27 ವರ್ಷ ಬಳಿಕ ಒಂದಾದ ‘ಕರ್ಪೂರದ ಗೊಂಬೆ’ ಜೋಡಿ ಶ್ರುತಿ ಅಣ್ಣ ಶರಣ್ - ಲಕ್ಷ್ಮಿ ನಿವಾಸದ ಶ್ವೇತಾ!

Published : Aug 27, 2024, 02:32 PM ISTUpdated : Aug 27, 2024, 06:22 PM IST

ಕರ್ಪೂರದ ಗೊಂಬೆ ಸಿನಿಮಾ ನೋಡಿರೋರಿಗೆ ಶ್ವೇತಾ ಮತ್ತು ಶರಣ್ ಜೋಡಿ ಚೆನ್ನಾಗಿಯೇ ನೆನಪಿರಬಹುದು. ಈ ಜೋಡಿ ಇದೀಗ ಮತ್ತೆ ಒಂದಾಗಿದೆ.   

PREV
17
27 ವರ್ಷ ಬಳಿಕ ಒಂದಾದ ‘ಕರ್ಪೂರದ ಗೊಂಬೆ’ ಜೋಡಿ ಶ್ರುತಿ ಅಣ್ಣ ಶರಣ್ - ಲಕ್ಷ್ಮಿ ನಿವಾಸದ ಶ್ವೇತಾ!

ನಿಮಗೆ ನೆನಪಿದ್ಯಾ. ಅದು 1996ನೇ ಇಸವಿ ಆ ಟೈಮಲ್ಲಿ ಶ್ರುತಿ, ರಮೇಶ್ ಅರವಿಂದ್ (Ramesh Aravind) , ಶ್ವೇತಾ ಅಭಿನಯದ ಸೂಪರ್ ಸಿನಿಮಾ ಕರ್ಪೂರದ ಗೊಂಬೆ (Karporada Gombe) ಬಿಡುಗಡೆಯಾಗಿತ್ತು. ಎಸ್ ಮಹೇಂದರ್ ನಿರ್ದೇಶನದ ಇಮೋಷನಲ್, ಸೆಂಟಿಮೆಂಟಲ್ ಕಥೆ ಹೊಂದಿರುವ ಈ ಚಿತ್ರ ಸಿನಿ ರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು, ಹಾಗಾಗಿ ಭರ್ಜರಿ ಯಶಸ್ಸು ಕೂಡ ಲಭಿಸಿತ್ತು. 
 

27

ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳು ಅಂದ್ರೆ ಶ್ರುತಿ, ರಮೇಶ್ ಮತ್ತು ಶ್ವೇತಾ (Shwetha) ಅನ್ನೋದು ನಿಜಾ. ಆದರೆ ಈ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟ ಅಂದ್ರೆ ಅದು ಶರಣ್. ಹೌದು ನಟಿ ಶ್ರುತಿ ಅವರ ಸಹೋದರ ಇಂದಿನ ಜನಪ್ರಿಯ ನಟ ಶರಣ್ ಅವರ ಮೊದಲ ಸಿನಿಮಾ ಕರ್ಪೂರದ ಗೊಂಬೆ. 
 

37

ಈ ಸಿನಿಮಾದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಶರಣ್ ನಟಿಸಿದ್ದರು. ಶ್ವೇತಾರನ್ನು ಮದುವೆಯಾಗುವ ಹುಡುಗನ ಪಾತ್ರ ಇವರದ್ದು, ಸಿನಿಮಾದಲ್ಲಿ ಈ ಪಾತ್ರದ ಕೊನೆ ಕೂಡ ಬೇಗನೇ ಆಗುತ್ತೆ, ಆದ್ರೆ ಒಂದು ರೀತಿಯಲ್ಲಿ ಪ್ರಮುಖ ಪಾತ್ರ ಇದು. ಕರ್ಪೂರದ ಗೊಂಬೆ ಸಿನಿಮಾದಲ್ಲಿ ಜೋಡಿಯಾಗಿದ್ದ ಶ್ವೇತಾ ಮತ್ತು ಶರಣ್ (Sharan) ಜೋಡಿ ಇದೀಗ ಮತ್ತೆ ಒಂದಾಗಿದೆ. 
 

