ಹೆಸರು ಬದಲಿಸಿಕೊಂಡ ದುರ್ಗಿ ಪುತ್ರಿ... ರಾಧನಾ ಇನ್ಮೇಲೆ ಆರಾಧನಾ

First Published | Aug 20, 2023, 12:29 PM IST

ಕನ್ನಡದ ಸಿನಿಮಾದ ಕನಸಿನ ರಾಣಿ ಮಾಲಾಶ್ರೀ ತಮ್ಮ ಮಗಳ ಹೆಸರನ್ನು ಚೇಂಚ್‌ ಮಾಡಿದ್ದಾರೆ. ಮಗಳು ರಾಧಾನಾ ರಾಮ್‌ ಹೆಸರು ಬದಲಾಗಿದ್ದು, ಇನ್ಮೇಲೆ ಆಕೆಯನ್ನು ಆರಾಧಾನಾ ರಾಮ್ ಎಂದು ಕರೆಯುವಂತೆ ಮನವಿ ಮಾಡಿದ್ದಾರೆ ಸ್ಯಾಂಡಲ್‌ವುಡ್ ದುರ್ಗಿ.

Malashri daughter Aradhana Ram

ಸಿನಿಮಾ ರಂಗದಲ್ಲಿ ಈಗಾಗಲೇ ಅನೇಕರು ತಮ್ಮ ಹೆಸರನ್ನು ಬದಲಿಸಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿದು ಯಶಸ್ವಿಯಾಗಿದ್ದಾರೆ. ಅವರ ಲಿಸ್ಟ್‌ಗೆ ಈಗ ಹೊಸ ಸೇರ್ಪಡೆ ಸ್ಯಾಂಡಲ್‌ವುಡ್ ನಟಿ ಮಾಲಾಶ್ರೀ ಪುತ್ರಿ ರಾಧನಾ ರಾಮ್‌. 

Malashri daughter Aradhana Ram

ಕಳೆದ ವರ್ಷ ಚಿತ್ರರಂಗ ಪ್ರವೇಶಿರುವ ಆರಾಧಾನಾ ಅವರ ಸಿನಿಮಾ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಸಿನಿಮಾ ಬಿಡುಗಡೆಗೂ ಮೊದಲೇ ಹೆಸರು ಬದಲಿಸಿದ್ದಾರೆ ಈ ಯುವನಟಿ


Malashri daughter Aradhana Ram

ಕಳೆದ ವರ್ಷ ವರಮಹಾಲಕ್ಷ್ಮೀ ಹಬ್ಬದಂದು ಆರಾಧನಾ ಅಭಿನಯದ ಸಿನಿಮಾ ತಂಡ ಆರಾಧನಾರ ಫಸ್ಟ್‌ಲುಕ್ ರಿಲೀಸ್ ಮಾಡಿತ್ತು. ಈಗ ರಾಧನಾ ತಮ್ಮ ಹೆಸರನ್ನು ಆರಾಧನಾ ಎಂದು ಬದಲಿಸಿಕೊಂಡಿದ್ದು, ಹೊಸ ಅದೃಷ್ಟದ ಹುಡುಕಾಟದಲ್ಲಿದ್ದಾರೆ.

Malashri daughter Aradhana Ram

ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ಆರಾಧನಾ ಇನ್ಸ್ಟಾಗ್ರಾಮ್‌ನಲ್ಲಿ ಆಗಾಗ ತಮ್ಮ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. 

Malashri daughter Aradhana Ram

ಸಿನಿಮಾರಂಗದಲ್ಲಿ ಹೀಗೆ ಹೆಸರು ಬದಲಿಸಿಕೊಳ್ಳುವುದು ಹೊಸದೇನಲ್ಲ. ಬಹುತೇಕ ಸಿನಿಮಾ ನಟರು, ನಿರ್ದೇಶಕರು, ನಾಯಕಿಯರು ತಮ್ಮ ಹೆಸರು ಬದಲಿಸಿಕೊಂಡು ಜೊತೆ ಜೊತೆಗೆ ಅದೃಷ್ಟ ಬದಲಾಯಿಸಿಕೊಂಡಿದ್ದಾರೆ.

Malashri daughter Aradhana Ram

ಸ್ವತ: ರಾಧಾನಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಚಾರ ಹಂಚಿಕೊಂಡಿದ್ದು ತನ್ನನ್ನು ಇನ್ನು ಮುಂದೆ ಆರಾಧನಾ ಎಂದು ಕರೆಯುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಮಾಲಾಶ್ರೀ ಕೂಡ ತಮ್ಮ ಮಗಳ ಹೆಸರು ಬದಲಾಗಿರುವ ವಿಚಾರವನ್ನು ಖಚಿತಪಡಿಸಿದ್ದಾರೆ

Malashri daughter Aradhana Ram

ನಾನು, ರಾಕ್ ಲೈನ್ ವೆಂಕಟೇಶ್ ಹಾಗೂ ತರುಣ್ ಸುಧೀರ್ ಮೂರು ಜನ ಚರ್ಚಿಸಿ ಮಗಳ ಹೆಸರನ್ನು ಆರಾಧನಾ ಎಂದು ಬದಲಿಸಿದ್ದೇವೆ. ಇದು ಕೇವಲ ಈ ಸಿನಿಮಾಗೆ ಮಾತ್ರ ಆಗಿರುವುದಿಲ್ಲ, ಇನ್ನು ಮುಂದೆ ನನ್ನ ಮಗಳ ಹೆಸರೇ ಆರಾಧನ ಆಗಿದ್ದು, ಮುಂದಿನ ಎಲ್ಲಾ ಸಿನಿಮಾಗಳಲ್ಲಿ ಇದೇ ಹೆಸರಿರಲಿದೆ ಎಂದಿದ್ದಾರೆ ನಟಿ ಮಾಲಾಶ್ರೀ. 

Malashri daughter Aradhana Ram

ಇತ್ತೀಚೆಗೆ ಮಾಲಾಶ್ರೀ ಹಾಗೂ ಕುಟುಂಬ ಕೊರಗಜ್ಜನ ಕ್ಷೇತ್ರ ಕುತ್ತಾರು ಸೇರಿದಂತೆ ದಕ್ಷಿಣ ಕನ್ನಡದ ಹಲವು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಮೂಲಕ ಸುದ್ದಿಯಾಗಿದ್ದರು.  

Malashri daughter Aradhana Ram


ರಾಧನಾ ರಾಮ್ ಸ್ಯಾಂಡಲ್ವುಡ್ ನಟಿ ಮಾಲಾಶ್ರೀ ಹಾಗೂ ದಿವಂಗತ ಸಿನಿಮಾ ನಿರ್ಮಾಪಕ ರಾಮು ಅವರ ಪುತ್ರಿ, ಕನ್ನಡದ ಕೆಲ ಖ್ಯಾತ ಸಿನಿಮಾಗಳನ್ನು ರಾಮ್ ನಿರ್ಮಾಣ ಮಾಡಿದ್ದರು.

Malashri daughter Aradhana Ram

ರಾಮು ಅವರು ಕನ್ನಡದ ಎಕೆ 47, ಕಲಾಸಿಪಾಳ್ಯ, ಲಾಕಪ್‌ಡೆತ್, ಗಂಗಾ, ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.  2021ರಲ್ಲಿ ಅವರು ಕೋವಿಡ್ ಸಂಬಂಧಿ ಅನಾರೋಗ್ಯದಿಂದ ಮೃತಪಟ್ಟಿದ್ದರು. 

Latest Videos

click me!