ಸೀರೆಯಲ್ಲಿ ದೇವತೆಯಂತೆ ಕಂಡ ಸಪ್ತಸಾಗರದಾಚೆ ಚೆಲುವೆ ರುಕ್ಮಿಣಿ… ಯಾರ ಕೆಟ್ಟ ಕಣ್ಣು ಬೀಳದಿರಲಿ ಎಂದ ಚೈತ್ರಾ ಆಚಾರ್

Published : Sep 26, 2024, 11:44 AM ISTUpdated : Sep 26, 2024, 12:14 PM IST

ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದ ನಟಿ ರುಕ್ಮಿಣಿ ವಸಂತ್ ಇದೀಗ ಕೇಸರಿ ಬಣ್ಣದ ಸೀರೆಯುಟ್ಟು ಮೈಸೂರಿನ ಯುವ ದಸರಾದಲ್ಲಿ ಕಂಗೊಳಿಸಿದ್ದಾರೆ.   

PREV
17
ಸೀರೆಯಲ್ಲಿ ದೇವತೆಯಂತೆ ಕಂಡ ಸಪ್ತಸಾಗರದಾಚೆ ಚೆಲುವೆ ರುಕ್ಮಿಣಿ… ಯಾರ ಕೆಟ್ಟ ಕಣ್ಣು ಬೀಳದಿರಲಿ ಎಂದ ಚೈತ್ರಾ ಆಚಾರ್

ರಕ್ಷಿತ್ ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿ, ತನ್ನ ಸ್ಥಿಗ್ಧ ಸೌಂದರ್ಯ ಮತ್ತು ಅಭಿನಯದಿಂದಲೇ ಮೋಡಿ ಮಾಡಿದ ಬ್ಯೂಟಿ ರುಕ್ಮಿಣಿ ವಸಂತ್ (Rukmini Vasanth), ಸದ್ಯ ಬ್ಯುಸಿ ನಟಿಯಾಗಿದ್ದಾರೆ. 
 

27

ಬಘೀರ (Bagheera) ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟಿ ಆರೇಂಜ್ ಬಣ್ಣದ ಸೀರೆಯುಟ್ಟು ಮಿಂಚುತ್ತಿದ್ದು, ಇವರ ಮುದ್ದಾದ ಫೋಟೊ ಸೋಶಿಯಲ್ ಮೀಡೀಯಾದಲ್ಲಿ ವೈರಲ್ ಆಗುತ್ತಿವೆ. ತಮ್ಮ ಫೋಟೊಗಳನ್ನು ಶೇರ್ ಮಾಡಿರುವ ರುಕ್ಮಿಣಿ ಹಬ್ಬದ ಸಮಯದಲ್ಲಿ ಮೈಸೂರಿನಲ್ಲಿ ಇರೋದೆ ಖುಷಿ ಎಂದಿದ್ದಾರೆ. 
 

37

ರುಕ್ಮಿಣಿ ವಸಂತ್ ಮೈಸೂರಿನ ಯುವ ದಸರಾ (Mysore Yuva Dasara) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಬಘೀರ ಸಿನಿಮಾ ಟೀಮ್​ ಜೊತೆ ನಟಿ ಮೈಸೂರಿಗೆ ಆಗಮಿಸಿದ್ದರು. ನಟ ಮುರಳಿ ಜೊತೆ ಯುವ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 
 

47

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರುಕ್ಮಿಣಿ ತುಂಬಾನೆ ಟ್ರೆಡಿಶನ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಆರೇಂಜ್ ಬಣ್ಣದ ಸೀರೆಯುಟ್ಟು, ಕಿವಿಗೆ ಜುಮ್ಕಿ, ತಲೆ ತುಂಬಾ ದುಂಡು ಮಲ್ಲಿಗೆ ಹೂವು, ಸೊಂಟ ಪಟ್ಟಿ ಧರಿಸಿ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 

57

ರುಕ್ಮಿಣಿ ಫೋಟೊಗೆ ಸಿಕ್ಕಾಪಟ್ಟೆ ಲೈಕ್ಸ್, ಕಾಮೆಂಟ್ ಬಂದಿದ್ದು, ಸಪ್ತಸಾಗರದಾಚೆ ಕೋಸ್ಟಾರ್ ನಟಿ ಚೈತ್ರಾ ಆಚಾರ್ ಉಫ್… ಆದಿ ಕಣ್ಣು, ಬೀದಿ ಕಣ್ಣು, ಮೋಚಿ ಕಣ್ಣು, ಊರೋರು ಕಣ್ಣು, ಯಾರ ಕೆಟ್ಟ ಕಣ್ಣು ಬೀಳದೇ ಇರ್ಲಿ, ಥೂ ಥೂ ಥೂ ಥೂ….ನೀನು ಒಂದು ಸರ್ತಿ ಥೂ ಮಾಡು ರುಕ್ಕು ಎಂದು ಬರೆದುಕೊಂಡಿದ್ದಾರೆ. 
 

67

ಇನ್ನೂ ಭೂಮಿ ಶೆಟ್ಟಿ ಬ್ಯೂಟಿಫುಲ್, ನಿರಂಜನ್ ದೇಶಪಾಂಡೆ ವಾವ ಆ ಮಿಲಿಯನ್ ಡಾಲರ್ ಸ್ಮೈಲ್ ಎಂದು ಹಾರ್ಟ್ ಇಮೋಜಿ ಹಾಕಿದ್ದಾರೆ. ಅಲ್ಲದೇ ಅಭಿಮಾನಿಗಳು ಬ್ಯೂಟಿಫುಲ್, ಗಾಡೆಸ್, ನನ್ನ ಕಣ್ಣೇ ಬೀಳದಿರಲಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ ಜನ. 
 

77

ರುಕ್ಮಿಣಿ ವಸಂತ್‌ ಶಿವಕಾರ್ತಿಕೇಯನ್‌ (Shiva Karthikeyan) ಮುಂದಿನ ಸಿನಿಮಾ ಎಸ್‌ಕೆ23ಗೆ ನಾಯಕಿಯಾಗಿದ್ದಾರೆ. ಎಆರ್ ಮುರಗದಾಸ್ ನಿರ್ದೇಶನದ ಈ ಚಿತ್ರಕ್ಕೆ ಇತ್ತೀಚಿಗಷ್ಟೇ ಮುಹೂರ್ತ ನಡೆಯಿತು. ಇದೀಗ ತಮ್ಮ ಮೊದಲ ತೆಲುಗು ಚಿತ್ರಕ್ಕೆ ಸಹಿ ಹಾಕಿದ್ದಾರೆ. ತೆಲುಗಿನ ಮಾಸ್ ಹೀರೋ ರವಿತೇಜಗೆ ರುಕ್ಮಿಣಿ ಜೋಡಿಯಾಗಿದ್ದಾರೆ.  ಅಷ್ಟೇ ಅಲ್ಲ ವಿಜಯ್ ಸೇತುಪತಿಗೂ ರುಕ್ಮಿಣಿ ನಾಯಕಿಯಾಗಿದ್ದಾರೆ. 
 

Read more Photos on
click me!

Recommended Stories