮಿಲಿ ಡಾಕ್ಟರ್‌ಗೆ ಕರೆ ಮಾಡಿ ತಿಳಿಸಿರುತ್ತೀವಿ' ಎಂದು ಹಾಸ್ಯ ಮಾಡುತ್ತಾರೆ.
 

68

ನೀವು ಅಮ್ಮನವರ ಗಂಡನಾ ಎಂದು ನಿರೂಪಕಿ ಪ್ರಶ್ನೆ ಮಾಡಿದಾಗ ' ಒಂದು ಒಳ್ಳೆ ಕಾರಣಕ್ಕೆ ಅಮ್ಮನೋರು ಗಂಡ ಆಗುವುದರಲ್ಲಿ ತಪ್ಪಿಲ್ಲ' ಎಂದು ಸೌಂದರ್ಯ ಪತಿ ಹೇಳಿದ್ದಾರೆ.

78

ತಕ್ಷಣ 'ನನ್ನ ಪ್ರಕಾರ ಹುಡುಗಿ ಮದುವೆ ಆದ ಮೇಲೆ ಗಂಡನಿಗೆ ತಾಯಿಯಾಗಿರಬೇಕು ಫ್ರೆಂಡ್ ಆಗಿರಬೇಕು ಫಿಲಾಸಫರ್ ಆಗಿರಬೇಕು ಗೈಡ್ ಆಗಿರಬೇಕು ಅಂತ ನಮ್ಮ ಮಂತ್ರಗಳು ಅದನೇ ಹೇಳುತ್ತೆ.
 

88

ಹೀಗಾಗಿ ಒಂದು ಹೆಣ್ಣು ಗಂಡನಿಗೆ ತಾಯಿ ಸ್ಥಾನದಲ್ಲಿ ಇರುತ್ತಾರೆ ಅದನ್ನು ನೋಡಿ ಅಮ್ಮೋರ ಗಂಡ ಅಂದ್ರೆ ತಪ್ಪಾಗುತ್ತದೆ ಎಂದು ಮಾತನಾಡಿದ್ದಾರೆ. 

Read more Photos on
click me!

Recommended Stories