ಭೈರತಿ ರಣಗಲ್ ಸ್ಟೈಲಲ್ಲಿ ಭೀಮಾ ಬೆಡಗಿ ಪ್ರಿಯಾ ಶಠಮರ್ಷಣ… ಬಿಗ್ ಬಾಸ್ ಗೆ ಎಂಟ್ರಿ ಕೊಡೋಕೆ ರೆಡಿಯಾದ್ರಾ?

Published : Sep 26, 2024, 07:47 PM ISTUpdated : Sep 27, 2024, 07:41 AM IST

ಭೀಮಾ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಗಿರಿಜಾ ಆಗಿ ನಟಿಸಿರುವ ಪ್ರಿಯಾ ಶಠಮರ್ಷಣ ಭೈರತಿ ರಣಗಲ್ ಸ್ಟೈಲಲ್ಲಿ ಪಂಚೆ ಶರ್ಟ್ ಧರಿಸಿ ಪೋಸ್ ಕೊಟ್ಟಿದ್ದಾರೆ.   

PREV
17
ಭೈರತಿ ರಣಗಲ್ ಸ್ಟೈಲಲ್ಲಿ ಭೀಮಾ ಬೆಡಗಿ ಪ್ರಿಯಾ ಶಠಮರ್ಷಣ… ಬಿಗ್ ಬಾಸ್ ಗೆ ಎಂಟ್ರಿ ಕೊಡೋಕೆ ರೆಡಿಯಾದ್ರಾ?

ಇತ್ತೀಚೆಗಷ್ಟೆ ಬಿಡುಗಡೆಯಾಗಿ ಭಾರಿ ಸದ್ದು ಮಾಡ್ತಿರೋ ಭೀಮಾ ಸಿನಿಮಾ ನೀವು ನೋಡಿದ್ದೀರಿ ಅಂತಾಂದ್ರೆ ಇವರನ್ನ ಗೊತ್ತಿರದೆ ಇರೋದಕ್ಕೆ ಸಾಧ್ಯನೇ ಇಲ್ಲ.. ಭೀಮಾ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಗಿರಿಜಾ ಪಾತ್ರದಲ್ಲಿ ನಟಿಸಿದ ನಟಿ ಪ್ರಿಯಾ ಶಠಮರ್ಷಣ. (Priya Shatamarshan) ಇವರು ಪಾತ್ರದ ಮೂಲಕವೇ ಜನಮನ ಗೆದ್ದಿದ್ದರು. 

27

ರಂಗಭೂಮಿ ಕಲಾವಿದೆಯಾಗಿರುವ ಪ್ರಿಯಾ, ಲಕ್ಷಣ ಧಾರಾವಾಹಿಯಲ್ಲಿ (Lakshana Serial) ಭಾರ್ಗವಿ ಮತ್ತು ಡೆವಿಲ್ ಪಾತ್ರದಲ್ಲಿ ಅಬ್ಬರಿಸಿದ್ದ ಈ ನಟಿ,ಪಾಸಿಟಿವ್ ಮತ್ತು ನೆಗೆಟಿವ್ ಎರಡೂ ಪಾತ್ರವನ್ನೂ ಅದ್ಭುತವಾಗಿ ನಟಿಸಿದ್ದರು. ಈ ಪಾತ್ರದಿಂದ ಇವರಿಗೆ ಹೆಚ್ಚು ಮನ್ನಣೆ, ಅವಕಾಶಗಳು ಸಿಗೋದಕ್ಕೆ ಆರಂಭವಾಗಿತ್ತು. 
 

37

ಆದರೆ ಪ್ರಿಯಾಗೆ ಜನಪ್ರಿಯತೆ ತಂದು ಕೊಟ್ಟದ್ದು ಮಾತ್ರ ಭೀಮಾ ಸಿನಿಮಾ ಅಂತಾನೆ ಹೇಳಬಹುದು. ಖಡಕ್ ಪೊಲೀಸ್ ಆಫೀಸರ್ ಆಗಿ ಅವರ ಅಭಿನಯ, ಲುಕ್, ಸ್ಟೈಲ್ ಗೆ ಜನ ಎಷ್ಟೊಂದು ಥ್ರಿಲ್ ಆಗಿದ್ರು ಅಂದ್ರೆ ಇವತ್ತಿಗೂ ಅವರ ಪಾತ್ರ ಚರ್ಚೆಯಲ್ಲಿದೆ. ಪ್ರಿಯಾ ಹೆಸರಿಗಿಂತ ಹೆಚ್ಚಾಗಿ ಜನ ಗಿರಿಜಾ ಅಂತಾನೆ ಗುರುತಿಸುತ್ತಿದ್ದಾರೆ. 
 

