ರಂಜನಿ ರಾಘವನ್ (Ranjani Raghavan)
ಮೆರೂನ್ ಬಣ್ಣದ ಅನಾರ್ಕಲಿ ಡ್ರೆಸ್ ನಲ್ಲಿ ಮಿಂಚಿತ್ತಿರುವ ರಂಜನಿ ರಾಘವನ್ ಕತ್ತಲೆಯಿಂದ ಬೆಳಕಿನೆಡೆಗೆ..ಅಜ್ಞಾನದಿಂದ ಜ್ಞಾನದೆಡೆಗೆ.. ರೂಢಿಯಿಂದ ಸತ್ಯದೆಡೆಗೆ ಸಾಗುವ ದೀಪಾವಳಿಯ ಶುಭಾಶಯಗಳು ಎಂದಿದ್ದಾರೆ.
215
ಅಮೂಲ್ಯ
ಸ್ಯಾಂಡಲ್ ವುಡ್ ಬ್ಯೂಟಿ ಅಮೂಲ್ಯ ತಮ್ಮ ಮುದ್ದಾದ ಅವಳಿ ಮಕ್ಕಳ ಜೊತೆಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಆ ಮೂಲಕ ಅಭಿಮಾನಿಗಳಿಗೆ ಬೆಳಕಿನ ಹಬ್ಬದ ಶುಭ ಕೋರಿದ್ದಾರೆ.
315
ಶರಣ್ಯ ಶೆಟ್ಟಿ (Sharanya Shetty)
ಸೀರಿಯಲ್, ಸಿನಿಮಾಗಳಲ್ಲಿ ಮಿಂಚುತ್ತಿರುವ ನಟಿ ಶರಣ್ಯ ಶೆಟ್ಟಿ ಸಾಲು ಸಾಲು ಹಣತೆಗಳನ್ನು ಹಚ್ಚುವ ಮೂಲಕ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಆ ಮೂಲಕ ಹಬ್ಬದ ಶುಭಾಶಯ ಕೋರಿದ್ದಾರೆ
415
ಗಾನವಿ ಲಕ್ಷ್ಮಣ್ (Ganavi Lakshman)
ಕೆಂಪು ಲೆಹೆಂಗಾ ಚೋಲಿಯಲ್ಲಿ ಅದ್ಭುತವಾಗಿ ಕಾಣಿಸುತ್ತಿರುವ ಗಾನವಿ ಲಕ್ಷ್ಮಣ್ ಕತ್ತಲನ್ನು ಕಳೆದು, ಬೆಳಕಿನ ಕಡೆಗೆ ಸಾಗುವ ಹಬ್ಬವೇ ದೀಪಾವಳಿ ! ನಿಮ್ಮ ಬಾಳು ದೀಪದಂತೆ ಬೆಳಗಲಿ ಎಲ್ಲಾರಿಗೂ ದೀಪವಳಿ ಹಬ್ಬದ ಶುಭಾಶಯಗಳು ಎಂದಿದ್ದಾರೆ.
515
ಕೃತಿ ಕರಬಂಧ (Kriti Karabandha)
ಕನ್ನಡದಲ್ಲಿ ಗೂಗ್ಲಿ, ಚಿರು, ಮಾಸ್ತಿಗುಡಿ, ದಳಪತಿ, ಮಿಂಚಾಗಿ ನೀನು ಬರಲು ಮೊದಲಾದ ಸಿನಿಮಾದಲ್ಲಿ ಮಿಂಚಿದ್ದ ಕೃತಿ ದೀಪಾವಳಿ ಸಂಭ್ರಮದಲ್ಲಿ ಕೈಯಲ್ಲಿ ದೀಪದ ತಟ್ಟೆ ಹಿಡಿದು ಕೆಂಪು ನೀಲಿ ಸಲ್ವಾರ್ ನಲ್ಲಿ ಮಿಂಚಿದ್ದಾರೆ.
