'ಕನಸಿನ ರಾಣಿ' ಮಾಲಾಶ್ರೀ ತಮ್ಮ ಯಶಸ್ಸಿಗೆ ಕಾರಣರಾದ ಶಿರಡಿ ಸಾಯಿಬಾಬಾಗೆ ಕೃತಜ್ಞತಾಪೂರ್ವಕವಾಗಿ ಚಿನ್ನದ ಕಿರೀಟವನ್ನು ಸಮರ್ಪಿಸಿದ್ದಾರೆ. ತಮ್ಮ ಮೊದಲ ಚಿತ್ರ 'ನಂಜುಂಡಿ ಕಲ್ಯಾಣ'ಕ್ಕೂ ಮುನ್ನ ಬಾಬಾರ ಆಶೀರ್ವಾದ ಪಡೆದಿದ್ದ ಅವರು, ಇದೀಗ ಮಗಳು ಆರಾಧನಾ ಜೊತೆಗೂಡಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.
1989ರಲ್ಲಿ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಮೊದಲ ಸಿನಿಮಾದಲ್ಲಿಯೇ ಕನಸಿನ ರಾಣಿ ಎನ್ನುವ ಪಟ್ಟ ಕಟ್ಟಿಕೊಂಡ ನಟಿ ಮಾಲಾಶ್ರೀ. ಇವರ ಈ ಚಿತ್ರದ ಅಭಿನಯ ನೋಡಿ ಮನಸೋಲದವರೇ ಇಲ್ಲ. ಮೊದಲ ಚಿತ್ರವನ್ನೇ ಬ್ಲಾಕ್ಬಸ್ಟರ್ ಮಾಡಿದ ಕೀರ್ತಿ ನಟಿಗೆ ಸಲ್ಲುತ್ತದೆ.
27
ಮೂವತ್ತು ವರ್ಷಗಳ ಪಯಣ
ಬಾಲನಟಿಯಾಗಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟು ತೆಲುಗು, ತಮಿಳು ಚಿತ್ರರಂಗವನ್ನೂ ಆಳಿರೋ ನಟಿಗೆ ಇದಾಗಲೇ ಸಿನಿಮಾ ರಂಗದಲ್ಲಿ ಮೂವತ್ತು ವರ್ಷ ಮೇಲಾಗಿದೆ. ಆದಾಗ್ಯೂ ನಟಿಯ ಆ ಖದರ್ ನಿಲ್ಲಲಿಲ್ಲ. ಪೊಲೀಸ್ ಡ್ರೆಸ್ ಹಾಕಿದ್ರೆ ಸಾಕು, ನಿಜವಾದ ರೌಡಿಗಳ ಎದೆಯೂ ಝಲ್ ಎನ್ನುವಂಥ ನಟನೆ ಮಾಡುತ್ತಾರೆ ಮಾಲಾಶ್ರೀ.
37
ಚಿನ್ನದ ಕಿರೀಟ
ಇದೀಗ ನಟಿ ಮಾಲಾಶ್ರೀ ಪುತ್ರಿ ಆರಾಧನಾ ಜೊತೆಗೂಡಿ ಶಿರಡಿಯ ಸಾಯಿಬಾಬಾ ದೇಗುಲಕ್ಕೆ ತೆರಳಿ ಅಲ್ಲಿ ದುಬಾರಿಯ ಚಿನ್ನದ ಕಿರೀಟವನ್ನು ಅರ್ಪಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿರುವ ನಟಿ, ನನ್ನ ಮೊದಲ ಕನ್ನಡ ಸಿನಿಮಾ ನಂಜುಂಡಿ ಕಲ್ಯಾಣ ಶುರು ಮಾಡುವ ಮುನ್ನ ಶಿರಡಿ ಸಾಯಿಬಾಬಾ ಆರ್ಶೀವಾದವನ್ನ ಪಡೆದಿದ್ದೆ. 'ಇವತ್ತು ನಾನು ಚಿತ್ರರಂಗದಲ್ಲಿ ಮಾಡಿರುವ ಸಾಧನೆ, ನನಗೆ ಸಿಕ್ಕಿರುವ ಜನಪ್ರಿಯತೆ ಎಲ್ಲವೂ ಬಾಬಾ ಅವರ ಆಶೀರ್ವಾದದಿಂದಲೇ ಸಿಕ್ಕಿದೆ' ಎಂದಿದ್ದಾರೆ. ಅದೇ ಕಾರಣಕ್ಕೆ ಈ ಕಿರೀಟ ಎಂದಿದ್ದಾರೆ.