47

ಸ್ಯಾಂಡಲ್ವುಡ್ (Sandalwood) ಜನಪ್ರಿಯ ನಟ ಶರಣ್ ಅವರ ಮನೆಗೆ ಶ್ವೇತಾ ಆಗಮಿಸಿದ್ದು, ಶರಣ್ ಫ್ಯಾಮಿಲಿ ಜೊತೆ ಶ್ವೇತಾ ಸಮಯ ಕಳೆದಿದ್ದಾರೆ. 27 ವರ್ಷದ ಹಿಂದೆ ಶುರುವಾದ ತಮ್ಮ ಸ್ನೇಹದ ಬಗ್ಗೆ ತಿಳಿಸಿರುವ ಶರಣ್, ಈ ಕುರಿತು ಫೋಟೊ ಜೊತೆ ಒಂದಷ್ಟು ಮಾಹಿತಿಯನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

57

ಶರಣ್ ಹೀಗೆ ಬರೆದು ಕೊಂಡಿದ್ದಾರೆ ಕರ್ಪೂರದ ಗೊಂಬೆ' ಇಂದ ಶುರುವಾದ ಸ್ನೇಹ, ಪರಸ್ಪರ ಗೌರವ 27 ವರ್ಷಗಳ ನಂತರವೂ ಹಾಗೆಯೇ ಉಳಿದಿದೆ. ನನ್ನ ಮೊದಲ ಸಿನಿಮಾ (first film), ಹೊಸಬನಾಗಿದ್ದರು, ಹಳೆಯ ಸ್ನೇಹಿತನೇನೋ ಎಂಬಷ್ಟು ಕಾಳಜಿ ತೋರುತ್ತಿದ್ದ ಸಮಯ. ಶ್ವೇತಾರಂತೆ ಆಗ ಎಲ್ಲರೂ ನನ್ನ ಬೆನ್ನ ಹಿಂದೆ ನಿಂತು ಧೈರ್ಯತುಂಬಿರದಿದ್ದರೆ, ನಿಮ್ಮ ಶರಣ ಇಂದಿನ ಶರಣ ಆಗುತ್ತಿರಲಿಲ್ಲವೇನೋ ಅನಿಸುತ್ತದೆ ಎಂದು ಬರೆದುಕೊಂಡಿದ್ದಾರೆ. 
 

67

ಜೊತೆಗೆ ಹಳೆಯ ಸ್ನೇಹಿತರ ಜೊತೆ ಇಡೀ ಕುಟುಂಬ ಕಳೆಯುವ ಸಮಯ ಎಷ್ಟು ಸಂತೋಷ ನೀಡುತ್ತದೆಯಲ್ಲವೇ ಎಂದು ಸಹ ಹೇಳಿದ್ದಾರೆ. ಫೋಟೊಗಳಲ್ಲಿ ಶರಣ್, ಶ್ವೇತಾ ಅಲ್ಲದೇ ಶರಣ್ ಪತ್ನಿ, ಇಬ್ಬರು ಮಕ್ಕಳನ್ನೂ ಸಹ ಕಾಣಬಹುದು. 
 

77

ನಟಿ ಶ್ವೇತ ಸದ್ಯ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ (lakshmi nivasa) ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದರೆ, ನಟ ಶರಣ್  ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೇ ಏಪ್ರಿಲ್ ನಲ್ಲಿ ಶರಣ್ ನಟಿಸಿರುವ ಅವತಾರಪುರುಷ 2 ಬಿಡುಗಡೆಯಾಗಿತ್ತು. ಸದ್ಯ ಛೂ ಮಂಥರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಛೂ ಮಂತರ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ. 
 

Read more Photos on
click me!

Recommended Stories