615
ಐಶಾನಿ ಶೆಟ್ಟಿ (Aishani Shetty)
ವಾಸ್ತು ಪ್ರಕಾರ ಸೇರಿ ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ಮಿಂಚಿದ ಮುದ್ದು ನಟಿ ಐಶಾನಿ ಶೆಟ್ಟಿ ಮರೂನ್ ಸೀರೆಯುಟ್ಟು, ಕೈಯಲ್ಲಿ ದೀಪ ಹಿಡಿದು, ಮನೆಯನ್ನು ದೀಪ, ವಿದ್ಯುತ್ ದೀಪಗಳಿಂದ ಅಲಂಕರಿಸಿ, ಎಲ್ಲರಿಗೂ ದೀಪಾವಳಿಯ ಶುಭ ಕೋರಿದ್ದಾರೆ.
715
ರಾಧಿಕಾ ನಾರಾಯಣ್
ಸಿಂಪಲ್ ಆಗಿರೋ ಆಫ್ ವೈಟ್ ಕುರ್ತಾ ಧರಿಸಿರುವ ರಾಧಿಕಾ ನಾರಾಯಣ್ ಕೈಯಲ್ಲಿ ದೀಪ ಹಿಡಿದು, ಸುಂದರ ನಗು ಬೀರುತ್ತ, ಅಭಿಮಾನಿಗಳಿಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.
815
ರಾಗಿಣಿ ದ್ವಿವೇದಿ
ಪಿಂಕ್ ಬಣ್ಣದ ರೇಶ್ಮೆ ಸೀರೆ, ಜ್ಯುವೆಲ್ಲರಿಯಲ್ಲಿ ಮದುಮಗಳಂತೆ ಮಿಂಚುತ್ತಿರುವ ರಾಗಿನಿ ಕತ್ತಲೆಯ ವಿರುದ್ಧ ಬೆಳಕಿನ ವಿಜಯ.....ಕೆಟ್ಟದ್ದರ ವಿರುದ್ಧ ಒಳ್ಳೆಯದು... ಅಜ್ಞಾನದ ವಿರುದ್ಧ ಜ್ಞಾನ...ಸಂಕೇತವಾದ ದೀಪಾವಳಿಯ ಶುಭಾಶಯಗಳು. ನೀವು ಪ್ರಾರಂಭಿಸಲು ಬಯಸುವ ಹೊಸ ಆರಂಭಗಳಿಗೆ ಮತ್ತು ಪ್ರತಿಯೊಂದರಲ್ಲೂ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
915
ತೇಜಸ್ವಿನಿ ಶರ್ಮಾ
ಹಲವು ಸಿನಿಮಾ, ಶಾರ್ಟ್ ಫಿಲಂ, ವೆಬ್ ಸೀರಿಸ್ ಗಳಲ್ಲಿ ಮಿಂಚುತ್ತಿರುವ ನಟಿ ತೇಜಸ್ವಿ ಶರ್ಮಾ ದೀಪಾವಳಿಯ ಪ್ರಕಾಶಮಾನವಾದ ದೀಪಗಳು ನಿಮ್ಮ ಜೀವನವನ್ನು ಪ್ರೀತಿ, ಸಂತೋಷ ಮತ್ತು ಅಮೂಲ್ಯ ಕ್ಷಣಗಳಿಂದ ಬೆಳಗಿಸಲಿ. ಸಂತೋಷದ ಬೆಚ್ಚಗಿನ ಹೊಳಪಿನಿಂದ ತುಂಬಿದ ದೀಪಾವಳಿಯ ಹಾರ್ಧಿಕ ಶುಭಾಶಯಗಳು ಎಂದಿದ್ದಾರೆ.
1015
ಶ್ವೇತಾ ಆರ್ ಪ್ರಸಾದ್
ಹಸಿರು ಬಣ್ಣದ ಸೀರೆಯಲ್ಲಿ ಸುಂದರವಾಗಿ ಕಾಣ್ತಿರೋ ಶ್ವೇತಾ ಆರ್ ಪ್ರಸಾದ್ ಈ ಬೆಳಕು ನಿಮ್ಮನ್ನು ಬೆಳವಣಿಗೆ ಮತ್ತು ಸಮೃದ್ಧಿಯ ಹಾದಿಗೆ ಕರೆದೊಯ್ಯಲಿ ನಿಮ್ಮೆಲ್ಲರಿಗೂ ಸಂತೋಷದ ಮತ್ತು ಸಮೃದ್ಧ ದೀಪಾವಳಿಯ ಶುಭಾಶಯಗಳು ಎಂದು ಹಾರೈಸಿದ್ದಾರೆ.