47

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಪ್ರಿಯಾ ಶಠಮರ್ಷಣ್ ಹೆಚ್ಚಾಗಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ತಮ್ಮ ಇನ್’ಸ್ಟಾಗ್ರಾಂನಲ್ಲಿ ಹೊಸದೊಂದು ಫೋಟೊ ಅಪ್ ಲೋಡ್ ಮಾಡಿದ್ದು, ಅವರ ಲೇಡಿ ಡಾನ್ ಲುಕ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. 
 

57

ಹಸಿರು ಬಣ್ಣದ ಪಂಚೆ, ಕಪ್ಪು ಬಣ್ಣದ ಶರ್ಟ್ ಧರಿಸಿ, ಕುತ್ತಿಗೆಯಲ್ಲೊಂದು ಜಪಮಣಿ ಧರಿಸಿ ಬಿಂದಾಸ್ ವಾಕ್ ಮಾಡೋ ಫೋಟೊ ಅಪ್ ಲೋಡ್ ಮಾಡಿದ್ದು, ಇದನ್ನ ನೋಡಿದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shivaraj Kumar) ಅವರ ಭೈರತಿ ರಣಗಲ್ ಲುಕ್ ನೆನಪಿಗೆ ಬರುತ್ತೆ, ಜನ ಕೂಡ ನೀವು ಭೈರತಿ ರಣಗಲ್ ತಂಗೀನಾ ಅಂತ ಕೇಳಿದ್ದಾರೆ. 
 

67

ಅಷ್ಟೇ ಅಲ್ಲ ಪ್ರಿಯಾ ಈ ಲುಕ್ ಗೆ ತರಹೇವಾರಿ ಕಾಮೆಂಟ್ ಗಳು ಬಂದಿದ್ದು, ಶಿವಣ್ಣ 2, ರಗಡ್ ಪ್ರಿಯಾ, ಲೇಡಿ ಡಾನ್, ಫೈರ್, ಈ ಭೂಮಿ ಮೇಲಿರುವ ಪವರ್ ಫುಲ್ ವುಮೆನ್, ಲೇಡೀ ಶಿವಣ್ಣ, ತುಂಬಾ ದಿನಗಳ ನಂತರ ಕನ್ನಡ ಇಂಡಷ್ಟ್ರಿಗೆ ಒಂದು ಹೆಣ್ಣು ಹುಲಿ ಸಿಕ್ಕಿದೆ, ಒಳ್ಳೆಯದಾಗ್ಲಿ ನಿಮ್ಮ ಭವಿಷ್ಯಕ್ಕೆ ಎಂದು ಶುಭ ಹಾರೈಸಿ ಕಾಮೆಂಟ್ ಮಾಡಿದ್ದಾರೆ. 
 

77

ಕಿರುತೆರೆಯಲ್ಲಿ ಡೆವಿಲ್ ಪಾತ್ರ ಹಿರಿತೆರೆಯಲ್ಲಿ ಗಿರಿಜಾ ಪಾತ್ರದ ಮೂಲಕ ಸದ್ದು ಮಾಡ್ತಿರೋ ಪ್ರಿಯಾ ಇದೀಗ ಬಿಗ್ ಬಾಸ್ ಸೀಸನ್ 11 ನಲ್ಲಿ ಸ್ಪರ್ಧಿಯಾಗಿ ಭಾಗವಹಿಸ್ತಿದ್ದಾರೆ ಎನ್ನುವ ಸುದ್ದಿ ಕೂಡ ಕೇಳಿ ಬರ್ತಾ ಇದೆ. ಆದ್ರೆ ಇದು ಎಷ್ಟು ನಿಜಾ, ಎಷ್ಟು ಸುಳ್ಳು ಅನ್ನೋದು ಗೊತ್ತಿಲ್ಲ. ಆದರೆ ಪ್ರಿಯಾ ಬಿಗ್ ಬಾಸ್ ಗೆ ಹೋದ್ರೆ ಟಫ್ ಕಾಂಪಿಟ್ ಮಾಡೋದಂತೂ ಗ್ಯಾರಂಟಿ ಅನ್ನೋದನ್ನ ಅವರ ಅಪಿಯರೆನ್ಸ್ ಹೇಳುತ್ತೆ. 
 

click me!

Recommended Stories