ಗೋಲ್ಡನ್ ಸ್ಟಾರ್ ಜೊತೆಗಿರುವ ಇವರು ಟಾಪ್ ನಟಿಯರ ಮಕ್ಕಳು… ಯಾರು ಗೆಸ್ ಮಾಡಿ!

First Published | Sep 7, 2023, 4:46 PM IST

ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈರಲ್ ಆಗಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಬ್ಬರು ಪುಟಾಣಿ ಮಕ್ಕಳ ಜೊತೆ ನಿಂತು ತೆಗೆಸಿಕೊಂಡ ಫೋಟೋ ಇದು. ಇವರು ಯಾರು ಅನ್ನೋದನ್ನು ನೀವು ಗೆಸ್ ಮಾಡಬಹುದೆ? 
 

ಸೋಶಿಯಲ್ ಮೀಡಿಯಾದಲ್ಲಿ ಯಾವ್ಯಾವುದೋ ಫೋಟೋ ವೈರಲ್ (Viral Photo) ಆಗಿ ಬಿಡುತ್ತೆ. ಸದ್ಯಕ್ಕೆ ವೈರಲ್ ಆಗಿರುವ ಫೋಟೋಗಳಲ್ಲಿ ಇದೂ ಒಂದು. ಗೋಲ್ಡನ್ ಸ್ಟಾರ್ ಗಣೇಶ್ ಅವರು ಇಬ್ಬರು ಪುಟಾಣಿ ಹೆಣ್ಣು ಮಕ್ಕಳ ಜೊತೆಗೆ ಫೋಟೋ ತೆಗೆಸಿಕೊಂಡಿದ್ದು, ಇದು ಕೆಲವೊಂದು ಪೇಜ್‌ಗಳಲ್ಲಿ ವೈರಲ್ ಆಗುತ್ತಿದೆ. 
 

ಅಷ್ಟಕ್ಕೂ ಈ ಫೋಟೋ ಯಾಕೆ ವೈರಲ್ ಆಗುತ್ತಿದೆ, ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಜೊತೆಗಿರುವ ಪುಟಾಣಿಗಳು ಯಾರು ಅನ್ನೋದನ್ನ ಗೆಸ್ ಮಾಡಬಹುದೇ? ಒಂದು ಕ್ಲೂ ಕೊಡಬಹುದು, ಅದೇನೆಂದರೆ ಈ ಪುಟಾಣಿಗಳು ಸ್ಯಾಂಡಲ್‌ವುಡ್‌ನಲ್ಲಿ ಮೆರೆದ ಸ್ಟಾರ್ ನಟಿಯರ ಮಕ್ಕಳು. 
 

Tap to resize

ತುಂಬಾ ಜನ ಈಗಾಗಲೇ ಗೆಸ್ ಮಾಡಿರಬಹುದು. ಇವರು ಬೇರಾರು ಅಲ್ಲ ನಟಿ ಶ್ರುತಿ ಅವರ ಮಗಳು ಗೌರಿ ಮತ್ತು ನಟಿ ಸುಧಾರಾಣಿಯವರ ಮಗಳು ನಿಧಿ. ಇಬ್ಬರೂ ಅಂದು ಮತ್ತು ಇಂದು ಜೊತೆಯಾಗಿ ಗೋಲ್ಡನ್ ಸ್ಟಾರ್ ಜೊತೆ ತೆಗೆಸಿಕೊಂಡ ಫೋಟೋ ಸದ್ಯ ವೈರಲ್ ಆಗುತ್ತಿದೆ. 
 

ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿ ಜನರನ್ನು ಮನರಂಜಿಸಿದ್ದ ನಟಿ ಶ್ರುತಿ ಅವರ ಪುತ್ರಿ ಗೌರಿ (Shruthi Krishna) ಶ್ರುತಿ. ಇವರು ಶ್ರುತಿ ಮತ್ತು ನಿರ್ದೇಶಕ ಎಸ್ ಮಹೇಂದರ್ ಪುತ್ರಿ. ಡಿಗ್ರಿ ವ್ಯಾಸಂಗ ಮಾಡುತ್ತಿರುವ ಗೌರಿ, ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿದ್ದಾರೆ. ಫೊಟೋ, ವಿಡೀಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಲ್ಲದೇ ಇವರು ತಾಯಿಯ ಜೊತೆಗೆ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. 
 