1115
ದೀಪಿಕಾ ದಾಸ್
ಕಿರುತೆರೆ ಮತ್ತು ಬಿಗ್ ಬಾಸ್ ನಲ್ಲಿ ಮಿಂಚಿದ ನಟಿ ದೀಪಿಕಾ ದಾಸ್ ಮರುನ್ ಬಣ್ಣದ ಸೀರೆಯುಟ್ಟು, ಕೈಯಲ್ಲಿ ನಕ್ಷತ್ರ ಕಡ್ಡಿ ಹಚ್ಚಿ ಹಳೇ ಕತ್ತಲು ಬಿಡಲಿ, ಸಮೃದ್ಧಿಯ ಹೊಸಬೆಳಕು ಬರಲಿ, ದೀಪಾವಳಿ ಹಬ್ಬದ ಶುಭಾಶಯಗಳು ಎಂದಿದ್ದಾರೆ.
1215
ಶಾನ್ವಿ ಶ್ರೀವಾಸ್ತವ್
ಮಾಸ್ಟರ್ ಪೀಸ್, ತಾರಕ್, ಅವನೇ ಶ್ರೀಮನ್ನಾರಾಯಣ ಮೊದಲಾದ ಹಿಟ್ ಸಿನಿಮಾದಲ್ಲಿ ಮಿಂಚಿದ ನಟಿ ಶಾನ್ವಿ ಆಫ್ ವೈಟ್ ಶರ್ಟ್, ಹಸಿರು ಬಣ್ಣದ ಲಾಂಗ್ ಸ್ಕರ್ಟ್ ಧರಿಸಿ, ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
1315
ಪ್ರಿಯಾಂಕ ತಿಮ್ಮೇಶ್
ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕ ತಿಮ್ಮೇಶ್ ನೀವು ಬೆಳಗಿಸುವ ಪ್ರತಿ ದೀಪವೂ ನಿಮ್ಮ ಮುಖದಲ್ಲಿ ಸಂತೋಷದ ಹೊಳಪನ್ನು ತರಲಿ ಮತ್ತು ನಿಮ್ಮ ಆತ್ಮವನ್ನು ಬೆಳಗಿಸಲಿ…ದೀಪಾವಳಿಯ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.
1415
ನಿವೇದಿತಾ ಗೌಡ
ಪಿಸ್ತಾ ಗ್ರೀನ್ ಬಣ್ಣದ ಪ್ಲೋರಲ್ ಲಂಗ ಮತ್ತು ಪಿಂಕ್ ಬಣ್ಣದ ಬ್ಲೌಸ್ ಜೊತೆಗೆ, ಡಾರ್ಕ್ ಗ್ರೀನ್ ಬಣ್ಣದ ದುಪ್ಪಟ್ಟಾ ಹೊಂದಿಸಿರುವ ಲಂಗ ದಾವಣಿಯಲ್ಲಿ ನಿವೇದಿತಾ ಗೌಡ ಗೊಂಬೆಯಂತೆ ತುಂಬಾನೆ ಸುಂದರವಾಗಿ ಕಾಣಿಸಿದ್ದಾರೆ.
1515
ನಿಶ್ವಿಕಾ ನಾಯ್ಡು
ಕೇಸರಿ ಬಣ್ಣದ ರೇಷ್ಮೆ ಸೀರೆ, ಜೊತೆಗೆ ಹೆವಿ ಸ್ಟೋನ್ ಜ್ಯುವೆಲ್ಲರಿ ಧರಿಸಿ, ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ನಟಿ ನಿಶ್ವಿಕಾ ನಾಯ್ಡು ಸಮಸ್ತ ಕನ್ನಡಿಗರಿಗೆ ಹಬ್ಬದ ಶುಭ ಕೋರಿದ್ದಾರೆ.