Aradhana Ram Birthday: ಕುಟುಂಬ ಸಮೇತ ಕಾಲ್ನಡಿಗೆಯಲ್ಲಿ ತಿಮ್ಮಪ್ಪನ ದರ್ಶನ ಪಡೆದ ಮಾಲಾಶ್ರೀ

Published : Feb 03, 2026, 04:59 PM IST

Aradhana Ram Birthday: ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀಯವರ ಪುತ್ರಿ ಆರಾಧಾನ ರಾಮ್ ಹುಟ್ಟುಹಬ್ಬದ ಪ್ರಯುಕ್ತ, ನಟಿ ಕುಟುಂಬ ಸಮೇತರಾಗಿ ಕಾಲ್ನಡಿಗೆಯಲ್ಲಿ ತಿರುಪತಿ ಬೆಟ್ಟ ಏರಿ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದು, ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

PREV
16
ಮಾಲಾಶ್ರೀ ರಾಮು

ಕನ್ನಡ ಚಿತ್ರರಂಗದಲ್ಲಿ ಕನಸಿನ ರಾಣಿಯಾಗಿ, ಲೇಡಿ ಸೂಪರ್ ಸ್ಟಾರ್ ಎನ್ನುವ ಬಿರುದು ಪಡೆದ ನಟಿ ಮಾಲಾಶ್ರೀ. ಇದೀಗ ನಟಿ ಕುಟುಂಬ ಸಮೇತರಾಗಿ ತಿರುಪತಿ ತಿರುಮಲ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಹತ್ತಿ, ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ.

26
ಆರಾಧಾನ ರಾಮ್ ಬರ್ತ್ ಡೇ

ಕಾಟೇರಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಆರಾಧಾನ ರಾಮ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಾಲಾಶ್ರೀ, ಅನನ್ಯಾ, ಆರ್ಯನ್ ಮತ್ತು ಮಾಲಾಶ್ರೀಯವರ ತಾಯಿ ಶಶಿಕಲಾ ಜೊತೆಯಾಗಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ.

36
ಕಾಲ್ನಡಿಗೆಯಲ್ಲಿ ಬೆಟ್ಟ ಏರಿದ ಫ್ಯಾಮಿಲಿ

ಮಾಲಾಶ್ರೀ ತಮ್ಮ ಕುಟುಂಬ ಸಮೇತ ಅಲಪಿರಿಯಿಂದ ತಿರುಮಲ ಬೆಟ್ಟವನ್ನು ಕಾಲ್ನಡಿಗೆಯಲ್ಲಿ ಏರಿ, ಅಲ್ಲಿಂದ ಕರ್ಪೂರ ದೀಪ ಬೆಳಗಿಸಿ, ತಮ್ಮ ಹರಕೆಯನ್ನು ತೀರಿಸುವ ಮೂಲಕ, ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.

46
ಆರಾಧನಾ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್

ಆರಾಧನಾ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟಿ ಮಾಲಾಶ್ರೀ ತಮ್ಮ ಮಗಳ ಜೊತೆಗಿನ ತಿರುಪತಿಯ ಫೋಟೊಗಳನ್ನು ಹಂಚಿಕೊಂಡು ನನ್ನ ಜೀವನದ ಬೆಳಕಾದ ಆರಾಧನಾಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಪ್ರತಿದಿನವೂ ಪ್ರಕಾಶಮಾನವಾಗಿಸುತ್ತಿರು. ನಿನ್ನಎಲ್ಲಾ ಕನಸುಗಳು ನನಸಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

56
ಆರಾಧನಾ ಮುಂದಿನ ಸಿನಿಮಾ ಯಾವುದು?

ಕಾಟೇರಾ ಸಿನಿಮಾ ಬಿಡುಗಡೆಯಾಗಿ ಎರಡು ವರ್ಷಗಳಾಗುತ್ತಾ ಬಂದರೂ ಆರಾಧನಾ ಯಾವ ಸಿನಿಮಾ ಕೂಡ ರಿಲೀಸ್ ಆಗಿಲ್ಲ. ನಟಿ ಯಾವುದೇ ಪಾತ್ರಗಳನ್ನು ಒಪ್ಪಿಕೊಂಡಿಲ್ಲವೇ ಎನ್ನುವ ಪ್ರಶ್ನೆಯೂ ಇದೆ. ಅಂದ ಹಾಗೇ ಇತ್ತೀಚೆಗೆ ಆರಾಧಾನಾ ಉಪೇಂದ್ರ ಅವರ ಮುಂದಿನ ಸಿನಿಮಾದಲ್ಲಿ ನಟಿಸುವುದಾಗಿ ಮಾಹಿತಿ ಇದೆ.

66
ಆರ್ಯನ್ ಸಿನಿಮಾಗೆ ಎಂಟ್ರಿ ಯಾವಾಗ?

ಮಾಲಾಶ್ರೀ ಅವರ ಕಿರಿಯ ಪುತ್ರ ಆರ್ಯನ್ ಕೂಡ ನೋಡಲು ಹೀರೋ ಲುಕ್ ಇದೆ. ಹೈಟ್, ಪರ್ಸನಾಲಿಟಿ ಎಲ್ಲವೂ ಚೆನ್ನಾಗಿದೆ. ಅಕ್ಕನಂತೆ ಆರ್ಯನ್ ಯಾವಾಗ ಸಿನಿಮಾಗೆ ಎಂಟ್ರಿ ಕೊಡುತ್ತಾರೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳುತ್ತಿದ್ದಾರೆ. ಶೀಘ್ರದಲ್ಲಿ ಆರ್ಯನ್ ಕೂಡ ಚಂದನವನಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories