ನಟಿಯೂ ಅಲ್ಲ, ಮಾಡೆಲ್ ಅಲ್ವೆ ಅಲ್ಲ ಆದ್ರೂ ಇಂಟರ್ನೆಟ್ ಪೂರ್ತಿ ಸ್ಟಾರ್ ನಟಿ‌ ಮಗಳದ್ದೆ ಸದ್ದು…

First Published | Aug 27, 2024, 6:23 PM IST

ಸ್ಯಾಂಡಲ್’ವುಡ್ ಹಿರಿಯ ನಟಿ ಶೃತಿ ಅವರ ಪುತ್ರಿ ಗೌರಿ ಶೃತಿ ಸಿನಿಮಾಕ್ಕೆ ಇನ್ನೂ ಬಂದೇ ಇಲ್ಲ, ಆದರೆ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಫಾಲೋವರ್ಸ್ ಹೊಂದಿರುವ ಗೌರಿ ಹೊಸ ಲುಕ್ ವೈರಲ್. 
 

ಸೆಲೆಬ್ರಿಟಿಗಳ ಮಕ್ಕಳು ಸಿನಿಮಾಗಳಲ್ಲಿ ಇಲ್ಲದೇ ಇದ್ದರೂ ಸೋಶಿಯಲ್ ಮೀಡಿಯಾದಲ್ಲಿ ಜನರು ಮಾತ್ರ ಅಭಿಮಾನಿಗಳಿಂದಲೇ ಅವರು ಫೇಮಸ್ ಆಗಿರ್ತಾರೆ. ಅವರಲ್ಲಿ ಒಬ್ಬರು ನಮ್ಮ ಸ್ಯಾಂಡಲ್ ವುಡ್ ಹಿರಿಯ ನಟಿ ಶೃತಿ ಅವರ ಪುತ್ರಿ ಗೌರಿ. ಗೌರಿ ಏನೇ ಮಾಡಿದ್ರೂ ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲಿ ಇವರದ್ದೇ ಸದ್ದು ಇರುತ್ತೆ. ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ ಗೌರಿ ಶೃತಿ (Gouri Shruthi). 
 

ಗೌರಿ ಶೃತಿ ನಟಿಯೂ ಅಲ್ಲ, ಯಾವ ಮಾಡೆಲ್ ಕೂಡ ಅಲ್ಲ, ಇವರು ಶೃತಿಯವರ (Actress Shruthi) ಮುದ್ದಿನ ಮಿಲಿ ಅಷ್ಟೇ. ಇತ್ತೀಚೆಗೆ ತರುಣ್ ಸುಧೀರ್- ಸೋನಾಲ್ ಮದುವೆಯಲ್ಲಿ ಮನೆಮಗಳಂತೆ ಓಡಾಡುತ್ತಿದ್ದ ಗೌರಿ ಫೋಟೊ, ವಿಡಿಯೋಗಳೆಲ್ಲಾ ಅಂತರ್ಜಾಲಗಳಲ್ಲಿ, ಟ್ರೋಲ್ ಪೇಜ್ ಗಳಲ್ಲಿ ಸಿಕ್ಕಾಪಟ್ಟೆ ಗಿರಕಿ ಹೊಡೆಯುತ್ತಿತ್ತು. ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಗೌರಿಯ ಸಿಂಪಲ್ ಲುಕ್ ಅಭಿಮಾನಿಗಳಿಗೆ ತುಂಬಾನೆ ಹಿಡಿಸಿದೆ. 
 

Tap to resize

ಇದೀಗ ಕೃಷ್ಣ ಜನ್ಮಾಷ್ಟಮಿಯ (Krishna Janmashtami) ಹಿನ್ನೆಲೆಯಲ್ಲಿ ಗೌರಿ ತಮ್ಮ ತಾಯಿಯ ಜೊತೆಗೆ ನಿನ್ನೆ ಇಸ್ಕಾನ್ ದೇಗುಲಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ವಿಶೇಷವಾದ ಶ್ರೀಕೃಷ್ಣ ಮತ್ತು ಕೃಷ್ಣನ ರಾಸ ಲೀಲೆಗಳ ಮುದ್ರಣವಿರುವ ಸೀರೆ ಧರಿಸಿದ್ದರು. ಇವತ್ತು ಆ ಫೋಟೊಗಳನ್ನು ತಮ್ಮ ಇನ್’ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದು, ಗೌರಿಯ ಸಿಂಪಲ್ ಎಲಿಗೆಂಟ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 
 

ನಿನಗೆ ಸರಿ ಸಾಟಿ ಯಾರೂ ಇಲ್ಲ, ಅಮ್ಮನಿಗೆ ತಕ್ಕ ಮಗಳು, ಗಾರ್ಜಿಯಸ್ ಎಂದಿರೋದಲ್ಲದೇ ತರುಣಿಯ ರೂಪ ಚೆಂದ...ಯುವತಿಯ ಗಾನ ಚೆಂದ., ಹೊಸತನು ಬಯಸುತಿಹ....ಕಲಿಯಲು ಕಾಯುತಿಹ., ಚೆಲುವೆಯ ಮನವಿದು ಚೆಂದವೋ ಚೆಂದ.... ಎಂದು ಕವನಗಳ ಸಾಲುಗಳನ್ನು ಕಾಮೆಂಟ್ ಗಳಲ್ಲೇ ಗೀಚಿ ಹಾಕಿದ್ದಾರೆ. 
 

ತಮ್ಮ ಮಧುರವಾದ ಹಾಡು ಮತ್ತು ಕಂಠಸಿರಿಯ ಮೂಲಕ ಗಮನ ಸೆಳೆದಿರುವ ಗೌರಿ, ಸಿನಿಮಾದಲ್ಲಿ ಯಾವಾಗ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಇದೆ. ಆದರೆ ಇಲ್ಲಿವರೆಗೂ ಆ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಶೃತಿ ಅವರಿಗೆ ಮಗಳನ್ನು ಸಿನಿಮಾದಲ್ಲಿ ಲಾಂಚ್ ಮಾಡೋ ಆಸೆಯೂ ಇದೆ. ಆದ್ರೆ ಇದು ಯಾವಾಗ ಆಗುತ್ತೆ? ಸಿನಿಮಾಕ್ಕೆ (movies) ತಯಾರಿ ನಡೆಸುತ್ತಿದ್ದಾರಾ? ಅನ್ನೋದೆಲ್ಲಾ ಇನ್ನೂ ತಿಳಿದು ಬಂದಿಲ್ಲ. 
 

ಕಾಟೇರ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಅಮ್ಮನ ಜೊತೆಗೆ ಸೆಟ್ ಗೆ ಹೋಗುತ್ತಿದ್ದ ಗೌರಿಯ ಫೋಟೊಗಳು ವೈರಲ್ ಆಗಿದ್ದವು. ದರ್ಶನ್ (Darshan) ಮುಂದಿನ ಚಿತ್ರಕ್ಕೆ ಶೃತಿ ಮಗಳು ಗೌರಿ ಹೀರೊಯಿನ್ ಅನ್ನುವ ಸುದ್ದಿ ಕೂಡ ಕೇಳಿ ಬಂದಿತ್ತು. ಆಮೇಲೆ ಏನೇನು ಆಯ್ತು ಅನ್ನೋದು ನಿಮಗೆ ಗೊತ್ತಿದೆ. ಇನ್ನು ಗೌರಿಯನ್ನು ಯಾವಾಗ ಸಿನಿಮಾದಲ್ಲಿ ನೋಡಬಹುದು ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. 
 

Latest Videos

click me!