ರಿಯಾಲಿಟಿ ಶೋ ಸಮಯದಲ್ಲಿ ತರುಣ್ ಸರ್ 500 ರೂಪಾಯಿ ಅಡ್ವಾನ್ಸ್‌ ಕೊಟ್ಟಿದ್ದರು: ಮಹಾನಟಿ ಪ್ರಿಯಾಂಕಾ ಆಚಾರ್‌

Published : Feb 06, 2025, 10:13 AM IST

ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದ ಪ್ರಿಯಾಂಕಾ ಆಚಾರ್‌ ನಟನೆ ನೋಡಿ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದ ತರುಣ್‌. ಹೆಸರಿಡದ ಚಿತ್ರಕ್ಕೆ ರಕ್ಷಿತಾ ಪ್ರೇಮ್‌ ಸೋದರ ರಾಣಾ ನಾಯಕ. ಈಗಾಗಲೇ ಶೂಟಿಂಗ್‌ ಆರಂಭ.

PREV
17
ರಿಯಾಲಿಟಿ ಶೋ ಸಮಯದಲ್ಲಿ ತರುಣ್ ಸರ್ 500 ರೂಪಾಯಿ ಅಡ್ವಾನ್ಸ್‌ ಕೊಟ್ಟಿದ್ದರು: ಮಹಾನಟಿ ಪ್ರಿಯಾಂಕಾ ಆಚಾರ್‌

ನಿರ್ದೇಶಕ ತರುಣ್‌ ಸುಧೀರ್‌ ನಿರ್ಮಾಣದ, ಪುನೀತ್‌ ರಂಗಸ್ವಾಮಿ ನಿರ್ದೇಶನದ, ರಕ್ಷಿತಾ ಪ್ರೇಮ್‌ ಸೋದರ ರಾಣಾ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಮೈಸೂರು ಮೂಲದ ಪ್ರಿಯಾಂಕ ಆಚಾರ್‌ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
 

27

ತರುಣ್‌ ಸುಧೀರ್‌ ಅವರು ರಿಯಾಲಿಟಿ ಶೋದಲ್ಲಿ ಭಾಗವಹಿಸಿದ್ದ ಪ್ರಿಯಾಂಕ ಆಚಾರ್‌ ನಟನೆ ನೋಡಿ ಮೆಚ್ಚಿಕೊಂಡು ತಮ್ಮ ನಿರ್ಮಾಣದ ಚಿತ್ರದ ಮೂಲಕ ನಾಯಕಿಯನ್ನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. 

37

ಇದು ನೈಜ ಘಟನೆ ಆಧರಿಸಿದ ಸಿನಿಮಾ ಆಗಿದ್ದು, ಅಟ್ಲಾಂಟಾ ನಾಗರಾಜ್‌ ನಿರ್ಮಾಣದಲ್ಲಿ ಜತೆಯಾಗಿದ್ದಾರೆ. ಹೆಸರಿಡದ ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣ ಶುರುವಾಗಿದೆ.

47

ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮ ಕಥೆ ಎನ್ನುವ ಸಬ್ ಟೈಟಲ್ ಹೊಂದಿರುವ ಪ್ರೊಡಕ್ಷನ್ ನಂ 2 ಸಿನಿಮಾಗೆ ನಾಯಕಿಯಾಗಿ ಮಹಾನಟಿ ಪ್ರಿಯಾಂಕ ಆಚಾರ್ ಆಯ್ಕೆಯಾಗಿದ್ದಾರೆ.

57

ಮಹಾನಟಿ ಗೆದ್ದ ನಂತರ ಅವಕಾಶ ತೆರೆಯಿತು. ತರುಣ್ ಸರ್ ಅವರ ಬೆಂಬಲ ಅಪಾರವಾಗಿದೆ. ಅವರು ರಿಯಾಲಿಟಿ ಶೋ ಸಮಯದಲ್ಲಿ 500 ರೂಪಾಯಿಗಳ ನೋಟು ನನಗೆ ನೀಡಿದರು. 

67

ಅದು ನನಗೆ ಬಹಳ ದೊಡ್ಡ ಆಶೀರ್ವಾದವಾಗಿತ್ತು, ಈಗ ಅವರು ನನ್ನ ವೃತ್ತಿಜೀವನದ ಅತಿದೊಡ್ಡ ಬ್ರೇಕ್ ನೀಡುತ್ತಿದ್ದಾರೆ ಎಂದು ಅವರು ಉತ್ಸಾಹದಿಂದ ಪ್ರಿಯಾಂಕಾ ಆಚಾರ್ ಹೇಳಿಕೊಳ್ಳುತ್ತಾರೆ.

77

ಪುನೀತ್ ರಂಗಸ್ವಾಮಿ ನಿರ್ದೇಶನದ ಈ ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮ ಕಥೆ ಕನ್ನಡ, ತಮಿಳು ಮತ್ತು ತೆಲುಗಿನಲ್ಲೂ ಸಹ ಬಿಡುಗಡೆಯಾಗಲಿದೆ. ಈ ಸಿನಿಮಾಕ್ಕೆ ಅದ್ವೈತ್ ಗುರುಮೂರ್ತಿ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ.

Read more Photos on
click me!

Recommended Stories