57
ಬಾಬಾ ಮೇಲಿನ ಭಕ್ತಿ
ಅಂದಹಾಗೆ, ನಟಿ ಮಾಲಾಶ್ರೀ ಅವರಿಗೆ ಶಿರಡಿ ಸಾಯಿಬಾಬಾ ಮೇಲಿನ ಭಕ್ತಿ ಮೊದಲಿನಿಂದಲೂ ಇದೆ. ಇದೀಗ ತಮ್ಮಂತೆಯೇ ಮಗಳು ಆರಾಧನಾ ರಾಮ್ ಮತ್ತು ಮಗ ಆರ್ಯನ್ಗೂ ಯಶಸ್ಸು ಸಿಗಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ. ನನ್ನ ಮಗಳು ಆರಾಧನಾ ಕೂಡ ಶಿರಡಿಯಿಂದಲೇ ತನ್ನ ಕೆರಿಯರ್ ಶುರು ಮಾಡಿದ್ದು. ಅವಳು ಕೂಡ ತನ್ನ ಮೊದಲ ಸಿನಿಮಾದಲ್ಲಿ ನಟಿಸುವ ಮುನ್ನ ಶಿರಡಿಗೆ ಬಂದು ಆಶೀರ್ವಾದ ಪಡೆದಿದ್ದಳು ಎಂದಿದ್ದಾರೆ.
67
ಏನಾದರೂ ಕೊಡಬೇಕು ಅಂದುಕೊಂಡಿದ್ದೆ
'ನಾನು ಬಹಳ ವರ್ಷಗಳಿಂದ ಬಾಬಾಗೆ ಏನಾದರೂ ನೀಡಬೇಕು ಎಂದುಕೊಂಡಿದ್ದೆ. ಬಾಬಾ ನನಗೆ ತೀರಾ ಹತ್ತಿರ ಎನ್ನಿಸುತ್ತದೆ. ನಾನು ಕೇಳಿದ ಎಲ್ಲವನ್ನೂ ಕರುಣಿಸಿದ್ದಾರೆ. ಹೀಗಾಗಿ ನನ್ನ ಕಡೆಯಿಂದ ಇದೊಂದು ಪುಟ್ಟ ಕಾಣಿಕೆ ಎಂದಿದ್ದಾರೆ.
77
ಮಹಿಮೆ ಎಲ್ಲರಿಗೂ ಗೊತ್ತು
ಬಾಬಾ ಅವರ ಮಹಿಮೆ ಏನೆಂದು ಎಲ್ಲರಿಗೂ ಗೊತ್ತಿದೆ. ನಾನು ಬಾಬಾ ಮಂದಿರದ ಆಡಳಿತ ಮಂಡಳಿಗೆ ಹಾಗೂ ವೈಯಕ್ತಿಕವಾಗಿ ಸಾಯಿಬಾಬಾಗೆ ಧನ್ಯವಾದ ಹೇಳಲು ಬಯಸುತ್ತೇನೆ' ಎಂದಿದ್ದಾರೆ ಮಾಲಾಶ್ರೀ. shreesaibabasansthantrust ಈ ವಿಡಿಯೋ ಶೇರ್ ಮಾಡಿದೆ.