ಗೌರಿ ಶ್ರುತಿಯವರು ಒಬ್ಬ ಪ್ರತಿಭಾವಂತ ಗಾಯಕಿಯೂ (Singer) ಹೌದು. ಇವರು ಕನ್ನಡ, ತಮಿಳು, ಹಿಂದಿ ಹಾಡುಗಳನ್ನು ಹಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ. ಇವರ ಹಾಡಿಗೆ ಮನಸೋಲದವರೇ ಇಲ್ಲ. ನಮ್ಮ ಕನ್ನಡ ಚಿತ್ರರಂಗಕ್ಕೆ ಅದ್ಭುತ ಹಾಡುಗಾರ್ತಿಯಾಗಬಹುದು ಇವರು. ನೇಚರ್ ಮತ್ತು ಪ್ರಾಣಿಗಳನ್ನು ಇಷ್ಟಪಡುವ ಗೌರಿ ಹೆಚ್ಚಾಗಿ ಅಭಯಾರಣ್ಯ ಸುತ್ತೋದನ್ನು ನೀವು ಕಾಣಬಹುದು. 
 

ಇನ್ನು ಇವರು ನಟಿ ಸುಧಾರಾಣಿಯವರ ಮಗಳು ನಿಧಿ (Nidhi). ಈಕೆ ಸುಧಾರಾಣಿ ಮತ್ತು ಗೋವರ್ಧನ್ ಅವರ ಏಕೈಕ ಪುತ್ರಿ. ಸುಧಾರಾಣಿಯವರು (Sudharani) ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಾಗಿ ತಮ್ಮ ಫ್ಯಾಮಿಲಿ ಮತ್ತು ಮನೆಯ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ನಿಧಿಯ ಫೋಟೋಗಳನ್ನು ಸಹ ನೀವು ಕಾಣಬಹುದು. 
 

ನಿಧಿ ಭರತನಾಟ್ಯ (Classical Dancer) ಕಲಾವಿದೆಯಾಗಿದ್ದು, ಇಂದಿಗೂ ಡ್ಯಾನ್ಸ್ ಕಲಿಯುತ್ತಿದ್ದಾರೆ. ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಸಹ ನೀಡಿದ್ದಾರೆ. ಸೋಶಿಯಲ್ ಲೈಫ್ ಇಂದ ಕೊಂಚ ದೂರಾನೆ ಉಳಿದಿರುವ ನಿಧಿ ಕೂಡ ಡಿಗ್ರಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 
 

ಶ್ರುತಿ ಮತ್ತು ಸುಧಾರಾಣಿಯವರು ಚಿತ್ರರಂಗದಲ್ಲಿ ಜೊತೆಯಾಗಿ ಮಿಂಚಿದ್ದರು. ಅದೇ ರೀತಿ ಇಂದಿಗೂ ಅವರು ತಮ್ಮ ಸ್ನೇಹವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇಬ್ಬರು ಜೊತೆಯಾಗಿ ಪಾರ್ಟಿ, ಟ್ರಾವೆಲ್ ಮಾಡುತ್ತಿರುತ್ತಾರೆ. ಅಮ್ಮಂದಿರಂತೆ ಅವರ ಮಕ್ಕಳ ಮಧ್ಯೆ ಸಹ ಉತ್ತಮ ಸ್ನೇಹ ಬಾಂಧವ್ಯವಿದೆ. 
 

ಸುಧಾರಾಣಿ, ಮಾಳವಿಕಾ ಹೂಗ ಶ್ರುತಿ ಸಾಮಾನ್ಯವಾಗಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಕಾಮನ್. ಈ ಕಾರಣದಿಂದಲೇ ಸುಧಾರಾಣಿ ಹಾಗೂ ಶ್ರುತಿ ಮಕ್ಕಳ ನಡುವೆಯೂ ಉತ್ತಂ ಬಾಂಡಿಂಗ್ ಇರುವುದು ಗೊತ್ತಾಗುತ್ತದೆ.

Latest Videos

click me!