ಗಾಂಧಾರಿ, ರಾಧಾ ರಮಣ ಮತ್ತು ಶುಭ ವಿವಾಹ ಸೇರಿದಂತೆ ಹಲವು ದೊಡ್ಡ ದೊಡ್ಡ ಧಾರಾವಾಹಿಗಳಲ್ಲಿ ನಟಿಸಿರುವ ಕಿರುತೆರೆ ನಟಿ ಕಾವ್ಯಾ ಗೌಡ.
ನಟಿ ಕಾವ್ಯಾ ಗೌಡ 2024 ಜನವರಿ 22ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರತಿಷ್ಠಾಪನೆ ದಿನವೇ ಮಗು ಜನಿಸಿದೆ.
ಕೆಲವು ದಿನಗಳ ಹಿಂದೆ ಮಗಳ ಮೊದಲು ತೊಟ್ಟಿಲು ಶಾಸ್ತ್ರವನ್ನು ಮನೆಯಲ್ಲಿ ಅದ್ಧೂರಿಯಾಗಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫೋಟೋ ಹಾಕಿದ್ದಾರೆ.
'ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ. ನಿನ್ನಷ್ಟು ನೆಮ್ಮದಿಯ ಎಲ್ಲಿಹುದೋ ರಾಮ' ಎಂದು ರಾಮನ ಹಾಡಿನ ಪ್ರತಿಯೊಂದು ಸಾಲುಗಳನ್ನು ಬರೆದುಕೊಂಡಿದ್ದಾರೆ ಕಾವ್ಯಾ.
'ಫೆಬವ್ರರಿ 1, 2024ರಂದು ತೊಟ್ಟಿಲು ಶಾಸ್ತ್ರ ನಡೆದಿದೆ. ಇಲ್ಲಿಂದ ನಮ್ಮ ಜೀವನದ ಮೊದಲ ಚಾಪ್ಟರ್ ಆಫ್ ಫೇರಿ ಟೈಲ್' ಎಂದಿದ್ದಾರೆ ಕಾವ್ಯಾ ಗೌಡ.
ಕಾವ್ಯಾ ಗೌಡರ ಮಗಳಗೆ ಅಕ್ಕ ಭವ್ಯಾ ಗೌಡ ಸಿಂಪಲ್ ಫ್ರಾಕ್ ಡಿಸೈನ್ ಮಾಡಿದ್ದಾರೆ. ಬೆಳ್ಳಿ ತೊಟ್ಟಿಲಿನಲ್ಲಿ ಮಗಳನ್ನು ಮಲಗಿಸಿ ಕಾಲು ಗೆಜ್ಜಿ ದೃಷ್ಠಿ ಬಳೆ ಹಾಕಿದ್ದಾರೆ.
2021ರಲ್ಲಿ ಉದ್ಯಮಿ ಸೋಮಶೇಖರ್ ಮತ್ತು ಕಾವ್ಯಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರ ಕಾವ್ಯಾ ನಟನೆ ಲೋಕಕ್ಕೆ ಗುಡ್ ಬೈ ಹೇಳಿಬಿಟ್ಟರು.
Vaishnavi Chandrashekar