ಅಸಲಿ ಹೆಸರಿನ ಬಗ್ಗೆ ಬಿಸಿಬಿಸಿ ಚರ್ಚೆ ; ಮತ್ತೆ ಸುದ್ದಿಯಲ್ಲಿ ನಟಿ ಖುಷ್ಬು

First Published | May 26, 2020, 12:34 PM IST

ಬಹುಭಾಷಾ ನಟಿಯಾಗಿ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿರುವ ನಟಿ ಖುಷ್ಬು ನೆಟ್ಟಿಗರ ವಿರುದ್ಧ ಗರಂ ಆಗಿದ್ದಾರೆ. ಇದು ರಾಜಕೀಯ ವಿಚಾರವಲ್ಲ, ಸಿನಿಮಾ ವಿಚಾರವಲ್ಲ,....
 

ಬಹುಭಾಷಾ ನಟಿ ಹಾಗೂ ರಾಜಕಾರಣಿ ಖುಷ್ಬು
ಖುಷ್ಬು ಹೆಸರು ಯಾವುದೆಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
Tap to resize

ಖುಷ್ಬು ಮೂಲ ಹೆಸರು ನಖಾತ್‌ ಖಾನ್‌.
ರಾಜಕಾರಣಿ ಆದ್ಮೇಲೆ ಈ ಹೆಸರು ಚಾಲ್ತಿಗೆ ಬಂದಿದೆ.
ಕುಟುಂಬಸ್ಥರು, ಸ್ನೇಹಿತರು, ಶಾಲಾ- ಕಾಲೇಜಿನಲ್ಲಿ ನೀಡಿದ ಹೆಸರು ನಖಾತ್‌ ಖಾನ್‌ ಎಂದು.
ತನ್ನ ಹೆಸರಿನ ಬಗ್ಗೆ ನಡೆಯುತ್ತಿರುವ ಚರ್ಚೆ ಗಮನಿಸಿ ಖುಷ್ಬು ಟ್ಟೀಟ್ ಮಾಡಿದ್ದಾರೆ.
'ನಾನು ಹೆಸರು ಬದಲಾಯಿಸಿಕೊಳ್ಳಲಿಲ್ಲ.ನಖಾತ್‌ ಅಂದ್ರೆ ಹೆಚ್ಚಿನವರಿಗೆ ಏನೆಂದು ಗೊತ್ತಾಗುತ್ತಿರಲಿಲ್ಲ. ಎಲ್ಲರೂ ನಿನ್ನ ಹೆಸರು ಏನು? ಅದರ ಅರ್ಥ ಏನು ಎಂದು ಕೇಳುತ್ತಿದ್ದರು' .
'ನಖಾತ್‌ ಹೆಸರು ಅರ್ಥ ಸುವಾಸನೆ' ಎಂದು ಖುಷ್ಬು ತಿಳಿಸಿದ್ದಾರೆ.
'ನನ್ನ ಪೋಷಕರು ಇಟ್ಟ ಹೆಸರು ಅದು, ನಾನೊಬ್ಬಳು ಖಾನ್ ಅದಕ್ಕೇನೀಗ? ಎಂದು ಪ್ರಶ್ನಿಸಿದ್ದಾರೆ.
ಈಗ ಅದರ ಬಗ್ಗೆ ಮಾತನಾಡುತ್ತಿದ್ದೀರಾ. ಈಗಾಗಲೇ 47 ವರ್ಷವಾಗಿದೆ ನೀವು ತುಂಬಾ ತಡವಾಗಿದ್ದೀರಿ ಎಂದು ವ್ಯಂಗ್ಯ ಮಾಡಿದ್ದಾರೆ.

Latest Videos

click me!