ಮದ್ವೆಗೆ ಕರೆಯಲು ಬಂದು ಮದುವಣಗಿತ್ತಿ ಹರ್ಷಿಕಾಗೆ ವಿಶೇಷ ಉಡುಗೊರೆ ನೀಡಿದ ಜಯಮಾಲ

Published : Aug 20, 2023, 03:57 PM ISTUpdated : Aug 22, 2023, 08:51 AM IST

ಸ್ಯಾಂಡಲ್‌ವುಡ್‌ ಇನ್ನೊಂದು ಮದ್ವೆ ಸಂಭ್ರಮಕ್ಕೆ ಸಜ್ಜಾಗಿದೆ. ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಹಾಗೂ ಮಾಜಿ ಬಿಗ್‌ಬಾಸ್ ಸ್ಪರ್ಧಿ ಭುವನ್‌ ಪೊನ್ನಣ್ಣ ಮದುವೆ ಸಂಭ್ರಮದಲ್ಲಿದ್ದು,  ಚಿತ್ರರಂಗದ ಗಣ್ಯರಿಗೆ ಆಹ್ವಾನ ಪತ್ರಿಕೆ ವಿತರಿಸುವ ಬ್ಯುಸಿಯಲ್ಲಿದ್ದಾರೆ.  

PREV
16
ಮದ್ವೆಗೆ ಕರೆಯಲು ಬಂದು ಮದುವಣಗಿತ್ತಿ ಹರ್ಷಿಕಾಗೆ ವಿಶೇಷ ಉಡುಗೊರೆ ನೀಡಿದ ಜಯಮಾಲ
Harshika Poonacha

ಕೊಡಗಿನವರಾದ ಹರ್ಷಿಕಾ ಪೂಣಚ್ಚ ಹಾಗೂ ಭುವನ್‌ ಪೊನ್ನಣ್ಣ  ಆಗಸ್ಟ್ 24 ರಂದು ಹಸೆಮಣೆ ಏರಲಿದ್ದು ಸ್ಯಾಂಡಲ್‌ವುಡ್‌ನ ಪ್ರತಿಯೊಬ್ಬರ ಮನೆಗೆ ಭೇಟಿ ನೀಡಿ ಆಹ್ವಾನ ಪತ್ರಿಕೆ ನೀಡುತ್ತಿದ್ದಾರೆ.

26
Harshika Poonacha

ಇಂದು ಈ ಜೋಡಿ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಜಯಾಮಾಲಾ ಮನೆಗೆ ಹೋಗಿ ಮದ್ವೆ ಆಮಂತ್ರಣ ಪತ್ರಿಕೆ ನೀಡಿದ್ದು, ಈ ವೇಳೆ ನಮಜೋಡಿಗೆ ಜಯಮಾಲಾ ಸರ್‌ಫ್ರೆಸ್ ನೀಡಿದ್ದಾರೆ. 

36
Harshika Poonacha

ಮದುವೆಗೂ ಮೊದಲೇ ಹರ್ಷಿಕಾ ಪೂಣಚ್ಚಗೆ ಚಿನ್ನದ ಓಲೆ ಗಿಫ್ಟ್ ನೀಡಿ ಜಯಮಾಲಾ ಆಶೀರ್ವದಿಸಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  ಹರ್ಷಿಕಾಗೆ ತಾವೇ ಕೈಯಾರೆ ಕಿವಿಯೋಲೆ ಹಾಕಿ ಜಯಮಾಲ ಸಂಭ್ರಮಿಸಿದ್ದು, ಈ ವೇಳೆ ಜೊತೆಗೆ ಭುವನ್ ಪೊನ್ನಣ್ಣ ಜಯಮಾಲಾ ಪುತ್ರಿ ಸೌಂದರ್ಯಾ ಜಯಮಾಲಾ ಜೊತೆಗಿದ್ದರು.

46
Harshika Poonacha

ಹುಟ್ಟೂರಿನಲ್ಲಿ ಈ ಜೋಡಿ ಹಸೆಮಣೆ ಏರಲಿದ್ದು, ಕೊಡವ ಭಾಷೆಯಲ್ಲಿ ಮಂಗಳ ಪತ್ರ ಮುದ್ರಿಸಲಾಗಿದೆ, ಆಮಂತ್ರಣ ಪತ್ರಿಕೆ ಹಂಚುವಲ್ಲಿ ಈ ಜೋಡಿ  ಬ್ಯುಸಿಯಾಗಿದೆ  ಈ ಲಗ್ನ ಪತ್ರಿಕೆಯಲ್ಲಿ ಹರ್ಷಿಕಾ ಮತ್ತು ಭುವನ್ ಪೊನ್ನಣ್ಣ ಅವರ ಬಾಲ್ಯದ ಚಿತ್ರ ಇರುವುದು ವಿಶೇಷ. ಇದು ಬಾಲ್ಯವಿವಾಹವಲ್ಲ ಎಂದು ತಮಾಷೆಯಾಗಿ ಪತ್ರಿಕೆಯಲ್ಲಿ ಬರೆಯಲಾಗಿದೆ. 

56
Harshika Poonacha

ಮದುವೆಯ ಮುನ್ನಾ ದಿನವಾದ 23ರಂದು ಕೊಡವ ಸಂಪ್ರದಾಯದ ಊರ್ಕುಡುವ ಸಮಾರಂಭವಿದ್ದರೆ, 24ರ ಬೆಳಿಗ್ಗೆ 10.30ಕ್ಕೆ ಮದುವೆ ಮುಹೂರ್ತ ಇರುವುದಾಗಿ ಲಗ್ನ ಪತ್ರಿಕೆಯಲ್ಲಿ (Wedding card) ತಿಳಿಸಲಾಗಿದೆ. ಕೊಡಗಿನ ತಮ್ಮ ತೋಟದಲ್ಲಿ ಬೆಳೆದ ಮೆಣಸು, ಕಾಫಿ ಪೌಡರ್, ಜೇನುತುಪ್ಪದ ಜೊತೆ ಮದುವೆ ಪತ್ರಿಕೆ ಹಂಚುತ್ತಿದ್ದಾರೆ ಈ ಜೋಡಿ. 

66
Harshika Poonacha

ಹರ್ಷಿಕಾ ಪೂಣಚ್ಚ 2008ರಲ್ಲಿ PUC ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.  ಬಳಿಕ  ಕೊಡವ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ಭೋಜಪುರಿ ಮತ್ತು ತಮಿಳು ಸಿನಿಮಾಗಳಲ್ಲಿ ಹರ್ಷಿಕಾ ಮಿಂಚಿದ್ದಾರೆ.

Read more Photos on
click me!

Recommended Stories